ಖೇಲ್ ರತ್ನ ಪ್ರಶಸ್ತಿಗೆ ಇಬ್ಬರು ಕ್ರಿಕೆಟಿಗರನ್ನು ಶಿಫಾರಸ್ಸು ಮಾಡಿದ ಬಿಸಿಸಿಐ, ಆ ಸ್ಟಾರ್ ಕ್ರಿಕೇಟಿಗರು ಯಾರ್ಯಾರು ಗೊತ್ತಾ??

ಖೇಲ್ ರತ್ನ ಪ್ರಶಸ್ತಿಗೆ ಇಬ್ಬರು ಕ್ರಿಕೆಟಿಗರನ್ನು ಶಿಫಾರಸ್ಸು ಮಾಡಿದ ಬಿಸಿಸಿಐ, ಆ ಸ್ಟಾರ್ ಕ್ರಿಕೇಟಿಗರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಭಾರತೀಯ ಕ್ರಿಕೇಟ್ ನ ದಶಕಗಳ ಕಾಲದ ಹೀರೋಗಳು. ಕನಿಷ್ಠ ಮೂರು ನಾಲ್ಕು ದಶಕಗಳ ಕ್ರಿಕೇಟ್ ಪ್ರೆಮಿಗಳಿಗೆ ಇವರು ಹೀರೋಗಳಗಾಗಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಇವರಿಗೆ ಭಾರತ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತದ ಕ್ರೀಡಾಪಟುಗಳಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಂದು ದೊಡ್ಡ ಹಾಗೂ ಅತ್ಯುನ್ನತ ಗೌರವವಾಗಿದೆ. ಕೇಂದ್ರ ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪ್ರತಿ ಭಾರಿಯೂ ಬಿಸಿಸಿಐ ಶಿಫಾರಸ್ಸಿನ ಮೇರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕ್ರಿಕೇಟರ್ ಗಳಿಗೆ ನೀಡುತ್ತದೆ. ಈ ಭಾರಿ ಬಿಸಿಸಿಐ ಇಬ್ಬರು ಪ್ರತಿಭಾನ್ವಿತ ಕ್ರಿಕೇಟರ್ ಗಳಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಆ ಇಬ್ಬರು ಆಟಗಾರರು ಯಾರೆಂದರೇ, ಒಬ್ಬರು ಮಿಸ್ಟರಿ ಸ್ಪಿನ್ನರ್ ಆದ ಆರ್.ಅಶ್ವಿನ್ ಹಾಗೂ ಮತ್ತೊಬ್ಬರು ಭಾರತೀಯ ಮಹಿಳಾ ಕ್ರಿಕೇಟ್ ತಂಡದ ಮಿಥಾಲಿ ರಾಜ್.

ತಮಿಳುನಾಡಿನ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಭಾರತೀಯ ಕ್ರಿಕೇಟ್ ತಂಡದ ಅವಿಭಾಜ್ಯ ಅಂಗ. ತಮ್ಮ ವಿವಿಧ ಶೈಲಿಯ ಬೌಲಿಂಗ್ ನಿಂದ , ಪಿಚ್ ಹೇಗೆ ಇದ್ದರೂ ಎದುರಾಳಿ ವಿಕೇಟ್ ಗಳನ್ನ ತೆಗೆಯುತ್ತಾರೆ. ಇತ್ತಿಚೆಗಷ್ಟೇ ಟೆಸ್ಟ್ ಕ್ರಿಕೇಟ್ ನಲ್ಲಿ 400 ವಿಕೇಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ಮಿಥಾಲಿ ರಾಜ್ ಬಹಳಷ್ಟು ವರ್ಷಗಳಿಂದ ಭಾರತೀಯ ಮಹಿಳಾ ಕ್ರಿಕೇಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಲವಾರು ಅಂತರಾಷ್ಟ್ರೀಯ ದಾಖಲೆಗಳು ಸಹ ಇವರ ಹೆಸರಿನಲ್ಲಿವೆ. ಬಿಸಿಸಿಐ ತಡವಾಗಿ ಆದರೂ, ಈ ಇಬ್ಬರು ಶ್ರೇಷ್ಠ ಆಟಗಾರರನ್ನ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದು ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿ ಮಾಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.