ಈ ಆಟಗಾರ ಭಾರತದ ಭವಿಷ್ಯದ ಸಚಿನ್,ಸೆಹ್ವಾಗ್,ಯುವರಾಜ್ ಎಂದು ಹೇಳಿದ ರೈನಾ, ಆ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಿಸ್ಟರ್ ಐಪಿಎಲ್ ಎಂದು ಕರೆಸಿಕೊಳ್ಳುವ ಸುರೇಶ್ ರೈನಾ ನಿವೃತ್ತಿ ನಂತರ ಸ್ವಲ್ಪ ಹಗುರಾಗಿದ್ದಾರೆ. ಇತ್ತಿಚೆಗೆ ಇನ್ಸ್ಟಾ ಗ್ರಾಂ ಲೈವ್ ನಲ್ಲಿ, ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಜೊತೆ ಮನಬಿಚ್ಚಿ ಮಾತನಾಡಿರುವ ರೈನಾ, ಒಂದಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಹೌದು ಸ್ನೇಹಿತರೇ, ರೈನಾ ರವರು ವಿವಿಧ ವಿಚಾರಗಳ ಕುರಿತು ಮಾತನಾಡುವಾಗ ರೈನಾ ರಾರ್ ತಮ್ಮದೇ ಆದ ರೀತಿಯಲ್ಲಿ ಭವಿಷ್ಯದ ಸಚಿನ್,ಸೆಹ್ವಾಗ್,ಯುವರಾಜ್ ಎಲ್ಲರೂ ಸೇರಿ ಒಬ್ಬನಾಗಿದ್ದರೆ ಎಂದು ಹೇಳಿದ್ದಾರೆ.

ಭಾರತದ ಭವಿಷ್ಯದ ಕ್ರಿಕೇಟ್ ತಂಡ ಹಾಗೂ ಐಪಿಎಲ್ ನ ಪ್ರತಿಭೆಗಳನ್ನು ಗಮನಿಸುತ್ತಾ ಮಾತನಾಡಿದ ರೈನಾ, ಈ ಒಬ್ಬ ಆಟಗಾರ, ಭಾರತದ ಎಲ್ಲಾ ಲೆಜೆಂಡ್ ಕ್ರಿಕೇಟಿಗರ ಗುಣಲಕ್ಷಣ ಹೊಂದಿದ್ದಾನೆ ಎಂದು ವಿವರಿಸಿದ್ದಾರೆ. ಈ ಆಟಗಾರ ಸಚಿನ್,ಸೆಹ್ವಾಗ್, ದ್ರಾವಿಡ್,ಯುವರಾಜ್ ರಂತೆ ಉತ್ತಮ ಪ್ರಾಬಲ್ಯ ಹೊಂದಿದ್ದಾನೆ. ಇನ್ನಿಂಗ್ಸ್ ನಲ್ಲಿ ಇದಷ್ಟು ಹೊತ್ತು ಆರ್ಭಟಿಸುತ್ತಾ, ದೊಡ್ಡ ದೊಡ್ಡ ಮೊತ್ತಗಳನ್ನ ಗಳಿಸುವ ಸಾಮರ್ಥ್ಯ ಹೊಂದಿದ್ದಾನೆ. ಈತನ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಎದುರಾಳಿ ತಂಡದ ಬೌಲರ್ ಗಳು ನಡುಗಲು ಶುರುಮಾಡುತ್ತಾರೆ ಎಂದು ಹೇಳಿದರು.

ಅಷ್ಟಕ್ಕೂ ಆ ಟೀಂ ಇಂಡಿಯಾದ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಬೇರೆ ಯಾರೂ ಅಲ್ಲ, ಪಿಂಚ್ ಹಿಟ್ಟರ್ ರಿಷಭ್ ಪಂತ್. ಅಂಡರ್ 19 ತಂಡದಿಂದ ಭಾರತ ತಂಡಕ್ಕೆ ಬಂದ ರಿಷಭ್ ಸದ್ಯ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಎಲ್ಲಾ ಪ್ರಕಾರದ ಕ್ರಿಕೇಟ್ ಗಳಲ್ಲೂ ವೈವಿಧ್ಯಮಯ ಶಾಟ್ ಭಾರಿಸುವ ಮೂಲಕ ಸದ್ಯ ಹೆಚ್ಚು ಜನಪ್ರಿಯರಾಗಿದ್ದಾರೆ. ಸುರೇಶ್ ರೈನಾರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav