ತೇಜಸ್ ಗತಿಯನ್ನೇ ಬದಲಾಯಿಸಲು ಎಂಟ್ರಿ ಕೊಟ್ಟ ಇಸ್ರೇಲ್, ತೇಜಸ್ ಗೆ ಆನೆಬಲ ನೀಡುವಲ್ಲಿ ಯಶಸ್ವಿ. ಮಾಧ್ಯಮಗಳೇ ಕಾಣುತ್ತಿಲ್ಲವೇ??

ತೇಜಸ್ ಗತಿಯನ್ನೇ ಬದಲಾಯಿಸಲು ಎಂಟ್ರಿ ಕೊಟ್ಟ ಇಸ್ರೇಲ್, ತೇಜಸ್ ಗೆ ಆನೆಬಲ ನೀಡುವಲ್ಲಿ ಯಶಸ್ವಿ. ಮಾಧ್ಯಮಗಳೇ ಕಾಣುತ್ತಿಲ್ಲವೇ??

ನಮಸ್ಕಾರ ಸ್ನೇಹಿತರೇ, ಒಂದು ದೇಶದ ಆರ್ಥಿಕತೆಗೆ ಆ ದೇಶದಲ್ಲಿ ಒಂದು ತೈಲ ಉತ್ಪನ್ನಗಳು ಸಿಗಬೇಕು ಇಲ್ಲವಾದಲ್ಲಿ ಬಹಳ ಅಪರೂಪದ ಖನಿಜ ಸಂಪತ್ತು ಇರಬೇಕು, ಎರಡು ಇಲ್ಲ ಎಂದರೆ ಆ ದೇಶ ಅಭಿವೃದ್ಧಿ ಆಗಬೇಕು ಎಂದರೆ ಯುದ್ಧಕ್ಕೆ ಅಗತ್ಯವಿರುವ ಉಪಕರಣಗಳನ್ನು ತಯಾರಿಸಿ ಇತರ ದೇಶಗಳಿಗೆ ಮಾರಾಟ ಮಾಡಿದರೇ ಮಾತ್ರ ಆ ದೇಶ ಜಗತ್ತಿನಲ್ಲಿ ಒಂದು ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ, ಇದನ್ನು ಮನಗಂಡಿರುವ ಭಾರತ ಇದೀಗ ಕಳೆದ ಕೆಲವು ವರ್ಷಗಳಿಂದ ಯುದ್ಧ ಸಾಮಗ್ರಿಗಳನ್ನು ಇಲ್ಲಿ ತಯಾರಿ ಮಾಡಿ, ಇತರ ದೇಶಗಳಿಗೆ ರಫ್ತ್ತು ಮಾಡುವ ಮಹತ್ವಾಕಾಂಶೆ ಯನ್ನು ಹೊಂದಿದೆ.

ಅದೇ ನಿಟ್ಟಿನಲ್ಲಿ ವಿವಿಧ ಯುದ್ಧ ಉಪಕರಣಗಳನ್ನು ಭಾರತ ಇದೀಗ ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದೆ, ಇನ್ನು ತೇಜಸ್ ಯುದ್ಧ ವಿಮಾನ ಕೂಡ ಇನ್ನೇನು ಕೆಲವು ಕೆಲವು ವರ್ಷಗಳಲ್ಲಿ ಬಾರಿ ಬೇಡಿಕೆ ಪಡೆಯಲಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ದಿನೇ ದಿನೇ ತೇಜಸ್ ಯುದ್ಧ ವಿಮಾನ ಸಾಕಷ್ಟು ಶಕ್ತಿ ಯನ್ನು ಪಡೆದುಕೊಳ್ಳುತ್ತಿದೆ. ಇದೀಗ ನಮ್ಮ ದೇಶದ ಆಪ್ತ ಮಿತ್ರ ಇಸ್ರೇಲ್ ದೇಶವು ನೀಡಿರುವಂತಹ ಮತ್ತೊಂದು ಅಸ್ತ್ರವನ್ನು ತನ್ನ ತೆಕ್ಕೆಗೆ ಸೇರಿಸ್ಕೊಂಡು ಮಹಾ ಶಕ್ತಿಯಾಗಿ ರೂಪುಗೊಂಡಿದೆ.

ಹೌದು ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಪ್ರಪಂಚದ ಅತ್ಯಾಧುನಿಕ ಮಿಸೈಲ್ ಗಳಲ್ಲಿ ಒಂದಾಗಿರುವ ಪೈಥಾನ್-5 ಕ್ಷಿಪಣಿಯನ್ನು ತೇಜಸ್ ಗೆ ಸೇರಿಸಲು ಮುಂದಾಗಿ ಟೆಸ್ಟಿಂಗ್ ಆರಂಭ ಮಾಡಲಾಗಿತ್ತು. ಪ್ರಮುಖವಾಗಿ ಯುದ್ಧ ವಿಮಾನಗಳನ್ನು ಬೆನ್ನಟ್ಟುವಾಗ ಮಿಸೈಲ್ ಹಾಕಿ ಕ್ಷಣ ಮಾತ್ರದಲ್ಲಿ 180 ತಿರುವು ಪಡೆದು ವಾಪಸ್ಸು ತಿರುಗಬೇಕಾಗಿತ್ತು, ಇದು ಕೊನೆಯ ಹಂತದ ಟೆಸ್ಟಿಂಗ್ ಆಗಿತ್ತು, ಈ ಹಂತದಲ್ಲಿಯೂ ಕೂಡ ತೇಜಸ್ ಯಶಸ್ವಿಯಾಗಿದ್ದು, ಇಸ್ರೇಲ್ ದೇಶದ ಪೈಥಾನ್-5 ಕ್ಷಿಪಣಿಗಳು ತೇಜಸ್ ಗೆ ಹೇಳಿ ಮಾಡಿಸಿದಂತಿವೆ. ಈ ಮೂಲಕ ತೇಜಸ್ ಗೆ ಇದೀಗ ಆನೆ ಬಲ ಬಂದಂತಾಗಿದ್ದು ತೇಜಸ್ ಯುದ್ಧ ವಿಮಾನಗಳಿಗೆ ಮತ್ತಷ್ಟು ಬೇಡಿಕೆ ಕೇಳಿ ಬರುವುದು ಖಚಿತ. ಈ ಸಮಯದಲ್ಲಿ ನಾವು ನಮ್ಮ ಆಪ್ತ ಮಿತ್ರ ಇಸ್ರೇಲ್ ದೇಶಕ್ಕೆ ವಿಶೇಷ ಧನ್ಯವಾದಗಳನ್ನು ತಿಳಿಸಲೇ ಬೇಕಾಗಿದೆ.