ಶುಭಮ್ ಹೊರಬಂದ ಬೆನ್ನಲ್ಲೇ ಗರಿಗೆದರಿದ ಲೆಕ್ಕಾಚಾರ, ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡು ವಾಸಿಂ ಹೇಳಿದ್ದೇನು ಗೊತ್ತಾ??

ಶುಭಮ್ ಹೊರಬಂದ ಬೆನ್ನಲ್ಲೇ ಗರಿಗೆದರಿದ ಲೆಕ್ಕಾಚಾರ, ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡು ವಾಸಿಂ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನಂತರ ಭಾರತ ತಂಡದಲ್ಲಿ ಬದಲಾವಣೆಗಳ ಚರ್ಚೆ ಜೋರಾಗಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ದ ನಡೆಯುವ ಐದು ಟೆಸ್ಟ್ ಗಳ ಸರಣಿಯಲ್ಲಿ ತಂಡದ ಸಂಯೋಜನೆಯಲ್ಲಿ ಮಹತ್ತರ ಬದಲಾವಣೆಗಳ ನೀರಿಕ್ಷೆ ಇದೆ. ಈ ಮಧ್ಯೆ ಆರಂಭಿಕ ಶುಭಮಾನ್ ಗಿಲ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ತಮಿಳುನಾಡಿನ ಆರಂಭಿಕ ಬ್ಯಾಟ್ಸಮನ್ ಅಭಿಮನ್ಯು ಈಶ್ವರನ್ ತಂಡ ಕೂಡಿಕೊಂಡಿದ್ದಾರೆ.

ಈ ಮಧ್ಯೆ ಮಾಜಿ ಆರಂಭಿಕ ವಾಸಿಂ ಜಾಫರ್, ಭಾರತ ತಂಡದ ಆರಂಭಿಕರು ಯಾರಾಗಬೇಕೆಂದು ಹೇಳಿಕೊಂಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಮಾತನಾಡಿರುವ ವಾಸಿಂ ಜಾಫರ್ ಭಾರತ ತಂಡದ ಬ್ಯಾಟಿಂಗ್ ದೌರ್ಬಲ್ಯಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಜಾಫರ್ ಪ್ರಕಾರ ಆರಂಭಿಕರಾಗಿ ರೋಹಿತ್ ಜೊತೆ ಮಯಾಂಕ್ ಇನ್ನಿಂಗ್ಸ್ ಆರಂಭಿಸಬೇಕು. ಕೇವಲ ಒಂದೆರೆಡು ಇನ್ನಿಂಗ್ಸ್ ಗಳ ಆಧಾರದ ಮೇಲೆ ಮಯಾಂಕ್ ಸಾಮರ್ಥ್ಯವನ್ನ ಕಡೆಗಾಣಿಸಬೇಡಿ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕದ ಬ್ಯಾಟ್ಸಮನ್ ಕೆ.ಎಲ್.ರಾಹುಲ್ ರನ್ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಿ ಎಂಬ ಸಲಹೆ ನೀಡಿದ್ದಾರೆ. 7 ಬ್ಯಾಟ್ಸಮನ್, ನಾಲ್ವರು ಬೌಲರ್ ಜೊತೆ ಹೋಗುವುದು ಉತ್ತಮ ಎಂದು ವಾಸಿಂ ಜಾಫರ್ ತಿಳಿಸಿದ್ದಾರೆ. ಒಂದು ವೇಳೆ ಪೂಜಾರ ನಿರಂತರವಾಗಿ ವೈಫಲ್ಯ ಎದುರಿಸಿದರೇ, ಪೂಜಾರ ಜಾಗದಲ್ಲಿ ಕೆ.ಎಲ್.ರಾಹುಲ್ ಉತ್ತಮ ರಿಪ್ಲೇಸಬಲ್ ಆಟಗಾರ ಎಂದು ಹೇಳಿದರು.ರೋಹಿತ್,ಕೊಹ್ಲಿ,ರಹಾನೆ ಬ್ಯಾಟಿನಿಂದ ಸಹ ದೊಡ್ಡ ಮೊತ್ತ ಬಂದರೇ ಮಾತ್ರ ಭಾರತ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯ ಎಂದು ಹೇಳಿದರು. ನಿಮ್ಮ ಪ್ರಕಾರ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಯಾರು ಇನ್ನಿಂಗ್ಸ್ ಆರಂಭಿಸಬೇಕೆಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.