ಕೇವಲ ಒಂದು ತಗಚಿ ಗಿಡದಿಂದ ನಿಮಗೆ ಎಷ್ಟೆಲ್ಲ ಲಾಭ ಸಿಗುತ್ತವೆ ಎಂಬುದನ್ನು ಅಂದಾಜಿಸಲು ಕೂಡ ಸಾಧ್ಯವಿಲ್ಲ. ಎಷ್ಟೆಲ್ಲ ಲಾಭವಿದೆ ಗೊತ್ತೇ??
ಕೇವಲ ಒಂದು ತಗಚಿ ಗಿಡದಿಂದ ನಿಮಗೆ ಎಷ್ಟೆಲ್ಲ ಲಾಭ ಸಿಗುತ್ತವೆ ಎಂಬುದನ್ನು ಅಂದಾಜಿಸಲು ಕೂಡ ಸಾಧ್ಯವಿಲ್ಲ. ಎಷ್ಟೆಲ್ಲ ಲಾಭವಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ಎಂತಹ ಸುಂದರ ದೇಶವೆಂದರೆ ಪ್ರಕೃತಿಯಲ್ಲಿ ಹಲವಾರು ಔಷಧೀಯ ಗುಣಗಳುಳ್ಳ ಗಿಡಗಳನ್ನು ಆ ದೇವರು ಸೃಷ್ಟಿಸಿದ್ದಾರೆ. ಈಗ ಏನಾದರೂ ಅನಾರೋಗ್ಯ ಬಂದರೆ ಜನರು ಆಸ್ಪತ್ರೆಗೆ ಓಡಾಡುವುದು ಜಾಸ್ತಿ. ಆದರೆ ನಮ್ಮ ಹಳ್ಳಿಯ ಜನರು ಪ್ರಕೃತಿಯಲ್ಲಿ ಸಿಗುವ ಅದೆಷ್ಟು ಔಷಧೀಯ ಗುಣಗಳುಳ್ಳ ಗಿಡಗಳ ಸಹಾಯದಿಂದ ಅನಾರೋಗ್ಯವನ್ನು ಶಮನ ಮಾಡಿಕೊಳ್ಳುತ್ತಾರೆ.
ಇಂದು ಅಂತಹದ್ದೇ ಗಿಡದ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಈ ಗಿಡವನ್ನು ನೀವು ಸುತ್ತಮುತ್ತಲ ಪರಿಸರಗಳಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು ಆದರೆ ಅದರ ಪ್ರಯೋಜನಗಳು ಎಷ್ಟು ಎಂಬುದು ನಿಮಗೇನಾದರೂ ಗೊತ್ತೇ ಗಿಡ ಯಾವುದೆಂಬುದು ನಿಮಗೆ ಗೊತ್ತೆ. ಬನ್ನಿ ಆ ಗಿಡ ಯಾವುದು ಅದರಿಂದ ಆಗುವ ಉಪಯೋಗಗಳು ಎಂಥದ್ದು ಎಂದು ಹೇಳುತ್ತೇವೆ. ಹೌದು ನಾವು ಹೇಳಹೊರಟಿರುವುದು ದೊಡ್ಡ ತಗಚಿ ಗಿಡ ಅಥವಾ ವೈದ್ಯಕೀಯ ಭಾಷೆಯಲ್ಲಿ ಹುಳುಕಡ್ಡಿ ಗಿಡ ಎಂದೇ ಪ್ರಸಿದ್ಧವಾಗಿರುವ ಈ ಗಿಡ ಬಿಡುವ ಹಳದಿ ಹೂವುಗಳು ಅತ್ತ ಆರೋಗ್ಯಕ್ಕೂ ಉಪಯುಕ್ತ ಇತ್ತ ಅಲಂಕಾರಕ್ಕೂ ಸಿದ್ಧ.
ಈ ತಗಚಿ ಗಿಡದಿಂದಾಗುವ ಉಪಯೋಗಗಳ ಬಗ್ಗೆ ಹೇಳುತ್ತೇವೆ ಬನ್ನಿ. ಮೊದಲಿಗೆ ಹುಳುಕಡ್ಡಿಗೆ. ಹೌದು ಸ್ನೇಹಿತರೆ ಈ ಗಿಡದ ಎಲೆಗಳನ್ನು ಮೊಸರಿನೊಂದಿಗೆ ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಚರ್ಮ ಸಂಬಂಧಿ ಕಾಯಿಲೆಗಳು ದೂರಾಗುತ್ತದೆ. ಅಲ್ಲದೆ ತಗಚಿ ಎಲೆಗಳನ್ನು ಆಯುರ್ವೇದಿಕ್ ಗುಣಗಳುಳ್ಳ ಅರಿಶಿನದೊಂದಿಗೆ ಅರೆದು ಮುಖಕ್ಕೆ ಹಚ್ಚಿಕೊಂಡರೆ ಸಾಕು. ಅರ್ಧ ಗಂಟೆ ನಂತರ ಮುಖ ತೊಳೆದು ನೋಡಿ ನಿಮ್ಮ ಮುಖದ ಕಾಂತಿ ಹೆಚ್ಚಾಗಿರುತ್ತದೆ. ಇನ್ನು ಎರಡನೆಯದಾಗಿ ಚರ್ಮರೋಗಕ್ಕೆ. ಈ ತಗಚಿ ಎಲೆಗಳನ್ನು ನಿಂಬೆರಸ ಹಾಗೂ ಕರ್ಪೂರದ ಪುಡಿಯೊಂದಿಗೆ ಸೇರಿಸಿ ಚರ್ಮಕ್ಕೆ ಹಚ್ಚಿಕೊಂಡರೆ ನೀವು ಅನುಭವಿಸುತ್ತಿರುವ ಚರ್ಮರೋಗದಿಂದ ದೂರವಾಗಬಹುದು ಎಂಬುದು ಸಾಬೀತಾಗಿದೆ.
ಮೂರನೆಯದಾಗಿ ಬಾಯಿಹುಣ್ಣಿಗೆ. ಈ ಗಿಡದ ಎಲೆಗಳನ್ನು ಜಜ್ಜಿ ಇದಕ್ಕೆ ಎರಡು ಲೋಟ ನೀರು ಹಾಕಿ ಕುದಿಸಿ ನಂತರ ಇದನ್ನು ಸೋಸಿ ಇದರಿಂದ ಬಂದಂತಹ ನೀರನ್ನು ಬಾಯಿಹಾಕಿ ಮುಕ್ಕಳಿಸಿದರೆ ಸಾಕು ಬಾಯಲ್ಲಿರುವ ಹುಣ್ಣು ಮಾಯವಾಗುತ್ತದೆ. ಹುಳು ಹಪ್ಪಟ್ಟೆ ಕ್ರಿಮಿಕೀಟಗಳು ಕಚ್ಚಿದಾಗ ಇದರ ಸೊಪ್ಪಿನ ಲೇಪನವನ್ನು ಹಾಕಿದಾಗ ಕೂಡಲೇ ಬೇನೆ ಹಾಗು ಕಲೆಗಳು ಮಾಯವಾಗುತ್ತದೆ. ಇನ್ನು ಮಲಬದ್ಧತೆ ಸಮಸ್ಯೆಗೆ ಇದು ರಾಮಬಾಣ. ಈ ತಗಚಿ ಗಿಡದ ಏಳರಿಂದ ಎಂಟು ಎಲೆಗಳನ್ನು ಜಜ್ಜಿ ನೀರಿನಲ್ಲಿ ಸರಿಯಾಗಿ ಕುದಿಸಿ ಕಷಾಯ ಮಾಡಿ ಅದನ್ನು ಆಗಾಗ ಸೇವಿಸಿ ನೀವು ಅನುಭವಿಸುತ್ತಿರುವ ಮಲಬದ್ಧತೆ ಸಮಸ್ಯೆಯಿಂದ ಮುಕ್ತರಾಗಿ.
ಈ ಗಿಡದ ಎಲೆಯ ಉಪಯೋಗಗಳು ತಜ್ಞರಿಂದ ಹೇಳಲ್ಪಟ್ಟ ಲಾಗಿರುತ್ತದೆ. ಅಲ್ಲಿಂದ ಆಯ್ದ ಅಂಶಗಳನ್ನು ನಾವು ಇಲ್ಲಿ ಹೇಳಿದ್ದೇವೆ. ಒಂದು ವೇಳೆ ನೀವು ಈ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಈ ಮೇಲೆ ನಾವು ಹೇಳಿದಂತಹ ಪರಿಹಾರವನ್ನು ನೀವು ಕೂಡ ಪ್ರಯೋಗಿಸಿ ನೋಡಬಹುದು ಇದರಲ್ಲಿ ಯಾವುದೇ ಒತ್ತಾಯವಿಲ್ಲ. ಒಂದು ವೇಳೆ ನೀವು ಕೂಡ ಇದನ್ನು ಮೊದಲು ಉಪಯೋಗಿಸಿದ್ದರೆ ಅದು ಪರಿಣಾಮಕಾರಿ ಆಗಿದ್ದರೆ ಈ ಕೂಡಲೇ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.