ತಪ್ಪು ಸರಿ ಪಡಿಸಿಕೊಂಡ ವಿರಾಟ್ ಕೊಹ್ಲಿ, ತಾವು ಆಡಿದ ಮಾತು ವೈರಲ್ ಆಗುತ್ತಿದ್ದಂತೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮೊಟ್ಟ ಮೊದಲ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲುವ ಅವಕಾಶ ಇದೀಗ ಭಾರತದ ಕೈ ತಪ್ಪಿ ಹೋಗಿದೆ. ಫೈನಲ್ ನಲ್ಲಿ ಭಾರತೀಯ ಕ್ರಿಕೆಟ್ ತಂಡವು ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋಲನ್ನು ಕಾಣುವ ಮೂಲಕ ನಿರಾಸೆ ಮೂಡಿಸಿದೆ. ಈ ಸಮಯದಲ್ಲಿ ಇಷ್ಟು ದಿವಸ ಗೆದ್ದಾಗ ಪ್ರಶಂಸೆ ನೀಡುತ್ತಿದ್ದ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಸೋಲನ್ನು ಪರಿಗಣಿಸಲು ಸಿದ್ದವಿಲ್ಲ.

ಹೌದು ಸ್ನೇಹಿತರೇ, ವಿರಾಟ್ ಕೊಹ್ಲಿ ರವರು ತಂಡದ ಆಯ್ಕೆ ಸರಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ರವರ ಬೆಂಬಲಕ್ಕೆ ಕೂಡ ಸಾಕಷ್ಟು ಜನ ನಿಂತಿದ್ದಾರೆ. ಮಳೆ ಬಂದಿರಲಿಲ್ಲ ಎಂದರೇ, ಗೆಲುವು ಭಾರತದ್ದೇ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ರವರು ಕೂಡ ಸೋತಾಗ ತಂಡದ ಕೆಲವು ಆಟಗಾರರ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತ ಪಡಿಸಿದ್ದರು. ಪರೋಕ್ಷವಾಗಿ ಪೂಜಾರ ಹಾಗೂ ಬುಮ್ರಾ ರವರ ಕುರಿತು,

ಮಾತನಾಡಿದಂತೆ ತಂಡದ ಆಯ್ಕೆಯನ್ನು ತಾವೇ ಅಸಮಾಧಾನ ವ್ಯಕ್ತ ಪಡಿಸಿದ್ದರು. ಇವರ ಈ ಮಾತು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ನಾಯಕನಾಗಿ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಇಲ್ಲಿಯವರೆಗೂ ವಿರಾಟ್ ರವರ ಬಾಯಲ್ಲಿ ಈ ರೀತಿಯ ಮಾತುಗಳು ಎಂದು ಹೊರ ಬಂದಿರಲಿಲ್ಲ. ಇದು ಎಲ್ಲರಿಗೂ ಒಂದು ಕ್ಷಣ ಆಶ್ಚರ್ಯ ತಂದಿತ್ತು. ಆದರೆ ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತೊಮ್ಮೆ ತಂಡದ ಫೋಟೋ ಹಾಕಿ ತಾವೆಲ್ಲರೂ ಒಂದೇ ಕುಟುಂಬ ಎನ್ನುವ ಮೂಲಕ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

Post Author: Ravi Yadav