ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸುಶಾಂತ್ ಸಿಂಗ್ ಸ್ಥಾನ ತುಂಬಲು ಸಿದ್ದವಾದ ಮಹಾಭಾರತ ಪಾತ್ರದಾರಿ, ಸೂಪರ್ ಆಯ್ಕೆ ಎಂದ ಅಭಿಮಾನಿಗಳು, ಯಾರು ಗೊತ್ತೇ??

1

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಖ್ಯಾತ ನಟರಲ್ಲಿ ಒಬ್ಬರಾಗಿದ್ದ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಸುಶಾಂತ್ ಸಿಂಗ್ ರಜಪೂತ್ ರವರು ನಮ್ಮ ಜೊತೆ ಇಲ್ಲ. ಇವರು ತೆಗೆದುಕೊಂಡ ಒಂದು ತಪ್ಪು ನಿರ್ಧಾರ ಇಂದಿಗೂ ಕೂಡ ಅಭಿಮಾನಿಗಳಿಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಇದೀಗ ಇಂಟರ್ನೆಟ್ ನಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ. ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಾಜಪುತ್ ರವರು ನಟಿಸಿದ್ದು ಕೆಲವೇ ಕೆಲವು ಸಿನಿಮಾ ಗಳಾದರೂ ಕೂಡ,

ಕೆಲವೊಂದು ಮರೆಯಲಾಗದಂತಹ ಪಾತ್ರಗಳನ್ನೂ ಮಾಡಿದ್ದಾರೆ. ಈ ಪಾತ್ರಗಳನ್ನು ಇಂದಿಗೂ ಹಾಗೂ ಮುಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ ಎನ್ನುವಂತಹ ಸಹಜ ನಟನೆಯ ಮೂಲಕ ಸುಶಾಂತ್ ಸಿಂಗ್ ರಾಜಪುತ್ ರವರು ನಮ್ಮೆಲ್ಲೆರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಇನ್ನು ಹೀಗಿರುವಾಗ ಇದೀಗ ಸುಶಾಂತ್ ಸಿಂಗ್ ರಾಜಪುತ್ ರವರಿಗೆ ಬಾರಿ ಜನಪ್ರಿಯತೆಯನ್ನು ತಂದು ಕೊಟ್ಟಂತಹ ಪಾತ್ರಕ್ಕೆ ಇದೀಗ ಬೇರೆ ಕಲಾವಿದರ ಆಗಮನವಾಗಿದ್ದು, ಈ ಕಲಾವಿದ ನಮ್ಮ ಕನ್ನಡ ಕಿರುತೆರೆಯಲ್ಲಿಯೂ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ.

ಹೌದು ಸ್ನೇಹಿತರೇ, ಸುಶಾಂತ್ ಸಿಂಗ್ ರಾಜಪುತ್ ರವರಿಗೆ ಬಾರಿ ಜನಪ್ರಿಯತೆ ತಂದುಕೊಟ್ಟಿದ್ದ ಪವಿತ್ರ ರಿಶ್ತಾ ಧಾರಾಹಿಯ ಮುಂದುವರೆದ ಭಾಗವಾಗಿ ಪವಿತ್ರ ರಿಶ್ತಾ 2.0 ಧಾರವಾಹಿ ಇದೀಗ ನಿರ್ಮಾಣವಾಗುತ್ತಿದೆ. ಇನ್ನು ಈ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಸುಶಾಂತ್ ಸಿಂಗ್ ರಾಜಪುತ್ ರವರ ಪಾತ್ರಕ್ಕೆ ಮಹಾಭಾರತ ಧಾವಾಹಿಯಲ್ಲಿ ಅರ್ಜುನ ಪಾತ್ರದ ಮೂಲಕ ಗಮನ ಸೆಳೆದಿರುವ ಶಾಹೀರ್​ ಶೇಖ್ ರವರಿಗೆ ನೀಡಲಾಗಿದೆ. ಇದರಿಂದ ಬಹುತೇಕ ಸುಶಾಂತ್ ಸಿಂಗ್ ರಾಜಪುತ್ ರವರ ಅಭಿಮಾನಿಗಳು ಖುಷಿ ಪಟ್ಟಿದ್ದು ಸೂಕ್ತ ಆಯ್ಕೆ ಎಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.