ಕೊನೆಗೂ ನಿರ್ಮಾಣವಾಗುತ್ತಿದೆ ಬಯೋಪಿಕ್ ಸುಧಾ ಮೂರ್ತಿ ರವರ ಪಾತ್ರಕ್ಕೆ ಆಯ್ಕೆಯಾಗುತ್ತಿರುವ ಟಾಪ್ ಬಾಲಿವುಡ್ ನಟಿ ಯಾರು ಗೊತ್ತೇ??

ಕೊನೆಗೂ ನಿರ್ಮಾಣವಾಗುತ್ತಿದೆ ಬಯೋಪಿಕ್ ಸುಧಾ ಮೂರ್ತಿ ರವರ ಪಾತ್ರಕ್ಕೆ ಆಯ್ಕೆಯಾಗುತ್ತಿರುವ ಟಾಪ್ ಬಾಲಿವುಡ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ರಾಜ್ಯದಲ್ಲಿ ಅದೆಷ್ಟು ಗಣ್ಯಾತಿಗಣ್ಯರು ಇರಬಹುದು ಆದರೆ ಅದರಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇನ್ನು ಈ ಬೆರಳೆಣಿಕೆಯಷ್ಟು ಮಂದಿಯಲ್ಲಿ ಕೂಡ ಕೆಲವರು ತಮ್ಮ ಜನಪ್ರಿಯತೆಗಾಗಿ ಒಳ್ಳೆ ಕೆಲಸದ ಬೂಟಾಟಿಕೆ ಮಾಡುತ್ತಾರೆ. ಕೇವಲ ಜನಪ್ರಿಯತೆಗಾಗಿ ತಾವು ಮಾಡಿರುವ ಚಿಕ್ಕ ಸಹಾಯವನ್ನು ದೊಡ್ಡದನ್ನು ಮಾಡಿ ಅದಕ್ಕೆ ಮಾಧ್ಯಮಗಳಲ್ಲಿ ದಾನ ಶೂರ ಕರ್ಣರು ಎಂಬ ಬಿರುದು ಬಾವಲಿಗಳನ್ನು ಪಡೆಯುತ್ತಾರೆ. ಆದರೆ ಅಂದಿನಿಂದ ಇಂದಿನವರೆಗೂ ಬಡಜನರಿಗೆ ಯಾವುದೇ ಕಷ್ಟ ಬರಲಿ ಅದಕ್ಕೆ ಮುಂದೆ ನಿಂತು ಕಷ್ಟವನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುವ ಏಕೈಕ ವ್ಯಕ್ತಿಯೆಂದರೆ ಅದು ಕೇವಲ ಈ ಮಹಾಮಾತೆ ಒಬ್ಬರೇ.

ಹೌದು ಸ್ನೇಹಿತರೆ ನಾನು ಹೇಳಲು ಹೊರಟಿರುವುದು ಕನ್ನಡ ಮಣ್ಣು ಹಾಗೂ ಕರ್ನಾಟಕ ರಾಜ್ಯ ಕಂಡ ಧೀಮಂತ ವ್ಯಕ್ತಿತ್ವದ ಮಹಿಳೆ ಡಾ ಸುಧಾಮೂರ್ತಿ ಅಮ್ಮನವರ ಬಗ್ಗೆ. ಹೌದು ಸ್ನೇಹಿತರೆ ಸುಧಾಮೂರ್ತಿ ಅಮ್ಮನವರ ಬದುಕು ಬಡ ಜನರ ಸೇವೆಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಮುಡಿಪಾಗಿಟ್ಟಿದ್ದಾರೆ. ಕರ್ನಾಟಕ ರಾಜ್ಯವನ್ನು ಪರಭಾಷೆಗಳ ಗುರುತಿಸುವುದಾದರೆ ಅವರಲ್ಲಿ ಸುಧಾಮೂರ್ತಿ ಅಮ್ಮನವರು ಕೂಡ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ.

1950 ರಲ್ಲಿ ಶಿಗ್ಗಾವ್ ನಲ್ಲಿ ಜನಿಸಿದ ಸುಧಾಮೂರ್ತಿ ಅಮ್ಮನವರು ಚಿಕ್ಕವಯಸ್ಸಿನಿಂದಲೂ ಕಲಿಕೆಯಲ್ಲಿ ಸದಾ ಮುಂದು. ಉನ್ನತ ಶಿಕ್ಷಣ ಅಭ್ಯಾಸಗಳನ್ನು ಕೂಡ ನಮ್ಮ ಕರ್ನಾಟಕದಲ್ಲಿ ಮುಗಿಸಿದರು. ಇನ್ನು ಸುಧಾಮೂರ್ತಿಯವರು ನಾರಾಯಣಮೂರ್ತಿಯವರನ್ನು ಮದುವೆಯಾಗಿದ್ದು ಅವರು ಮಹಾರಾಷ್ಟ್ರದ ಪುಣೆಯ ಟೆಲ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ. ನಾರಾಯಣಮೂರ್ತಿಯವರು ಇನ್ಪೋಸಿಸ್ ಕಂಪನಿಯನ್ನು ಸ್ಥಾಪಿಸಲು ಅವರ ಪತ್ನಿಯಾದ ಸುಧಾಮೂರ್ತಿಯವರು ಕೂಡ ಸಾಕಷ್ಟು ನೆರವು ನೀಡಿದ್ದರು.

ಇಂದು ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಇನ್ಫೋಸಿಸ್ ಕಂಪನಿ ಅದೆಷ್ಟು ಸಾವಿರ ಜನರಿಗೆ ಉದ್ಯೋಗವನ್ನು ಕಲ್ಪಿಸಿದ ಎಂದರೆ ಅದಕ್ಕೆ ಸುಧಾ ಮೂರ್ತಿ ಅವರ ಕೊಡುಗೆ ಕೂಡ ಬಹುಮುಖ್ಯವಾಗಿದೆ. ಇತ್ತೀಚಿಗೆ ಈ ಮಹಾಮಾರಿ ಕಾಲದಲ್ಲಿ ಕೂಡ ಸುಧಾಮೂರ್ತಿ ಅಮ್ಮನವರು ಬಡ ಜನರ ಕಲ್ಯಾಣಕ್ಕಾಗಿ ಹಾಗೂ ಅವರ ಹಸಿವನ್ನು ನೀಗಿಸಲು 100 ಕೋಟಿಗಿಂತಲೂ ಅಧಿಕ ಮೌಲ್ಯದ ಆಹಾರ ಪದಾರ್ಥಗಳ ಹಾಗೂ ಕೆಲವು ಅವಶ್ಯಕ ವಸ್ತುಗಳ ಪೂರೈಕೆ ಮಾಡುವ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಕಳೆದ ಬಾರಿ ಪ್ರವಾಹ ಬಂದಾಗಲೂ ಸಹ ಸುಧಾಮೂರ್ತಿ ಅಮ್ಮನವರು ತಮ್ಮ ಇನ್ಫೋಸಿಸ್ ಫೌಂಡೇಶನ್ ನ ಮೂಲಕ ನೂರಾರು ಜನರಿಗೆ ಮನೆಗಳನ್ನು ನಿರ್ಮಾಣ ಮಾಡಿ ಅವರ ಬಾಳಿಗೆ ಬೆಳಕಾಗಿ ಅವರ ಬದುಕಿಗೊಂದು ಸೂರನ್ನು ನೀಡಿದ್ದರು. ಒಮ್ಮೆ ಹಿಂದಿಯ ಕೌನ್ ಬನೇಗಾ ಕರೋಡ್ಪತಿ ಎಂಬ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅಮ್ಮನವರು ಭೇಟಿ ನೀಡಿದ್ದಾಗ ಭಾರತ ಕಂಡ ಶ್ರೇಷ್ಠ ನಟ ಅಮಿತಾ ಬಚ್ಚನ್ ರವರು ಕೂಡ ಸುಧಾಮೂರ್ತಿ ಅಮ್ಮನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಸುಧಾಮೂರ್ತಿ ಅಮ್ಮನವರು ಬದುಕಿನಲ್ಲಿ ನಾವು ಹುಟ್ಟಿದ್ದೇವೆ ಎಂದು ಹೇಳಲು ಹೆಮ್ಮೆ ಹಾಗೂ ಗರ್ವವನ್ನು ಪಡುತ್ತೇವೆ ಎಂದು ಹೇಳಿದರು.

ಇದು ನೋಡಿ ಸ್ನೇಹಿತರೆ ಸುಧಾಮೂರ್ತಿ ಅಮ್ಮನವರು ತಮ್ಮ ಜೀವನ ದಲ್ಲಿ ಪಡೆದುಕೊಂಡಂತಹ ಪ್ರೀತಿ ಹಾಗೂ ಮಾಡಿದಂತಹ ಸಾಧನೆ. ಇನ್ನು ಇತ್ತೀಚಿಗಷ್ಟೇ ಸುಧಾಮೂರ್ತಿ ಅಮ್ಮನವರ ಕುರಿತಂತೆ ಕೆಲವೊಂದು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ.

ಹೌದು ಸ್ನೇಹಿತರೆ ಭಾರತ ನಾಡು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಡಾ ಸುಧಾಮೂರ್ತಿ ಅಮ್ಮನವರ ಕುರಿತಂತೆ ಬಾಲಿವುಡ್ನಲ್ಲಿ ಜೀವನ ಚರಿತ್ರೆ ಮಾಡಲು ಸಜ್ಜಾಗಿದ್ದಾರೆ. ಹೌದು ಸ್ನೇಹಿತರೆ ಬಾಲಿವುಡ್ನ ಮಹಿಳಾ ನಿರ್ದೇಶಕಿಯಾದ ಅಶ್ವಿನಿ ತಿವಾರಿಯವರು ಕನ್ನಡ ನಾಡು ಕಂಡ ಶ್ರೇಷ್ಠ ಮಹಿಳೆಯಾದ ಸುಧಾಮೂರ್ತಿ ಅಮ್ಮನವರ ಕುರಿತಂತೆ ಬಯೋಪಿಕ್ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಶ್ವಿನಿ ತಿವಾರಿಯವರು ಪಂಗ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದು ಬಿಡುಗಡೆಯಾದ ನಂತರವಷ್ಟೇ ಸುಧಾಮೂರ್ತಿ ಅಮ್ಮನವರ ಕುರಿತಂತೆ ಚಿತ್ರವನ್ನು ಚಿತ್ರೀಕರಿಸಲು ಸಜ್ಜಾಗಿದ್ದಾರೆ.

ಅಲ್ಲದೆ ಸುಧಾಮೂರ್ತಿ ಅಮ್ಮನವರ ಪಾತ್ರವನ್ನು ಅಲಿಯಾ ಭಟ್ ಮಾಡಿದರೆ ಚಂದ ಎಂಬುದು ಅವರ ಆಸೆ. ಒಂದೊಮ್ಮೆ ಆಲಿಯಾ ಭಟ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟರೆ ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತದೆ. ಆದರೆ ಒಂದೇ ಒಂದು ಕೊರಗು ಎಂದರೆ ಕರ್ನಾಟಕ ನಾಡು ಕಂಡ ಹೆಮ್ಮೆಯ ಕನ್ನಡತಿಯ ಕುರಿತಂತೆ ಬಯೋಪಿಕ್ ಕನ್ನಡದಲ್ಲಿ ಬರೆದು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿರುವ ಸ್ವಲ್ಪ ಚಿಂತೆಯ ವಿಷಯ. ಆಲಿಯಾ ಭಟ್ ರವರು ಸುಧಾಮೂರ್ತಿ ಅಮ್ಮನವರ ಪಾತ್ರವನ್ನು ಸರಿಯಾಗಿ ನಿರ್ವಹಿಸಬಲ್ಲರೇ ಇದರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.