ಕಳೆದ ವರ್ಷ ಬಾಹುಬಲಿ ಪ್ರಭಾಸ್ ತಿರಸ್ಕರಿಸಿದ ಜಾಹಿರಾತಿನ ಮೌಲ್ಯ ಒಟ್ಟು ಎಷ್ಟು ಕೋಟಿ ಗೊತ್ತಾ?? ಇದಕ್ಕೆಲ್ಲ ಕಾರಣವಾದರೂ ಏನು ಗೊತ್ತೇ??
ಕಳೆದ ವರ್ಷ ಬಾಹುಬಲಿ ಪ್ರಭಾಸ್ ತಿರಸ್ಕರಿಸಿದ ಜಾಹಿರಾತಿನ ಮೌಲ್ಯ ಒಟ್ಟು ಎಷ್ಟು ಕೋಟಿ ಗೊತ್ತಾ?? ಇದಕ್ಕೆಲ್ಲ ಕಾರಣವಾದರೂ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಟಾಲಿವುಡ್ ನ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿಯಿಂದ ಭಾರತದಲ್ಲೇ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪ್ರಭಾಸ್ ಖ್ಯಾತಿ ಈಗ ಕೇವಲ ಟಾಲಿವುಡ್ ಮಾತ್ರವಲ್ಲ, ಬಾಲಿವುಡ್, ಹಾಲಿವುಡ್ ನಲ್ಲಿ ಸಹ ಹಬ್ಬಿದೆ. ದೇಶ-ವಿದೇಶಾದ್ಯಂತ ದೊಡ್ಡದಾದ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಿಗೆ ಸೈನ್ ಮಾಡಿರುವ ಪ್ರಭಾಸ್ ಕಾಲ್ ಶೀಟ್ 2024 ರ ತನಕ ಬಿಜಿ ಇದೆ.
ಈ ಮಧ್ಯೆ ಜಾಹೀರಾತು ಕಂಪನಿಗಳು ಸಹ ಪ್ರಭಾಸ್ ಹಿಂದೆ ಬಿದ್ದಿವೆ. ಕೋಟಿ, ಕೋಟಿ ಮೊತ್ತದ ಆಫರ್ ಗಳನ್ನು ಸಹ ಜಾಹೀರಾತು ಕಂಪನಿಗಳು ಪ್ರಭಾಸ್ ಗೆ ನೀಡಿದ್ದರೂ, ಪ್ರಭಾಸ್ ಆ ಆಫರ್ ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಅಷ್ಟಕ್ಕೂ ಪ್ರಭಾಸ್ ತಿರಸ್ಕರಿಸಿದ ಆ ಆಫರ್ ನ ಒಟ್ಟು ಮೊತ್ತ ಕೇಳಿದರೇ ನೀವು ಕೊಂಚ ಶಾಕ್ ಆಗಿಬಿಡುತ್ತಿರಿ. ಹೌದು ಪ್ರಭಾಸ್ ತಿರಸ್ಕರಿಸಿದ ಜಾಹೀರಾತು ಕಂಪನಿಯ ಒಟ್ಟು ಮೊತ್ತ ಬರೋಬ್ಬರಿ 150 ಕೋಟಿ ರೂಪಾಯಿ ಎಂಬ ಸುದ್ದಿ ಈಗ ಹೊರ ಬಿದ್ದಿದೆ.
ಅಷ್ಟು ದೊಡ್ಡ ಮೊತ್ತದ ಆಫರ್ ನ ತಿರಸ್ಕರಿಸಲು ಪ್ರಭಾಸ್ ಕೊಟ್ಟ ಕಾರಣ ತಿಳಿದರೇ ನೀವು ಮತ್ತಷ್ಟು ಶಾಕ್ ಆಗುವುದು ಗ್ಯಾರಂಟಿ. ನಾನು ಹಣಕ್ಕಾಗಿ ಬ್ರಾಂಡ್ ಹಿಂದೆ ಓಡುವುದಿಲ್ಲ, ಬಹಳ ಕಷ್ಟಪಟ್ಟ ಮೇಲೆ ಜನ ನನ್ನನ್ನ ಇಷ್ಟಪಟ್ಟು ಆರಿಸಿದ್ದಾರೆ. ಹಾಗಾಗಿ ನನ್ನ ಸ್ಥಾನ ಹಾಗೂ ಜವಾಬ್ದಾರಿ ಮೇಲೆ ನನಗೆ ಅರಿವಿದೆ. ಹಾಗಾಗಿ ನಾನು ತುಂಬಾ ಸೆಲೆಕ್ಟಿವ್. ಹಾಗಾಗಿ ಆ ಆಫರ್ ಗಳನ್ನ ಮುಲಾಜಿಲ್ಲದೇ ತಿರಸ್ಕಾರ ಮಾಡಿದೆ ಎಂದು ಹೇಳಿದರು. ಪ್ರಭಾಸ್ ಈ ಥರ ಮಾಡುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆ ಬಾಹುಬಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಸಹ ಅವರು ಹೀಗೆ ಜಾಹಿರಾತು ಆಫರ್ ಗಳನ್ನು ಒಪ್ಪಿರಲಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.