ಬಿಗ್ ನ್ಯೂಸ್: ನುಸ್ರತ್ ಜಹಾನ್ ಗೆ ಬಿಗ್ ಶಾಕ್, ಸಂಸದೆ ಸ್ಥಾನದ ಬುಡಕ್ಕೆ ಇಟ್ಟ ಬಿಜೆಪಿ, ನಡೆದ್ದದ್ದೆನು ಗೊತ್ತೇ??

ಬಿಗ್ ನ್ಯೂಸ್: ನುಸ್ರತ್ ಜಹಾನ್ ಗೆ ಬಿಗ್ ಶಾಕ್, ಸಂಸದೆ ಸ್ಥಾನದ ಬುಡಕ್ಕೆ ಇಟ್ಟ ಬಿಜೆಪಿ, ನಡೆದ್ದದ್ದೆನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸಂಸದೆ ನುಸ್ರತ್ ಜಹಾನ್ ರವರು ಕಳೆದ ಕೆಲವು ತಿಂಗಳುಗಳಿಂದ ಬಾರಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿಯೂ ಚುನಾವಣೆಗೂ ಮುನ್ನ ತಾವು ಮುಸ್ಲಿಂ ಆಗಿದ್ದರೂ ಹಿಂದೂ ನಟರನ್ನು ಮಡೆಯಾಗಿದ್ದರು, ಅಷ್ಟೇ ಅಲ್ಲದೇ, ಹಲವಾರು ಮುಸ್ಲಿಂ ಮುಖಂಡರು ಬಹಿರಂಗವಾಗಿ ನುಸ್ರತ್ ಜಹಾನ್ ರವರ ವಿರುದ್ಧ ಟೀಕೆಗಳನ್ನು ಮಾಡಿದರೂ ಕೂಡ ನುಸ್ರತ್ ಜಹಾನ್ ರವರು ತಲೆ ಕೆಡಿಸಿಕೊಂಡಿರಲಿಲ್ಲ.

ದುರ್ಗಾ ಪೂಜೆ ಮಾಡಲು ಹೋಗಬಾರದು ಹಣೆಯಲ್ಲಿ ಕುಂಕುಮ ಇಡಬಾರದು ಎಂದೆಲ್ಲ ನುಸ್ರತ್ ಜಹಾನ್ ರವರಿಗೆ ಮುಸ್ಲಿಂ ಮುಖಂಡರು ಹೇಳಿದ್ದರು. ಆದರೆ ನುಸ್ರತ್ ಜಹಾನ್ ರವರು ಹಿಂದೂ ಸಂಪ್ರದಾಯವನ್ನು ಗೌರವಿಸುವ ಮೂಲಕ ಇಡೀ ದೇಶದ ಎಲ್ಲೆಡೆ ಸದ್ದು ಮಾಡಿದ್ದರು. ಹೀಗೆ ಜನಪ್ರಿಯತೆ ಪಡೆದುಕೊಂಡ ಕೆಲವೇ ದಿನಗಳನ್ನು ಲೋಕಸಭಾ ಸಂಸದೆಯಾಗಿ ಗೆದ್ದು ಬಂದರು. ಸಂಸತ್ ನಲ್ಲಿಯೂ ಅಷ್ಟೇ ತನ್ನ ಅಪ್ಪಟ ಭಾರತೀಯ ನಾರಿಯಂತೆ ಸೀರೆಯುಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದಕ್ಕೂ ಕೂಡ ಆಕ್ಷೇಪ ವ್ಯಕ್ತವಾಗಿತ್ತು.

ಆದರೆ ಇದೀಗ ತಾನು ಮದುವೆ ಆಗಿಯೇ ಇಲ್ಲ ಅದು ಕೇವಲ ಲಿವಿಂಗ್ ರಿಲೇಶನ್ ಶಿಪ್ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ ಅವರ ಸಂಸದ ಸ್ಥಾನ ಕೂಡ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ನಾಮ ಪಾತ್ರದಲ್ಲಿ ಮದುವೆಯಾಗಿದೆ ಎಂದು ತಿಳಿಸಿದ್ದಾರೆ ಹಾಗೂ ಲೋಕಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವಾಗ ನುಸ್ರತ್ ಜಹಾನ್ ತನ್ನ ಹೆಸರನ್ನು ‘ನುಸ್ರತ್ ಜಹಾನ್ ರುಹಿ ಜೈನ್’ ಎಂದು ಉಚ್ಚರಿಸಿದ್ದಾರೆ. ಆದರೆ ಇದೀಗ ಮದುವೆ ಮಾನ್ಯವೇ ಅಲ್ಲಾ ಎಂಬುದು ತಿಳಿದು ಬಂದಿದೆ. ಆದ ಕಾರಣ ನುಸ್ರತ್ ಜಹಾನ್ ಮತದಾರರನ್ನು ವಂಚಿಸಿದ್ದಾರೆ ಎಂದು ಬಿಜೆಪಿ ಬಿಜೆಪಿ ಸಂಸದ ಸಂಘಮಿತ್ರ ಮೌರ್ಯ ಮನವಿ ಸಲ್ಲಿಸಿದ್ದಾರೆ.