ಫೈನಲ್ ಸೋಲಿನ ಬಳಿಕ ಇಂಗ್ಲೆಂಡ್ ಸರಣಿಗೆ ಮೇಜರ್ ಸರ್ಜರಿ ಫಿಕ್ಸ್, ಆಟವಾಡುವ 11 ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷಿತ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಸೋಲು ಕಂಡ ಬಳಿಕ ಭಾರತ ತಂಡ ಈಗ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಸಿದ್ದವಾಗುತ್ತಿದೆ. ತಂಡದ ಹೀನಾಯ ಸೋಲಿನ ಬಳಿಕ ಎಚ್ಚೆತ್ತ ಭಾರತ ತಂಡ ಕಠಿಣ ಅಭ್ಯಾಸವನ್ನು ಎದುರು ನೋಡುತ್ತಿದೆ.

ಭಾರತ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಸಹ ನೀರಿಕ್ಷಿಸ ಬಹುದಾಗಿದೆ. ಕಳೆದ ಟೆಸ್ಟ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಹಾಗೂ ಸ್ಟಾರ್ ಬೌಲರ್ ವೇಗಿ ಜಸಪ್ರಿತ್ ಬುಮ್ರಾ ನೀರಿಕ್ಷಿತ ಪ್ರದರ್ಶನ ತೋರಲಿಲ್ಲ. ಇದರಿಂದಲೇ ಭಾರತ ತಂಡ ಸೋತಿತು ಎಂಬ ಕೂಗು ಕೇಳಿ ಬಂತು. ಇನ್ನು ರವೀಂದ್ರ ಜಡೇಜಾ ಸಹ ತಮ್ಮ ಜವಾಬ್ದಾರಿ ತಕ್ಕನಾಗಿ ಆಡಲಿಲ್ಲ. ಹಾಗಾಗಿ ಮುಂದಿನ ಪಂದ್ಯದಲ್ಲಿ ಭಾರತ ತಂಡ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿಯ ಬಹುದು.

ಇನ್ನು ಚೇತೆಶ್ವರ ಪೂಜಾರ ಬದಲು ಕೆ.ಎಲ್.ರಾಹುಲ್, ಶುಭಮಾನ್ ಗಿಲ್ ಬದಲು ಮಯಾಂಕ್ ಅಗರವಾಲ್,ರವೀಂದ್ರ ಜಡೇಜಾ ಬದಲು ಹನುಮ ವಿಹಾರಿ, ಜಸ್ ಪ್ರಿತ್ ಬುಮ್ರಾ ಬದಲು ಮಹಮದ್ ಸಿರಾಜ್ ಕಣಕ್ಕಿಳಿಯಬಹುದು. ಗಾಯಾಳು ಇಶಾಂತ್ ಶರ್ಮಾ ಬದಲು ಉಮೇಶ್ ಯಾದವ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಊಟರೆಯಾಗಿ ತಂಡ ಈ ಕೆಳಗಿನಂತಿದೆ.

ತಂಡ ಇಂತಿದೆ – ರೋಹಿತ್ ಶರ್ಮಾ, ಮಯಾಂಕ್ ಅಗರ್ ವಾಲ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಭ್ ಪಂತ್, ಹನುಮ ವಿಹಾರಿ, ಆರ್.ಅಶ್ವಿನ್, ಉಮೇಶ್ ಯಾದವ್, ಮಹಮದ್ ಶಮಿ, ಮಹಮದ್ ಸಿರಾಜ್. ನಿಮ್ಮ ನೆಚ್ಚಿನ ತಂಡದಲ್ಲಿ ಯಾವ ಬದಲಾವಣೆಗಳಿರಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav