ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುವ ಈ ಕೋಳಿಯ ಬೆಲೆ ಬರೋಬ್ಬರಿ ಎಷ್ಟು ಲಕ್ಷ ರೂಪಾಯಿ ಗೊತ್ತಾ?? ಸಾಮಾನ್ಯ ಜನರು ತಿನ್ನುವಂತ ಕೋಳಿ ಅಲ್ಲ ಇದು.

ನಮಸ್ಕಾರ ಸ್ನೇಹಿತರೇ ಆಹಾರ ಪದ್ದತಿಯಲ್ಲಿ ಸಸ್ಯಹಾರಿ,ಮಾಂಸಹಾರಿ,ಮಿಶ್ರಹಾರಿಗಳ ಥರ ಈಗ ಹೊಸದೊಂದು ಟ್ರೆಂಡ್ ಶುರುವಿಟ್ಟುಕೊಂಡಿದೆ. ಅದೇ ಎಗಿಟೇರಿಯನ್. ಅಂದರೇ ಬೇರೆ ಯಾವುದೇ ಮಾಂಸದ ಪದಾರ್ಥ ಸೇವಿಸದೇ , ಕೇವಲ ಮೊಟ್ಟೆಗಳನ್ನ ಮಾತ್ರ ಸೇವಿಸುವವರಿಗೆ ಎಗಿಟೇರಿಯನ್ ಎಂದು ಕರೆದುಕೊಳ್ಳುತ್ತಿದ್ದಾರೆ. ಎಗಿಟೇರಿಯನ್ ಗಳು ಫಾರಂ ಕೋಳಿ ಮೊಟ್ಟೆ ಹಾಗೂ ನಾಟಿ ಜವಾರಿ ಕೋಳಿ ಮೊಟ್ಟೆಗಳನ್ನ ಸೇವಿಸುತ್ತಾರೆ.

ಫಾರಂ ಕೋಳಿ ಮೊಟ್ಟೆಗಳಿಗಿಂತ ನಾಟಿ ಕೋಳಿ ಮೊಟ್ಟೆಗಳು ತುಸು ದುಬಾರಿ. ಹೇರಳ ಪೋಷಕಾಂಶ ಹೊಂದಿರುವ ಮೊಟ್ಟೆಗಳು ಅದೆಷ್ಟೋ ಜನರ ಅವಿಭಾಜ್ಯ ಅಂಗವಾಗಿದ್ದಾವೆ. ಈಗ ಅದೆಲ್ಲದಕ್ಕೂ ವಿಸ್ಮಯ ಎಂಬಂತೆ ಕಪ್ಪು ಕೋಳಿ ಹಾಗೂ ಕಪ್ಪು ಕೋಳಿ ಮೊಟ್ಟೆಯ ಆವಿಷ್ಕಾರವಾಗಿದೆ.

ಹೌದು ಜಗತ್ತಿನಲ್ಲಿ ಅತಿ ವಿರಳವಾಗಿ ಸಿಗುವ ಈ ಕೋಳಿ ಕಪ್ಪು ಬಣ್ಣದಲ್ಲಿ ಇರುತ್ತದೆಯಂತೆ. ಇದರ ಮಾಂಸ ಸಹ ಕಪ್ಪು, ಹಾಗೂ ಇಡುವ ಮೊಟ್ಟೆ ಸಹ ಕಪ್ಪು ಎಂದು ಹೇಳಲಾಗಿದೆ. ಅತಿ ಹೆಚ್ಚು ಪೋಶಕಾಂಶಗಳನ್ನ ಈ ಕಪ್ಪು ಕೋಳಿ ಹೊಂದಿರುತ್ತದೆಯಂತೆ. ಅದೃಷ್ಠ ಬರಲು ಈ ವಿರಳಾತಿವಿರಳ ಕಪ್ಪು ಕೋಳಿಯನ್ನು ಸಾಕುತ್ತಾರೆ ಎಂದು ಹೇಳುತ್ತಾರೆ. ಅಂದ ಹಾಗೆ ಈ ಕಪ್ಪುಕೋಳಿಯ ಬೆಲೆ ಕೇಳಿದರೇ ನೀವು ಒಂದು ಕ್ಷಣ ಹೌಹಾರುವುದು ಗ್ಯಾರಂಟಿ.

ಅಂದಹಾಗೆ ಈ ಒಂದು ಕಪ್ಪುಕೋಳಿಯ ಬೆಲೆ ಬರೋಬ್ಬರಿ ಎರಡು ಲಕ್ಷ. ಇದು ಇಡುವ ಮೊಟ್ಟೆಯ ಆರಂಭಿಕ ಬೆಲೆ ಎರಡು ಸಾವಿರ ರೂಪಾಯಿಯಿಂದ ಶುರುವಾಗುತ್ತದೆಯಂತೆ. ಪ್ರಪಂಚದಲ್ಲಿ ಅತ್ಯಂತ ವಿರಳವಾಗಿ ಕಪ್ಪು ಕೋಳಿಗಳನ್ನು ಸಾಕುತ್ತಿದ್ದಾರಂತೆ.ಒಟ್ಟಿನಲ್ಲಿ ವಿಸ್ಮಯಕಾರಿಯಾದ ಈ ಕಪ್ಪುಕೋಳಿ ಪ್ರತಿಷ್ಠೆಯ ಸಂಕೇತವೂ ಹೌದು. ಈ ಕಪ್ಪುಕೋಳಿ ಅದರ ಮಾಂಸ ಹಾಗೂ ಮೊಟ್ಟೆಯ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.