ಪ್ರಿಯಾಂಕಾ ಚೋಪ್ರಾ, ವಿರಾಟ್ ಕೊಹ್ಲಿ ರವರು ಕೇವಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಎಷ್ಟು ಹಣ ಪಡೆಯುತ್ತಾರೆ ಗೊತ್ತಾ??
ಪ್ರಿಯಾಂಕಾ ಚೋಪ್ರಾ, ವಿರಾಟ್ ಕೊಹ್ಲಿ ರವರು ಕೇವಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಎಷ್ಟು ಹಣ ಪಡೆಯುತ್ತಾರೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇರೋದು ಹಾಗೂ ನೀವು ಅವರನ್ನು ಫಾಲೋ ಮಾಡೋದು ಎಲ್ಲ ಗೊತ್ತೇ ಇದೆ. ಆದರೆ ನಿಮಗೊಂದು ವಿಷಯ ಗೊತ್ತಾ ಸ್ನೇಹಿತರೆ ನಿಮ್ಮ ನೆಚ್ಚಿನ ನಟ ನಟಿ ಹಾಗು ಕ್ರೀಡಾಪಟುಗಳು ಅಥವಾ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ನಿಮ್ಮ ಜೊತೆ ಸಂವಹನ ಮಾಡಲು ಮಾತ್ರವಲ್ಲದೆ ಅಲ್ಲಿ ಬ್ರ್ಯಾಂಡ್ ಗಳ ಪ್ರಮೋಷನ್ ಗಾಗಿ ಹಾಗೂ ಅವರು ಹಾಕುವ ಪೋಸ್ಟ್ ಗಳಿಗೆ ಹಲವಾರು ಹಣ ಕೂಡ ಪಡೆಯುತ್ತಾರೆ. ಹೌದು ಸ್ನೇಹಿತರೆ ಈ ವಿಷಯ ನಿಮ್ಮಲ್ಲಿ ಕೆಲವರಿಗೆ ಗೊತ್ತಿಲ್ಲದೆ ಇರಬಹುದು ಇಂದು ನಾವು ಹೇಳುವ ವಿಷಯದಲ್ಲಿ ಈ ಕುರಿತಂತೆ ನಿಮಗೆ ಸಂಪೂರ್ಣವಾಗಿ ಹೇಳುತ್ತೇವೆ ಬನ್ನಿ.
ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ನೆಚ್ಚಿನ ಚಳವಳಿಗಳು ಸಾಕಷ್ಟು ಲಕ್ಷ ಹಾಗೂ ಕೋಟ್ಯಂತರ ಮಂದಿ ಫಾಲವರ್ಸ್ ಗಳನ್ನು ಹೊಂದಿರುತ್ತಾರೆ. ಈ ಸೆಲೆಬ್ರಿಟಿಗಳನ್ನು ಕೆಲವರು ಕೆಲವು ಪ್ರಾಡಕ್ಟ್ ನ ಡಿಜಿಟಲ್ ಮ್ಯಾನೇಜರ್ಗಳು ಸಂಪರ್ಕಿಸಿ ಅವರ ವಸ್ತುಗಳನ್ನು ಸಾಮಾಜಿಕ ಜಾಲತಾಣಗಳು ಪ್ರಮೋಷನ್ ಮಾಡುವಂತೆ ಕೇಳಿಕೊಳ್ಳುತ್ತಾರೆ ಹಾಗೂ ಇದಕ್ಕಾಗಿ ಅವರು ಸಾಕಷ್ಟು ಹಣವನ್ನು ಕೂಡ ಸಂಭಾವನೆಯಾಗಿ ನೀಡುತ್ತಾರೆ. ಕೆಲ ಚಿಕ್ಕ-ಚಿಕ್ಕ ಮೊತ್ತದ ಫಾಲವರ್ಸ್ ಗಳನ್ನು ಹೊಂದಿರುವ ಸೆಲೆಬ್ರಿಟಿಗಳಿಗೆ ಕೇವಲ ಒಂದು ಟೈಮ್ ಪೇಮೆಂಟ್ ಮಾಡುವ ಮೂಲಕ ಪ್ರಮೋಷನ್ ನೀಡಿದರೆ ಇನ್ನು ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಕಾಂಟ್ರಾಕ್ಟ್ ಮೂಲಕ ಪ್ರಮೋಷನ್ ನೀಡಿ ಸಂಭಾವನೆಗೆ ಅವರನ್ನು ಸೈನ್ ಹಾಕುವಂತೆ ಮಾಡುತ್ತಾರೆ. ಇತ್ತೀಚಿಗಷ್ಟೇ ಪ್ರಪಂಚದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಮಾಡುವ ಮೂಲಕ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನೂರು ಸೆಲೆಬ್ರಿಟಿಗಳ ಲಿಸ್ಟನ್ನು ಒಂದು ಸಂಸ್ಥೆ ಬಿಡುಗಡೆ ಮಾಡಿದೆ. ಬನ್ನಿ ಲಿಸ್ಟ್ ನಲ್ಲಿರುವ ಕೆಲ ಸೆಲಬ್ರಿಟಿ ಗಳ ಕುರಿತಂತೆ ನಾವು ನಿಮಗೆ ವಿವರವಾಗಿ ನೀಡುತ್ತೇವೆ.
ಪ್ರಿಯಾಂಕ ಚೋಪ್ರಾ ಬಾಲಿವುಡ್ ನ ಖ್ಯಾತ ನಟಿ ಆಗಿರುವ ಪ್ರಿಯಾಂಕ ಈಗಾಗಲೇ ಅಮೇರಿಕನ್ ಮೂಲದ ಖ್ಯಾತ ನಟ ಹಾಗೂ ಗಾಯಕ ರವರನ್ನು ಮದುವೆಯಾಗಿರುವುದು ನಿಮಗೆ ಗೊತ್ತಿದೆ. ವಯಸ್ಸಿನಲ್ಲಿ ಸಾಕಷ್ಟು ಅಂತರವಿದ್ದರೂ ವಯಸ್ಸು ಇವರಿಬ್ಬರ ನಡುವಿನ ಪ್ರೀತಿಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ. ನೀನು ಒಂದು ಪೋಸ್ಟ್ ಗಾಗಿ ಅತ್ಯಂತ ಹಣ ತೆಗೆದುಕೊಳ್ಳುವ ಪಟ್ಟಿಯಲ್ಲಿ ಪ್ರಿಯಾಂಕ ಚೋಪ್ರಾ ರವರಿಗೆ 27ನೇ ಸ್ಥಾನವಿದೆ. ಇನ್ನು ಇವರು ಹಾಕುವ ಪ್ರತಿ ಪ್ರಮೋಷನಲ್ ಪೋಸ್ಟ್ಗೆ ಬರೋಬ್ಬರಿ 3 ಕೋಟಿ ಸಂಪಾದನೆಯನ್ನು ಮಾಡುತ್ತಾರೆ.
ವಿರಾಟ್ ಕೊಹ್ಲಿ ತನ್ನ ಸ್ವ ಪರಿಶ್ರಮದಿಂದ ಭಾರತ ತಂಡಕ್ಕೆ ಆಯ್ಕೆಯಾಗಿ ಈಗ ಭಾರತ ತಂಡದ ಕಪ್ತಾನನಾಗಿ ಹಾಗೂ ಭಾರತ ಕಂಡಂತಹ ಅತ್ಯಂತ ಹೆಚ್ಚು ಆದಾಯವನ್ನು ಹೊಂದುತ್ತಿರುವ ಕ್ರೀಡಾಪಟುವಾಗಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಕೂಡ ಈ ಪಟ್ಟಿಯಲ್ಲಿದ್ದಾರೆ. ಹೌದು ಸ್ನೇಹಿತರ ಭಾರತದ ಹೆಚ್ಚಿನ ಕಂಪನಿಗಳು ಈಗ ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿರುವುದು ಭಾರತ ಕ್ರಿಕೆಟ್ ತಂಡದ ಕಪ್ತಾನ ರಾಗಿರುವ ವಿರಾಟ್ ಕೊಹ್ಲಿ ಅವರನ್ನು. ವಿರಾಟ್ ಕೊಹ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನಲ್ ಪೋಸ್ಟ್ ಮಾಡಲು 5 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಏಕೈಕ ಕ್ರೀಡಾಪಟು ವೆಂದರೆ ಅದು ಖಂಡಿತವಾಗಿಯೂ ಪೋರ್ಚುಗಲ್ ಮೂಲದ ನಂಬರ್ ಒನ್ ಫುಟ್ಬಾಲ್ ಪ್ಲೇಯರ್ ಕ್ರಿಸ್ತಿಯಾನೋ ರೋನಲ್ದೋ. ಅತ್ಯಂತ ಬಡ ಕುಟುಂಬದಿಂದ ಬಂದು ಈಗ ಅತ್ಯಂತ ಶ್ರೀಮಂತ ಕ್ರೀಡಾಪಟುವಾಗಿ ನಡೆಯುವ ತನಕ ಕ್ರಿಸ್ಟಿಯಾನೋ ರೊನಾಲ್ಡೊ ರವರ ಪರಿಶ್ರಮ ಅದು ಅವರಿಗೆ ಗೊತ್ತು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನಲ್ ಪೋಸ್ಟ್ ಮಾಡಲು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಅವರ ಲಿಸ್ಟಲ್ಲಿ ನಂಬರ್1 ಸ್ಥಾನದಲ್ಲಿರುವ ಕ್ರಿಸ್ಟಿಯಾನೋ ರೊನಾಲ್ಡೊ ಪ್ರತಿ ಪೋಸ್ಟ್ಗೆ ಬರೋಬ್ಬರಿ 11ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.