ವಿಡಿಯೋ: ರಕ್ಷಿತ್ ಶೆಟ್ಟಿ, ಖಾಸಗಿ ವಾಹಿನಿ ವಿರುದ್ಧ ಅಸಮಾಧಾನಗೊಳ್ಳಲು ಕಾರಣವಾದ ಆ ವಿಡಿಯೋ ನೋಡಿದ್ದೀರಾ???
ವಿಡಿಯೋ: ರಕ್ಷಿತ್ ಶೆಟ್ಟಿ, ಖಾಸಗಿ ವಾಹಿನಿ ವಿರುದ್ಧ ಅಸಮಾಧಾನಗೊಳ್ಳಲು ಕಾರಣವಾದ ಆ ವಿಡಿಯೋ ನೋಡಿದ್ದೀರಾ???
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡದ ಖಾಸಗಿ ವಾಹಿನಿ ಹಾಗೂ ರಕ್ಷಿತ್ ಶೆಟ್ಟಿ ರವರ ನಡುವಿನ ಮಾತುಗಳು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸುತ್ತಿವೆ. ರಕ್ಷಿತ್ ಶೆಟ್ಟಿ ರವರು ನೇರವಾಗಿ ಕನ್ನಡದ ಖಾಸಗಿ ವಾಹಿನಿಯ ವಿರುದ್ದ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ಹತ್ತು ದಿನಗಳ ನಂತರ ಉತ್ತರ ನೀಡುತ್ತನೆ, ಹತ್ತು ದಿನಗಳ ಕಾಲಾವಕಾಶ ಯಾಕೆ ಎಂದರೇ,
ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಂಡಿದ್ದಾರೆ. ನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು news channel. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ ಎಂದು ಬರೆದುಕೊಂಡು ಲೆಟರ್ ಒಂದನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖತಾಯೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗಿದ್ದರೆ ಇಷ್ಟೆಲ್ಲ ಚರ್ಚೆ ಸೃಷ್ಟಿಸುತ್ತಿರುವ ಅದೆಂತಹ ವಿಷಯವನ್ನು ಕನ್ನಡದ ಖಾಸಗಿ ವಾಹಿನಿ ಪ್ರಸಾರ ಮಾಡಿದೆ?? ಅಸಲಿಗೆ ರಕ್ಷಿತ್ ಶೆಟ್ಟಿ ರವರು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಕಾರಣವಾಗಿರುವ ಆ ವಿಷಯದ ಪ್ರಸಾರದ ವಿಡಿಯೋ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಕೆಳಗಡೆ ಲಗತ್ತಿಸಲಾಗಿರುವ ವಿಡಿಯೋ ನೋಡಿ, ಹಾಗೂ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.