ಕೇವಲ ಭಾರತ ಮಾತ್ರವಲ್ಲ ಬೇರೆ ದೇಶದ ಪರವಾಗಿಯೂ ಆಡಿ ಶತಕಗಳಿಸಿದ್ದರಂತೆ ರಾಹುಲ್ ದ್ರಾವಿಡ್. ಯಾವುದು ಗೊತ್ತೇ??

ಕೇವಲ ಭಾರತ ಮಾತ್ರವಲ್ಲ ಬೇರೆ ದೇಶದ ಪರವಾಗಿಯೂ ಆಡಿ ಶತಕಗಳಿಸಿದ್ದರಂತೆ ರಾಹುಲ್ ದ್ರಾವಿಡ್. ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಹುಲ್ ದ್ರಾವಿಡ್ ಭಾರತ ಕ್ರಿಕೇಟ್ ಕಂಡ ಶ್ರೇಷ್ಠ ಆಟಗಾರ. ಸವ್ಯಸಾಚಿ ಎಂಬ ಬಿರುದಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ದಿ ವಾಲ್ ಎಂದೇ ಖ್ಯಾತರಾಗಿದ್ದ ರಾಹುಲ್, 1996 ರಿಂದಲೂ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಟೆಸ್ಟ್ ಕ್ರಿಕೇಟ್ ನಲ್ಲಿ ಹಲವಾರು ವಿದೇಶಗಳಲ್ಲಿ ಭಾರತದ ಪರ ಹೆಚ್ಚು ಶತಕ ಹಾಗೂ ರನ್ನುಗಳನ್ನ ಗಳಿಸಿದ ಆಟಗಾರ. ಇಂದಿಗೂ ಕೂಡ ಯುವ ಆಟಗಾರರಿಗೆ ಕೋಚ್ ಆಗುವ ಮೂಲಕ ಭಾರತ ಕ್ರಿಕೆಟ್ ಲೋಕ ಎಂದಿಗೂ ಮರೆಯದ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಭಾರತ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೊದಲ ಭಾರಿಗೆ ಟೆಸ್ಟ್ ಪಂದ್ಯ ಜಯಿಸವಲ್ಲಿ ಸಹ ರಾಹುಲ್ ಪಾತ್ರ ದೊಡ್ಡದು. ಭಾರತ ಹಲವಾರು ದೇಶಗಳಲ್ಲಿ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ರಾಹುಲ್ ಬ್ಯಾಟ್ ನಿಂದ ಹರಿದು ಬಂದ ರನ್ನುಗಳೇ ಕಾರಣ. ರಾಹುಲ್ ದ್ರಾವಿಡ್ ಕರ್ನಾಟಕ, ಭಾರತ ಎ, ಆರ್ಸಿಬಿ, ಆರ್.ಆರ್ ತಂಡಗಳನ್ನ ಮಾತ್ರ ಪ್ರತಿನಿಧಿಸಿಲ್ಲ. ಅದರ ಜೊತೆ ಇಂಗ್ಲೆಂಡ್ ನ ಕೌಂಟಿ ಕ್ರಿಕೇಟ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅದರ ಬೇರೊಂದು ದೇಶದ ಪರ ಸಹ 2003 ರಲ್ಲಿ ಕಣಕ್ಕಿಳಿದಿದ್ದರು.

ಹೌದು ಆ ದೇಶ ಬೇರೆ ಯಾವುದು ಅಲ್ಲ. 2003 ರ ನ್ಯಾಶನಲ್ ಕ್ರಿಕೇಟ್ ಲೀಗ್ ನಲ್ಲಿ ದ್ರಾವಿಡ್ ಸ್ಕಾಟಲ್ಯಾಂಡ್ ತಂಡದ ಪರ ಕಣಕ್ಕಿಳಿದಿದ್ದರು. ಸ್ಕಾಟ್ಲ್ಯಾಂಡ್ ತಂಡದ ಪರ ಒಟ್ಟು 12 ಪಂದ್ಯ ಆಡಿದ್ದ ರಾಹುಲ್ ದ್ರಾವಿಡ್ ಒಟ್ಟು 600 ರನ್ ಗಳಿಸಿದ್ದರು. ಅದರಲ್ಲಿ 3 ಶತಕ ಹಾಗೂ 2 ಅರ್ಧ ಶತಕಗಳಿದ್ದವು. ಈ ಮೂಲಕ ಸ್ಕಾಟ್ ಲ್ಯಾಂಡ್ ಪರ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ರಾಹುಲ್ ದ್ರಾವಿಡ್ ರವರ ಈ ಸಾಧನೆಯ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.