ಬ್ರಾಹ್ಮಣ್ಯದ ವಿಚಾರದಲ್ಲಿ ನಟ ಚೇತನ್ ಗೆ ಬೆಂಬಲ ಸೂಚಿಸಿದ ಮತ್ತೊಬ್ಬ ಕನ್ನಡದ ನಟ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಉಪೇಂದ್ರ ರವರು ಹಲವಾರು ಬಡವರಿಗೆ ಕೋರೋಣ ಸಮಯದಲ್ಲಿ ರೇಷನ್ ಕಿಟ್ ನೀಡಿದ್ದರು. ಇದೇ ಸಮಯದಲ್ಲಿ ದೇವಾಲಯದಲ್ಲಿ ಕೆಲಸ ಮಾಡುವ ಅರ್ಚಕರಿಗೆ ಕೂಡ ರೇಷನ್ ಕಿಟ್ ನೀಡುತ್ತಿರುವುದಾಗಿ ಹೇಳಿ, ಅದರಂತೆ ರೇಷನ್ ಕಿಟ್ ನೀಡಿ ಫೋಟೋ ಅಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಆ ದಿನಗಳು ನಟ ಚೇತನ್ ರವರು ಮಾತನಾಡಿದ್ದ ವಿಡಿಯೋ ಬಹಳ ವೈರಲ್ ಆಗಿತ್ತು. ಈ ವಿಡಿಯೋ ಗೆ ಆಕ್ಷೇಪ ವ್ಯಕ್ತ ಪಡಿಸಿ, ಹಲವಾರು ಜನ ಧ್ವನಿ ಎತ್ತಿದ್ದರು, ಅದರಂತೆ ಬೆಂಬಲದ ಮಾತುಗಳು ಕೂಡ ಕೇಳಿ ಬಂದಿದ್ದವು.

ಇದಾದ ನಂತರ ಹಲವಾರು ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಈಗಾಗಲೇ ಈ ವಿಚಾರ ಠಾಣೆಯ ಮೆಟ್ಟಿಲು ಕೂಡ ಹತ್ತಿದ್ದು, ನಟ ಚೇತನ್ ರವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಆದರೂ ಕೂಡ ಚೇತನ್ ರವರು ರಮ್ಮ ಮಾತಿನಿಂದ ಹಿಂದೆ ಸರಿಯುವ ಆಲೋಚನೆ ಕೂಡ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೀಗ ಈ ವಿಚಾರ ಮತ್ತಷ್ಟು ಸದ್ದು ಮಾಡಲು ಆರಂಭಿಸಿದ್ದು, ಸಿಹಿ ಕಹಿ ಚಂದ್ರು ರವರ ಅಳಿಯ ಹಾಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿರುವ ನಟ ಕಿರಣ್ ಶ್ರೀನಿವಾಸ್ ರವರು ಇದೀಗ ಚೇತನ್ ರವರ ಪರವಾಗಿ ಮಾತನಾಡಿ, ಚೇತನ್ ರವರು ಸಮಾಜದಲ್ಲಿ ಅಸಮಾನತೆ ಕುರಿತು ಮಾತನಾಡಿದ್ದಾರೆ. ಮಾತನಾಡದೆ ಇದ್ದರೇ ಈ ರೀತಿಯ ಸಮಸ್ಯೆಗಳು ಬಗೆ ಹರಿಯುವುದಿಲ್ಲ, ವಿಡಿಯೋ ಕುರಿತು ಮಾತನಾಡಿ, ಅವರು ಹೇಳಿದ ಮಾತುಗಳಿಗೆ ನನ್ನ ಬೆಂಬಲವಿದೆ, ವರು ನನ್ನ ಆತ್ಮೀಯ ಗೆಳೆಯ ಸಹ ಹೌದು ಎಂದು ಹೇಳಿದ್ದಾರೆ. ಎಲ್ಲರೂ ಚೇತನ್ ಬೆಂಬಲಕ್ಕೆ ನಿಲ್ಲೋಣ, ಬೆಂಬಲ ಇಲ್ಲದೆ ಇದ್ದರೂ ಕೂಡ ಮಾತನಾಡಿ ಎಲ್ಲರೂ ಸಮಸ್ಯೆ ಬಗೆಹರಿಸೋಣ ಎಂದಿದ್ದಾರೆ.

Facebook Comments

Post Author: Ravi Yadav