ಬಡ ಹುಡುಗಿಯ ಒಂದು ಡಜನ್ ಮಾವಿನಹಣ್ಣಿಗೆ ದುಬಾರಿ ಮೊತ್ತ ತೆತ್ತ ಉದ್ಯಮಿ – ಅದರ ಹಿಂದಿನ ರೋಚಕ ಕತೆ ಎಂತಹದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಡಜನ್ ಮಾವಿನ ಹಣ್ಣು, ಅಂದರೇ ಹನ್ನೆರೇಡು ಮಾವಿನ ಹಣ್ಣು. ಒಂದು ಡಜನ್ ಮಾವಿನ ಹಣ್ಣಿಗೆ ಹೆಚ್ಚೆಂದರೇ 100 ರಿಂದ 120 ರೂಪಾಯಿ ಇರುತ್ತದೆ. ಆದರೇ ಜಮಶೆಡ್ ಪುರದಲ್ಲಿ ಬೀದಿ ಬದಿಯಲ್ಲಿ ಹಣ್ಣು ಮಾರುತ್ತಿದ್ದ ಹುಡುಗಿಗೆ ಉದ್ಯಮಿಯೊಬ್ಬರು, ಒಂದು ಡಜನ್ ಮಾವಿನ ಹಣ್ಣಿಗೆ ದುಬಾರಿ ಮೊತ್ತ ನೀಡಿದ್ದಾರೆ. ಆದರೇ ಅದರ ಹಿಂದಿನ ಕಾರಣ ತಿಳಿಯಲು ನೀವು ಈ ಸ್ಟೋರಿಯನ್ನ ಕೊನೆಯ ತನಕ ಓದಬೇಕು.

ಜೆಮ್ ಶೆಡ್ ಪುರದಲ್ಲಿ ಐದನೇ ತರಗತಿಯಲ್ಲಿದ್ದ ಬಾಲಕಿ ತುಳಸಿಗೆ ಕಳೆದ ವರ್ಷ ಶಾಲೆಗೆ ಹೋಗಲು ಆಗಲಿಲ್ಲ. ಆನ್ ಲೈನ್ ಕ್ಲಾಸ್ ಗೆ ಅಟೆಂಡ್ ಆಗಲು ಬಾಲಕಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹಾಗಾಗಿ ಸಹಪಾಠಿಗಳೆಲ್ಲಾ ಆನ್ ಲೈನ್ ಕ್ಲಾಸ್ ನಲ್ಲಿ ಬ್ಯುಸಿಯಾದರೇ ತುಳಸಿ ಮಾತ್ರ ಒಬ್ಬಂಟಿಯಾಗಿದ್ದಳು. ಸ್ಮಾರ್ಟ್ ಫೋನ್ ಕೊಳ್ಳಲು, ತುಳಸಿ ಬೀದಿ ಬದಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಶುರು ಮಾಡಿದಳು. ಸ್ಥಳೀಯ ಮಾಧ್ಯಮವೊಂದರ ಮೂಲಕ ದಾನಿಗಳು ತನಗೆ ಸಹಾಯ ಮಾಡಬೇಕೆಂದು ಕೋರಿದರೂ ಯಾರು ಸರಿಯಾಗಿ ಸ್ಪಂದಿಸಲಿಲ್ಲ.

ಮುಂದೆ ಒಂದು ದಿನ ತುಳಸಿಗೆ ಶಾಕ್ ಕಾದಿತ್ತು. ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಒಂದು ಡಜನ್ ಮಾವಿನ ಹಣ್ಣು ಖರೀದಿಸಿದರು. ಒಂದು ಡಜನ್ ಹಣ್ಣಿಗೆ 120 ರ ಬದಲು ಬರೋಬ್ಬರಿ 1 ಲಕ್ಷದ 20 ಸಾವಿರ ರೂಪಾಯಿ ನೀಡಿದರು. ಅಷ್ಟೇಕೆ ಎಂದು ತುಳಸಿ ಕೇಳುತ್ತಿರುವಾಗಲೇ, ಉದ್ಯಮಿ ಈ ಹಣದಿಂದ ಸ್ಮಾರ್ಟ್ ಫೋನ್ ತೆಗೆದುಕೊ ಎಂದು ಹೇಳಿ ಹೊರಟುಬಿಟ್ಟರು. ಆ ಸಹಾಯ ಮಾಡಿದ ವ್ಯಕ್ತಿ ಅಮೇಯ ಹೇಟೆ, ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸದ್ಯ ಆ ಹಣದಿಂದ ಸ್ಮಾರ್ಟ್ ಫೋನ್ ಖರೀದಿಸಿರುವ ತುಳಸಿ, ಈಗ ಆನ್ ಲೈನ್ ಕ್ಲಾಸ್ ಅಟೆಂಡ್ ಆಗುತ್ತಿದ್ದಾಳೆ. ನೋಡಿ ಸ್ನೇಹಿತರೇ, ನಿಷ್ಕಲ್ಮಶ ಪ್ರಾರ್ಥನೆ, ಒಂದಲ್ಲ, ಒಂದು ರೂಪದಲ್ಲಿ ಪ್ರತಿಫಲ ನೀಡುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ಈ ಘಟನೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav