ಶುರುವಾಯಿತು ಮತ್ತೆ ಮುಂಬೈ ಲಾಬಿ, ಕನ್ನಡಿಗರ ಪರ ನಿಂತ ಕಪಿಲ್ ದೇವ್ ಹೇಳಿದ್ದೇನು ಗೊತ್ತಾ??

ಶುರುವಾಯಿತು ಮತ್ತೆ ಮುಂಬೈ ಲಾಬಿ, ಕನ್ನಡಿಗರ ಪರ ನಿಂತ ಕಪಿಲ್ ದೇವ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಸೋತ ನಂತರ ಹಲವಾರು ವಿಮರ್ಷೆಗಳಲ್ಲಿ ಆರಂಭಿಕ ಬ್ಯಾಟ್ಸಮನ್ ಗಳ ವೈಫಲ್ಯದ ಬಗ್ಗೆ ಚರ್ಚೆ ಆಯಿತು. ತಜ್ಞ ಆರಂಭಿಕ ಬ್ಯಾಟ್ಸಮನ್ ಗಳಾಗಿದ್ದ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ರನ್ನ ಆಡುವ 11 ರ ಬಳಗದಲ್ಲಿ ಸೇರಿಸದೇ ಇರುವುದು ಸಹ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿತ್ತು.

ಈಗ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ಸಹ ಆರಂಭಿಕ ಶುಭಮಾನ್ ಗಿಲ್ ಇಂಜುರಿ ಸಮಸ್ಯೆಯಿಂದ ಹೊರಗುಳಿಯಲಿದ್ದಾರೆ. ಈಗಲಾದರೂ ತಂಡದಲ್ಲಿ ಆರಂಭಿಕರೆಂದು ಸ್ಥಾನ ಪಡೆದಿದ್ದ ಮಯಾಂಕ್ ಹಾಗೂ ರಾಹುಲ್ ಗೆ ಆಡುವ 11 ರ ಬಳಗದಲ್ಲಿ ಸ್ಥಾನ ಸಿಗಲಿದೆ ಎಂದು ನಂಬಲಾಗಿತ್ತು. ಆದರೇ ಈಗ ಆರಂಭಿಕರಾಗಿ ಮುಂಬೈ ನ ಪೃಥ್ವಿ ಶಾ ರನ್ನ ಕರೆಸಿಕೊಳ್ಳಲು ಬಿಸಿಸಿಐ ಯೋಚಿಸುತ್ತಿದೆ ಎಂಬ ಅಂಶ ಹೊರಬಿದ್ದಿದೆ.

ಬಿಸಿಸಿಐ ನ ಈ ಯೋಚನೆಗೆ ಮಾಜಿ ನಾಯಕ ಕಪಿಲ್ ದೇವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ 20 ಆಟಗಾರರನ್ನು ಸೇರಿಸಿಕೊಳ್ಳುವ ವೇಳೆಯಲ್ಲಿ ವಿರಾಟ್ ಹಾಗೂ ರವಿಶಾಸ್ತ್ರಿಯವರ ಗಮನಕ್ಕೆ ತಂದು ಆಯ್ಕೆ ಮಾಡಲಾಗಿರುತ್ತದೆ. ಆದರೇ ಈಗ ಯಾರೋ ಒಬ್ಬರು ಇಂಜುರಿ ತುತ್ತಾದರೇ ಅವರ ಬದಲು ತಂಡದಲ್ಲಿರುವವರಿಗೆ ಅವಕಾಶ ಕೊಡದೇ, ಬೇರೆಯ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಿರೆಂದರೇ, ನಿಮಗೆ ಆ 20 ಆಟಗಾರರ ಮೇಲೆ ವಿಶ್ವಾಸವಿಲ್ಲವೆಂದಾಯಿತು. ಪ್ರತಿಭಾವಂತ ಬ್ಯಾಟ್ಸಮನ್ ಗಳಾದ ಮಯಾಂಕ್ ಹಾಗೂ ರಾಹುಲ್ ರನ್ನ ಇನ್ನು ಎಷ್ಟು ದಿನಗಳ ಕಾಲ ಬೆಂಚು ಕಾಯಿಸುತ್ತಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಯಾಂಕ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಎರಡು ಇನ್ನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿದ್ದರು. ಆದರೇ ಶುಭಮಾನ್ ಗಿಲ್, ಇಂಗ್ಲೆಂಡ್ ಸರಣಿಯಲ್ಲಿ ಹಲವಾರು ಭಾರಿ ಶೂನ್ಯ ಸುತ್ತಿದರೂ ಅವರಿಗೆ ಮರಳಿ ಅವಕಾಶ ನೀಡಲಾಯಿತು. ರಾಹುಲ್ ಟೆಸ್ಟ್ ಕ್ರಿಕೇಟ್ ಆಡದೇ ಎರಡು ವರ್ಷಗಳಾಗುತ್ತಾ ಬಂದಿದೆ. ಇಂತಹ ಬ್ಯಾಟ್ಸಮನ್ ಗಳು ತಂಡದಲ್ಲಿದ್ದರೂ, ಅವರನ್ನ ಬೆಂಚು ಕಾಯುವಂತೆ ಮಾಡಿ, ಅನನುಭವಿಗಳಿಗೆ ಮಹತ್ವದ ಟೂರ್ನಿಗಳಲ್ಲಿ, ಮಹತ್ತರ ಜವಾಬ್ದಾರಿಯನ್ನ ಹೇಗೆ ನೀಡುತ್ತಿರಿ ಎಂದು ಕೇಳಿದ್ದಾರೆ. ಪೃಥ್ವಿ ಶಾ, ರಾಹುಲ್ ,ಮಯಾಂಕ್ ಗಿಂತಲೂ ಉತ್ತಮ ಆಟಗಾರನೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐ ಮುಂಬೈ ಲಾಭಿಗೆ ಮಣಿಯುತ್ತಿದೆಯಾ ಎಂಬ ಪ್ರಶ್ನೆ ಬುಗಿಲೇಳುತ್ತಿದೆ. ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.