21 ನೇ ಶತಮಾನದ ಶ್ರೇಷ್ಠ ಟಾಪ್ 6 ಬ್ಯಾಟ್ಸಮನ್ ಗಳನ್ನು ಹೆಸರಿಸಿದ ಆಕಾಶ್ ಚೋಪ್ರಾ, ಟಾಪ್ ಸ್ಥಾನ ಪಡೆದ ಕನ್ನಡಿಗ ಯಾರು ಗೊತ್ತೇ??
21 ನೇ ಶತಮಾನದ ಶ್ರೇಷ್ಠ ಟಾಪ್ 6 ಬ್ಯಾಟ್ಸಮನ್ ಗಳನ್ನು ಹೆಸರಿಸಿದ ಆಕಾಶ್ ಚೋಪ್ರಾ, ಟಾಪ್ ಸ್ಥಾನ ಪಡೆದ ಕನ್ನಡಿಗ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ 21ನೇ ಶತಮಾನ ಅಂತರಾಷ್ಟ್ರೀಯ ಕ್ರಿಕೇಟ್ ಜಗತ್ತಿಗೆ ಒಂದು ದೊಡ್ಡ ಕೊಡುಗೆ ನೀಡಿದ ಶತಮಾನ. ಅದೆಷ್ಟೋ ಮುರಿಯದ ದಾಖಲೆಗಳು ನಿರ್ಮಾಣವಾದವು. ಮುರಿಯಲು ಸಾಧ್ಯವೇ ಇಲ್ಲವೆಂದ ದಾಖಲೆಗಳು ಸಹ ಪುಡಿ ಪುಡಿ ಆದವು. ಕ್ರಿಕೇಟ್ ನಲ್ಲಿ ಸಾಕಷ್ಟು ನೀರು ಹರಿದು ಹಲವಾರು ಪ್ರತಿಭಾವಂತ, ವಿಶ್ವ ಶ್ರೇಷ್ಠ ಕ್ರಿಕೇಟಿಗರು, ವಿಶ್ವ ಶ್ರೇಷ್ಠ ತಂಡಗಳು ಸಹ ಹುಟ್ಟಿಕೊಂಡವು. ಹೊಸ ಪ್ರಕಾರದ ಕ್ರಿಕೇಟ್ ಮ್ಯಾಚ್ ಗಳು ಸಹ ಜನಪ್ರಿಯಗೊಂಡವು.
ಸದ್ಯ ಭಾರತ ತಂಡದ ಮಾಜಿ ಆರಂಭಿಕ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಈ ಬಗ್ಗೆ ಈಗ 21 ನೇ ಶತಮಾನದ ವಿಶ್ವ ಶ್ರೇಷ್ಠ ಟೆಸ್ಟ್ ಬ್ಯಾಟ್ಸಮನ್ ರನ್ನು ಹೆಸರಿಸಿದ್ದಾರೆ. ಭಾರತದ ಪರ ಹಲವಾರು ಟೆಸ್ಟ್ ಆಡಿರುವ ಚೋಪ್ರಾ ಈಗ 21 ನೇ ಶತಮಾನದ ವಿಶ್ವ ಶ್ರೇಷ್ಠ ಟಾಪ್ -6 ಬ್ಯಾಟ್ಸಮನ್ ಗಳನ್ನು ಹೆಸರಿಸಿದ್ದಾರೆ. ಚೋಪ್ರಾ ಅವರ ಲಿಸ್ಟ್ ನಲ್ಲಿ ವಿರಾಟ್ ಕೋಹ್ಲಿ, ಕೇನ್ ವಿಲಿಯಮ್ಸನ್, ಜೋ ರೂಟ್, ಸ್ಟೀವ್ ಸ್ಮಿತ್ ರಂತಹ ಆಟಗಾರರು ಸ್ಥಾನ ಪಡೆಯದಿರುವುದು ವಿಶೇಷ. ಸದ್ಯ ಚೋಪ್ರಾ ರವರ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರರ ಹೆಸರು ಈ ಕೆಳಗಿನಂತಿವೆ.
ಟಾಪ್ 6 ನೇ ಸ್ಥಾನದಲ್ಲಿ ಕುಮಾರ ಸಂಗಕ್ಕಾರ, ಈ ಶ್ರೀಲಂಕಾದ ಬ್ಯಾಟ್ಸಮನ್ ದಶಕಗಳ ಕಾಲ ಶ್ರೀಲಂಕಾದ ಆಧಾರ ಸ್ತಂಭವಾಗಿದ್ದರು. ಇನ್ನು ಟಾಪ್ 5 ನೇ ಸ್ಥಾನದಲ್ಲಿ ಆಲೆಸ್ಟರ್ ಕುಕ್, ಇಂಗ್ಲೆಂಡ್ ನ ಈ ಕಲಾತ್ಮಕ ಶೈಲಿಯ ಬ್ಯಾಟ್ಸಮನ್ , ಐದನೇ ಸ್ಥಾನದಲ್ಲಿದ್ದಾರೆ. ಟಾಪ್ 4 ನೇ ಸ್ಥಾನದಲ್ಲಿ ಜಾಕ್ ಕಾಲಿಸ್, ವಿಶ್ವ ಕಂಡ ಶ್ರೇಷ್ಠ ಆಲ್ ರೌಂಡರ್, ದಕ್ಷಿಣ ಆಫ್ರಿಕಾದ ಆಧಾರ ಸ್ತಂಭವಾಗಿದ್ದರು. ಟಾಪ್ 3 ನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ – ಆಸ್ಟ್ರೇಲಿಯಾ ತಂಡಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಟಾಪ್ 2 ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್, ಕ್ರಿಕೇಟ್ ದಂತಕತೆ, ದಾಖಲೆಗಳ ಸರದಾರ ಸಚಿನ್ ರವರಿಗೆ ಚೋಪ್ರಾ ಏರಡನೇ ಸ್ಥಾನ ನೀಡಿದ್ದಾರೆ. ಇನ್ನು ಟಾಪ್ ಮೊದಲನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ – ದಿ ವಾಲ್ ಖ್ಯಾತಿಯ , ಕಲಾತ್ಮಕ ಶೈಲಿಯ ಬ್ಯಾಟ್ಸಮನ್ ರಾಹುಲ್ ದ್ರಾವಿಡ್ ಗೆ ಮೊದಲ ಸ್ಥಾನ ನೀಡಿದ್ದಾರೆ. ಈ ಲಿಸ್ಟ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.