ಬ್ರೇಕಿಂಗ್ ನ್ಯೂಸ್ -ಶುಭಮನ್ ಗಿಲ್ ಗೆ ಮುಂದಿನ ಟೆಸ್ಟ್ ಗಳಲ್ಲಿ ಕೋಕ್ – ಗಿಲ್ ಸ್ಥಾನ ತುಂಬಲಿರುವವರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನಿರಾಸೆ ಹೊಂದಿದ ಭಾರತ ಈಗ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ತಂಡದ ಆಡುವ 11 ರ ಆಯ್ಕೆಯಲ್ಲಿ ಎಡವಿದ್ದೇ, ನ್ಯೂಜಿಲೆಂಡ್ ವಿರುದ್ದದ ಪಂದ್ಯದ ಸೋಲಿಗೆ ಕಾರಣ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ಈ ಕಾರಣಕ್ಕೆ ಮುಂಬರುವ ಇಂಗ್ಲೆಂಡ್ ವಿರುದ್ದದ ಐದು ಟೆಸ್ಟ್ ಗಳ ಸರಣಿಗೆ ಭಾರತ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ನೀರಿಕ್ಷಿಸಬಹುದಾಗಿದೆ.

ಅದರಲ್ಲೂ ಆರಂಭಿಕ ಶುಭಮಾನ್ ಗಿಲ್ ಸ್ಥಾನಕ್ಕೆ ಈಗ ಕುತ್ತು ಎದುರಾಗಿದೆ. ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿಯೂ ಸಹ ಗಿಲ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಮಹತ್ವದ ಟೆಸ್ಟ್ ಫೈನಲ್ ಪಂದ್ಯದಲ್ಲಿ ಗಿಲ್ ಬದಲು ಅನುಭವಿ ಆಟಗಾರ , ಇನ್ನಿಂಗ್ಸ್ ಆರಂಭಿಸಬೇಕು ಎಂದು ಹೇಳಲಾಗಿತ್ತು. ಆದರೇ ತಂಡದ ಮ್ಯಾನೇಜ್ ಮೆಂಟ್ ಗಿಲ್ ಗೆ ಅವಕಾಶ ನೀಡಿತು. ಆದರೇ ಸಿಕ್ಕ ಅವಕಾಶ ಕೈ ಚೆಲ್ಲಿದ ಗಿಲ್, ಕಳಪೆ ಆಟ ಆಡಿದರು. ಈಗ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ.

ಸದ್ಯ ಗಿಲ್ ಸ್ಥಾನವನ್ನ ಮಯಾಂಕ್ ಅಗರವಾಲ್ ತುಂಬುವ ಸ್ಥಾನ ದಟ್ಟವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಉತ್ತಮ ರನ್ ಗಳಿಸಿದ್ದ ಮಯಾಂಕ್, ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿ ತಂಡದಿಂದ ಹೊರಬಿದ್ದಿದ್ದರು. ನಂತರ ತಂಡದಲ್ಲಿ ಸ್ಥಾನ ಸಿಗದೇ ಬೆಂಚ್ ಕಾಯಿಸಿದ್ದರು. ಈಗ ಮುಂದಿನ ಐದು ಪಂದ್ಯಗಳಿಗೆ ಮಯಾಂಕ್ ಆರಂಭಿಕರಾಗಬಹುದು.

ಇನ್ನು ಮಯಾಂಕ್ ಬದಲು ಕೆ.ಎಲ್.ರಾಹುಲ್ ರಿಂದ ಸಹ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಭಾರತ ತಂಡಕ್ಕೆ ಆರಂಭಿಕರಾಗಿ ಆಟ ಆರಂಭಿಸಿದ ರಾಹುಲ್, ನಂತರ ತಂಡಕ್ಕಾಗಿ ತಮ್ಮ ಸ್ಥಾನಗಳನ್ನು ಪದೇ ಪದೇ ಬದಲಾಯಿಸಿಕೊಂಡಿದ್ದರು. ಈಗ ಅವರು ಸಹ ಗಿಲ್ ಸ್ಥಾನವನ್ನು ತುಂಬಬಹುದು. ಒಂದು ವೇಳೆ ಚೇತೆಶ್ವರ ಪೂಜಾರ ತಂಡದಿಂದ ಹೊರಗಿದ್ದರೇ, ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಶುಭಮಾನ್ ಗಿಲ್ ಹಾಗೂ ಪೂಜಾರ ಸ್ಥಾನವನ್ನು ಯಾವ ಆಟಗಾರರು ತುಂಬಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav