ಕ್ಯಾಪ್ಟನ್ ಆದ ಬೆನ್ನಲ್ಲೇ ದಿವ್ಯ ಅರವಿಂದ್ ಗೆ ಬಿಗ್ ಶಾಕ್, ಮಂಜು ಹಾಗೂ ವೈಷ್ಣವಿ ರವರಿಗೆ ಭರ್ಜರಿ ಸಿಹಿ ಸುದ್ದಿ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲವೂ ಕೂಡ ಬದಲಾದಂತೆ ಕಾಣುತ್ತಿದೆ. ಪ್ರತಿ ಸ್ಪರ್ದಿಗಳು ಲೆಕ್ಕಾಚಾರದ ಮೂಲಕ ಆಟವಾಡುತ್ತಿರುವುದು ನಿಮಗೆಲ್ಲರಿಗೂ ಗಮನಕ್ಕೆ ಬಂದೆ ಇರುತ್ತದೆ. ಯಾಕೆಂದರೆ ಹೊರಗಿನ ಪ್ರೇಕ್ಷಕರ ಅಭಿಪ್ರಾಯ ಹೇಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೇ. ಅದೇ ಕಾರಣಕ್ಕೆ ಪ್ರೇಕ್ಷರಿಂದ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿ ಬಂದ ಎಲ್ಲ ವಿಚಾರಗಳನ್ನು ಸರಿ ಪಡಿಸಿಕೊಂಡು ಆಟವಾಡುತ್ತಿದ್ದಾರೆ. ಹೀಗೆ ಲೆಕ್ಕಾಚಾರಗಳ ಆಟಗಳ ನಡುವೆ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯ ಉರುದುಗರವರು ಆಯ್ಕೆಯಾದ ಬೆನ್ನಲ್ಲೇ ಕಹಿ ಸುದ್ದಿ ಅವರನ್ನು ಹುಡುಕಿಕೊಂಡು ಬಂದಿದೆ.

ಅಷ್ಟೇ ಅಲ್ಲದೆ, ಅರವಿಂದ್ ರವರಿಗೂ ಕೂಡ ಕಹಿ ಸುದ್ದಿ ಇದಾಗಿದ್ದು, ಅದೇ ಸಮಯದಲ್ಲಿ ಈ ಸುದ್ದಿ ಮಂಜು ಹಾಗೂ ವೈಷ್ಣವಿ ರವರಿಗೆ ಸಿಹಿಯಾಗಿದೆ. ಏನಪ್ಪಾ ಅದು ಅಂತೀರಾ. ಬನ್ನಿ ತಿಳಿಸುತ್ತೇವೆ. ಸ್ನೇಹಿತರೇ, ಮೊದಲಿಂದಲೂ ಅರವಿಂದ್, ಮಂಜು ಹಾಗೂ ದಿವ್ಯ ಉರುದುಗ ರವರು ಕೊನೆಯ ಮೂರು ಸ್ಪರ್ದಿಗಳಾಗಿರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹಾಗೂ ಕೊನೆಯಲ್ಲಿ ಅರವಿಂದ್ ಹಾಗೂ ಮಂಜು ರವರು ಉಳಿದುಕೊಳ್ಳುತ್ತಾರೆ, ಇವರಿಬ್ಬರಲ್ಲಿ ಒಬ್ಬರು ಫೈನಲ್ ಗೆಲ್ಲುತ್ತಾರೆ ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.

ಆದರೆ ಅರವಿಂದ್ ಹಾಗೂ ದಿವ್ಯ ರವರು ಇದೀಗ ಆಟ ಮರೆತು ಸಂಪೂರ್ಣವಾಗಿ ತಮ್ಮದೇ ಆದ ಲೋಕದಲ್ಲಿ ಕಳೆದುಹೋಗಿದ್ದಾರೆ. ಇವರರಿಬ್ಬರ ನಡುವಿನ ಸನ್ನಿವೇಶಗಳು ಪ್ರೇಕ್ಷಕರಿಗೆ ಮೊದಲು ಬಾರಿ ಇಷ್ಟವಾಗಿತ್ತು. ಆದರೆ ಅದು ಕ್ರಮೇಣ ಹೆಚ್ಚಾದಂತೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದರಿಂದ ಮಂಜು ರವರಿಗೆ ಪೈಪೋಟಿ ಇಲ್ಲ ಎಂದು ಕೊಳ್ಳುವಷ್ಟರಲ್ಲಿ ಅಂದಿಗೂ ಇಂದಿಗೂ ಒಂದೇ ರೀತಿ ಇರುವ ವೈಷ್ಣವಿ ರವರು ಹೆಚ್ಚಿನ ಜನರ ಮನ ಗೆಲ್ಲುತ್ತಿದ್ದಾರೆ. ಇದರಿಂದ ಈಗ ಫೈನಲ್ ಲೆಕ್ಕಾಚಾರಗಳು ಕೂಡ ಬದಲಾಗುತ್ತಿದ್ದು, ಮಂಜು ಹಾಗೂ ವೈಷ್ಣವಿ ಫೈನಲ್ ತಲುಪಿಯೇ ತೀರುತ್ತಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav