ತಂಡದಲ್ಲಿ ಕೊಹ್ಲಿ ಹವಾ ಮುಗಿಯಿತೇ?? ತಾನೇ ಅಂತ್ಯಗೊಳಿಸಿದ್ದ ಮುಂಬೈ ಲಾಬಿಗೆ ತಲೆಬಾಗಬೇಕಾದ ಪರಿಸ್ಥಿತಿ ಬಂದೇ ಬಿಟ್ಟಿತೇ??

ತಂಡದಲ್ಲಿ ಕೊಹ್ಲಿ ಹವಾ ಮುಗಿಯಿತೇ?? ತಾನೇ ಅಂತ್ಯಗೊಳಿಸಿದ್ದ ಮುಂಬೈ ಲಾಬಿಗೆ ತಲೆಬಾಗಬೇಕಾದ ಪರಿಸ್ಥಿತಿ ಬಂದೇ ಬಿಟ್ಟಿತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅನಧಿಕೃತವಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಹಲವಾರು ವರ್ಷಗಳಿಂದ ಮುಂಬೈ ಲಾಬಿ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಹೌದು ಸ್ನೇಹಿತರೆ ಅನಧಿಕೃತವಾಗಿ ಹಲವಾರು ವರ್ಷಗಳಿಂದ ಮುಂಬೈ ನಗರದಿಂದ ಅಥವಾ ಮುಂಬಯಿನಲ್ಲಿ ಆಟವಾಡಲು ಅವಕಾಶ ಪಡೆದರೆ ಕೊಂಚ ಉತ್ತಮ ಪ್ರದರ್ಶನ ನೀಡಿದರೂ ಸಾಕು ಭಾರತ ತಂಡದಲ್ಲಿ ಬಹಳ ಸುಲಭವಾಗಿ ಸ್ಥಾನ ಪಡೆಯಬಹುದು ಹಾಗೂ ಪ್ರಮುಖವಾಗಿ ಮುಂಬೈ ನಗರದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಮಾತುಗಳು ಗಣನೀಯ ಪ್ರಮಾಣದಲ್ಲಿ ಕೇಳಿ ಬರುತ್ತಿವೆ.

ಇನ್ನು ಒಮ್ಮೆ ತಂಡಕ್ಕೆ ಆಯ್ಕೆಯಾದರೆ ಎಷ್ಟು ಬಾರಿ ವಿಫಲವಾದರೂ ಕೂಡ ಸಾಧ್ಯವಾದಷ್ಟು ಅವರಿಗೆ ಅವಕಾಶಗಳನ್ನು ನೀಡಿ ಉತ್ತೇಜನ ನೀಡಲಾಗುವುದು ಎಂಬ ಮಾತುಗಳು ಹಲವಾರು ವರ್ಷಗಳಿಂದ ಚರ್ಚೆಯಲ್ಲಿವೆ. ಆದರೆ ವಿರಾಟ್ ಕೊಹ್ಲಿ ರವರು ನಾಯಕನಾದ ಮೇಲೆ ಮುಂಬೈ ಲಾಬಿಗೆ ಅಕ್ಷರಸಹ ಬ್ರೇಕ್ ಹಾಕಿದ್ದರು, ಹೌದು ಒಂದು ಕಾಲದಲ್ಲಿ ಮುಂಬೈ ಲಾಬಿಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆಟಗಾರರು ಅವಕಾಶ ಪಡೆಯುತ್ತಿರಲಿಲ್ಲ, ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಕೂಡ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲ.

ಆದರೆ ಒಮ್ಮೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ ಮೇಲೆ ಪ್ರತಿಯೊಂದು ರಾಜ್ಯಗಳಿಗೂ ಸಮಾನ ಅವಕಾಶ ನೀಡಲು ಆರಂಭಿಸಿದರು, ಇದಕ್ಕೆ ಹಲವಾರು ಉದಾಹರಣೆಗಳು ಇದ್ದರೂ ಕೂಡ ಅತಿ ಸ್ಪಷ್ಟವಾದ ಉದಾಹರಣೆ ಎಂದರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್. ರಾಬಿನ್ ಉತ್ತಪ್ಪ ಮನೀಶ್ ಪಾಂಡೆ ಸೇರಿದಂತೆ ಹಲವಾರು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ರಾಹುಲ್ ಅವರು ಕೂಡ ಭಾರತ ತಂಡದಲ್ಲಿ ಕಾಲ ಸ್ಥಾನ ಪಡೆಯಲು ಸಾಧ್ಯವೇ ಇಲ್ಲ ಎಂಬಂತಾಗಿತ್ತು.

ಆದರೆ ರಾಹುಲ್ ರವರ ಸಂಪೂರ್ಣ ಶಕ್ತಿಯನ್ನು ಅರಿತಿದ್ದ ವಿರಾಟ್ ಕೊಹ್ಲಿ ರವರು ಕೆ ಎಲ್ ರಾಹುಲ್ ರವರಿಗೆ ಸಾಲು ಸಾಲು ಅವಕಾಶಗಳನ್ನು ನೀಡಿದರು ಹಾಗೂ ಹೀಗೆ ಅವಕಾಶಗಳು ನೀಡಿರುವ ಕಾರಣ ಇಂದು ರಾಹುಲ್ ರವರು ಭರವಸೆಯ ಬ್ಯಾಟ್ಸ್ಮನ್ ಆಗಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ರವರು ಐಸಿಸಿ ಟ್ರೋಫಿಯನ್ನು ಗೆಲ್ಲದೇ ಇರುವ ಕಾರಣ ಹಾಗೂ ಇತ್ತೀಚಿಗೆ ಫೈನಲ್ ಪಂದ್ಯದಲ್ಲಿ ಸೋತಿರುವುದನ್ನು ಅಸ್ತ್ರವಾಗಿ ಪರಿಗಣಿಸಿರುವ ಮುಂಬಯಿ ಲಾಬಿ ಮಾಡುವ ಕ್ರಿಕೆಟ್ ವಿಶ್ಲೇಷಕರು ಹಾಗೂ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳು ವಿರಾಟ್ ಕೊಹ್ಲಿ ರವರು ತಡೆದಿರುವ ಮುಂಬೈ ಲಾಬಿಯನ್ನು ಮತ್ತೊಮ್ಮೆ ನಡೆಸಲು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಇನ್ನು ಮುಂದಿನ ವಿಶ್ವಕಪ್ ನವರಿಗೂ ಆಟವಾಡುವ ಅವಕಾಶವಿಲ್ಲದ ರೋಹಿತ್ ಶರ್ಮ ರವರನ್ನು ನಾಯಕನನ್ನಾಗಿ ಮಾಡುವುದು ಹಾಗೂ ಮುಂಬೈ ನಗರದ ಸಂಬಂಧ ಹೊಂದಿರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದರ ಕುರಿತು ಹೆಚ್ಚಿನ ಚರ್ಚೆಗಳು ಈಗ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಎಂದರೆ ಕೆ ಲ್ ರಾಹುಲ್ ರವರು ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದರೂ ಕೂಡ ಶುಭಮ್ ಗಿಲ್ ರವರು ಹೊರಗಿರುವ ಸಮಯದಲ್ಲಿ

ಪೃಥ್ವಿ ಶಾ ರವರನ್ನು ಇಂಗ್ಲೆಂಡ ದೇಶಕ್ಕೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಆದರೆ ವಿರಾಟ್ ಕೊಹ್ಲಿ ರವರು ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಇಚ್ಛೆ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ವಿರಾಟ್ ಕೊಹ್ಲಿ ರವರು ಆಯ್ಕೆ ಸಮಿತಿಯ ಕನಿಷ್ಠ ಸದಸ್ಯರ ಬೆಂಬಲವಿಲ್ಲದೆ ಕೆ ಲ್ ರಾಹುಲ್ ರವರು ಇಂಗ್ಲೆಂಡ್ಗೆ ತೆಗೆದುಕೊಂಡು ಹೋಗಬೇಕಾದರೆ ಅದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲಿಯೂ ಫೈನಲ್ ಟೆಸ್ಟ್ ಪಂದ್ಯವನ್ನು ಸೋತಿರುವುದನ್ನು ಕಾರಣವಾಗಿಟ್ಟುಕೊಂಡು ಮೇಜರ್ ಸರ್ಜರಿ ಎಂಬ ಮಾತಿನಿಂದ ವಿರಾಟ್ ಕೊಹ್ಲಿ ರವರ ವಿರುದ್ಧ ಸಾಕಷ್ಟು ಮುಂಬೈ ಲಾಬಿ ನಡೆಯುತ್ತಿರುವುದು ಇದೀಗ ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ರವರು ಮುಂಬೈ ಇಲಾಖೆಯನ್ನು ಎಷ್ಟರಮಟ್ಟಿಗೆ ಅಂತ್ಯಗೊಳಿಸಿದ್ದರು ಎಂದರೆ, ಕೆಲವೇ ತಿಂಗಳು ಗಳ ಹಿಂದೆ ಕರ್ನಾಟಕದಿಂದ ಬರೋಬ್ಬರಿ 6 ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು,. ಆದರೆ ಇಂದು ಅದೇ ಲಾಬಿ ವಿರಾಟ್ ರವರನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ.