ಕರೀನಾ ಬೇಡವೇ ಬೇಡ, ಸೀತಾ ಮಾತೆಯ ಪಾತ್ರಕ್ಕೆ ಕಂಗನಾ ಓಕೆ, ಆದರೆ ಈ ನಟಿಯಾದರೆ ಬೆಸ್ಟ್ ಎಂದ ನೆಟ್ಟಿಗರು. ಯಾರಂತೆ ಗೊತ್ತಾ???

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇಡೀ ಭಾರತದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಒಂದರಲ್ಲಿ ಸೀತಾ ಮಾತೆಯ ಪಾತ್ರಕ್ಕೆ ಯಾರು ಆಯ್ಕೆಯಾಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಅದರಲ್ಲಿಯೂ ಚಿತ್ರ ತಂಡ ಕರೀನಾ ಕಪೂರ್ ರವರನ್ನು ಸಂಪರ್ಕ ಮಾಡಿದ ಕಾರಣ ಹಾಗೂ ಕರೀನಾ ಕಪೂರ್ ರವರು ಒಮ್ಮೆಲೇ ತಮ್ಮ ಸಂಭಾವನೆಯನ್ನು ಏರಿಸಿಕೊಂಡು 12 ಕೋಟಿ ಸಂಭಾವನೆ ಕೇಳಿದ ಕಾರಣ ಈ ಚರ್ಚೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹಲವಾರು ಜನ ಸೀತಾ ಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ರವರು ಯಾವುದೇ ಕಾರಣಕ್ಕೂ ಆಯ್ಕೆ ಯಾಗಬಾರದು ಎಂದು ಮಾತನಾಡುತ್ತಿದ್ದಾರೆ. ಅದೇ ಸಮಯದಲ್ಲಿ ಇದು ಕೇವಲ ಸಾಮಾನ್ಯ ಚರ್ಚೆಯಾಗಿ ಉಳಿದುಕೊಂಡಿಲ್ಲ. ಯಾಕೆಂದರೆ ನಿನ್ನೆ ಇಡೀ ಭಾರತ ಸೇರಿದಂತೆ ವಿಶ್ವದ ಇನ್ನಿತರ ಹಲವಾರು ರಾಷ್ಟ್ರಗಳಲ್ಲಿ ಸದ್ದು ಮಾಡಿದ ಬಾಹುಬಲಿ ಚಿತ್ರದ ಕಥೆ ಬರೆದ ನಿರ್ದೇಶಕ ರಾಜಮೌಳಿ ರವರ ತಂದೆ ಕೂಡ ಈ ಕುರಿತು ಮಾತನಾಡಿ ಯಾವುದೇ ಕಾರಣಕ್ಕೂ ಕರೀನಾ ಕಪೂರ್ ಬೇಡ, ಅವರ ಬದಲು ಕಂಗನಾ ರಾವತ್ ರವರಿಗೆ ಸೀತಾ ಮಾತೆಯ ಪಾತ್ರ ನೀಡಿ ಎಂದಿದ್ದಾರೆ.

ಇವರ ಈ ಮಾತುಗಳಿಗೆ ಸಾಕಷ್ಟು ಬೆಮಬಲದ ಮಾತುಗಳು ಕೂಡ ಕೇಳಿ ಬಂದಿದ್ದು, ಕಂಗನಾ ರಾವತ್ ರವರು ಬಹಳ ಚೆನ್ನಾಗಿ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ ಎಂದು ಲಕ್ಷಾಂತರ ಜನ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಮಯದಲ್ಲಿ ದಕ್ಷಿಣ ಭಾರತದ ಮತ್ತೊಬ್ಬರು ನಟಿಯ ಹೆಸರು ಕೂಡ ಬಹಳ ಸೂಕ್ತ ಎನಿಸಿದೆ. ಕಂಗನಾ ರಾವತ್ ಆದರೂ ಸರಿ ಅಥವಾ ಈ ನಟಿಯಾದರು ಕೂಡ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೌದು ಸ್ನೇಹಿತರೇ, ಈ ಪಾತ್ರಕ್ಕೆ ಜನರಿಂದ ಕೇಳಿ ಬರುತ್ತಿರುವ ಹೆಸರು ಮತ್ಯಾರದ್ದು ಅಲ್ಲ, ಅವರೇ ಟಾಪ್ ನಟಿ ಕೀರ್ತಿ ಸುರೇಶ್. ಇವರು ಕೂಡ ಬಹಳ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹಾಗಿದ್ದರೇ ಒಂದು ವೇಳೆ ಕೀರ್ತಿ ಸುರೇಶ್ ರವರು ಈ ಪಾತ್ರಕ್ಕೆ ಆಯ್ಕೆಯಾದರೇ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav