ಕೇರಳ ಪ್ರತಿ ಮಹಿಳೆಯರು ಕೂಡ ತಪ್ಪದೆ ಕೇರಳ ವಿಶೇಷ ಬಿಳಿ ಸೀರೆ ಉಟ್ಟಿಕೊಳ್ಳುತ್ತಾರೆ, ಯಾಕೆ ಗೊತ್ತೇ??
ಕೇರಳ ಪ್ರತಿ ಮಹಿಳೆಯರು ಕೂಡ ತಪ್ಪದೆ ಕೇರಳ ವಿಶೇಷ ಬಿಳಿ ಸೀರೆ ಉಟ್ಟಿಕೊಳ್ಳುತ್ತಾರೆ, ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ ವಿವಿಧ ಬಗೆಯ ಸಂಪ್ರದಾಯ ಆಚರಣೆ ಹಾಗೂ ವಿಚಾರಗಳು ಬೇರೆ ಬೇರೆಯಾಗಿ ಆಚರಿಸುತ್ತಾರೆ. ಆದರೆ ಹಿಂದೂ ಧರ್ಮದ ಪ್ರಕಾರ ಅವೆಲ್ಲ ಒಂದೇ ಅರ್ಥವನ್ನು ನೀಡುತ್ತದೆ. ಇದು ನಾವು ಕೇರಳದವರ ವಿಷಯದಲ್ಲಿ ಹೇಳೋದಾದರೆ ಎಲ್ಲರೂ ಹೆಂಗಸರು ಬಿಳಿಸೀರೆ ಯನ್ನು ಹೆಚ್ಚಾಗಿ ಉಟ್ಟು ಕೊಳ್ಳುತ್ತಾರೆ. ಕೆಲವರಿಗೆ ಇದು ಕೇವಲ ಚೆನ್ನಾಗಿ ಕಾಣಿಸಬಹುದು ಆದರೆ ಕೆಲವರಿಗೆ ಇದು ಏಕೆ ಎಲ್ಲರೂ ಒಂದೇ ತರಹದ ವಸ್ತುಗಳನ್ನು ಹಾಕುತ್ತಾರೆ ಎಂಬ ಗೊಂದಲಗಳು ಇರುತ್ತದೆ. ಬನ್ನಿ ಸ್ನೇಹಿತರೆ ಕೇರಳದಲ್ಲಿ ಮಹಿಳೆಯರು ಬಿಳಿ ಸೀರೆಯನ್ನು ಅತಿಯಾಗಿ ಉಟ್ಟುಕೊಳ್ಳಲು ಕಾರಣ ಏನೆಂಬುದನ್ನು ಹೇಳುತ್ತೇನೆ.
ಹೌದು ಸ್ನೇಹಿತರೇ ಇದಕ್ಕೆ ಆದಿಶಂಕರಾಚಾರ್ಯರು ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಸಂಬಂಧಪಡುತ್ತದೆ. ಈ ಕಥೆಯನ್ನು ನಿಮಗೆ ಪೂರ್ಣವಾಗಿ ಹೇಳುತ್ತೇವೆ ಬನ್ನಿ. ಹಿಂದೂ ಸಂಪ್ರದಾಯ ಹಾಗೂ ಧರ್ಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದವರಲ್ಲಿ ಆದಿಶಂಕರಾಚಾರ್ಯರು ಕೂಡ ಒಬ್ಬರು. ಒಮ್ಮೆ ಆದಿಶಂಕರಾಚಾರ್ಯರು ಎಲ್ಲ ಬಂಧವನ್ನು ಕಳೆದು ಸನ್ಯಾಸ ದೀಕ್ಷೆಯನ್ನು ಪಡೆಯಲು ಹೊರಟಾಗ ಅವರ ತಾಯಿ ನಾನು ಒಂದೊಮ್ಮೆ ಈ ಜಗತ್ತನ್ನು ಬಿಟ್ಟು ಹೋದರೆ ನನ್ನ ಕರ್ಮಗಳನ್ನು ಮಾಡುವವರು ಯಾರು ನನ್ನ ಕೊನೆಯ ಕ್ಷಣಗಳಲ್ಲಿ ಆದರೂ ನೀನು ನನ್ನ ಬಳಿ ಬರುತ್ತೀಯ ಎಂದು ಅಂಗಲಾಚಿದರು.
ಆಗ ಆದಿಶಂಕರಾಚಾರ್ಯರು ನನ್ನನ್ನು ಒಂದು ಕ್ಷಣ ನೆನೆ ನಾನು ಖಂಡಿತ ಬರುತ್ತೇನೆ ಎಂದು ಹೇಳಿ ಹೋದರು. ನಂತರ ಆದಿ ಶಂಕರಾಚಾರ್ಯರ ತಾಯಿ ಕೊನೆಯ ಕ್ಷಣಗಳನ್ನು ಕಳೆಯಬೇಕಾದರೆ ತನ್ನ ಮಗನನ್ನು ನೆನೆಸಿಕೊಂಡರು ಆದಿ ಶಂಕರಾಚಾರ್ಯರು ತಮ್ಮ ತಾಯ ಬಳಿಗೆ ಬಂದರು. ಇತ್ತ ಆದಿಶಂಕರಾಚಾರ್ಯರು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದರಿಂದ ಎಲ್ಲ ಬಂಧನಗಳನ್ನು ಕಳೆದಿದ್ದರಿಂದ ತಾಯಿಯ ಸಂಸ್ಕಾರಗಳನ್ನು ಮಾಡುವ ಹಾಗಿರಲಿಲ್ಲ.
ಅವರು ಊರವರನ್ನು ಕೇಳಿಕೊಂಡಾಗ ಊರವರು ಅವರ ತಾಯಿ ವಿಧವೆ ಎಂಬ ಕಾರಣಕ್ಕೆ ಅವರ ಕಾರ್ಯಗಳನ್ನು ಮಾಡಲು ಒಪ್ಪಿಕೊಳ್ಳಲಿಲ್ಲ. ನಂತರ ಆದಿಶಂಕರಾಚಾರ್ಯರು ಕೊಲ್ಲೂರು ಮೂಕಾಂಬಿಕೆ ನೆನೆಸಿಕೊಂಡು ಪ್ರಾರ್ಥಿಸಿದರು ಆಗ ಯೋಗ ಅಗ್ನಿ ಬಂದು ಅವರ ತಾಯಿಯನ್ನು ಲೀನ ಗೊಳಿಸಿತು. ಇದಾದ ನಂತರ ಊರವರ ಮೇಲೆ ತನ್ನ ತಾಯಿ ವಿಧವೆ ಎಂಬ ಕಾರಣಕ್ಕೆ ಅವರ ಸಂಸ್ಕಾರಗಳನ್ನು ಮಾಡಿದ್ದಕ್ಕೆ ಕುಪಿತರಾಗಿ ನೀವು ವಿಧವೆಯರಾಗಿ ಎಂದು ಶಾಪ ಕೊಟ್ಟರು. ಅದಾದನಂತರ ಅವರವರ ಮಾಂಗಲ್ಯ ಭಾಗ್ಯ ಒಂದೊಂದಾಗಿ ಕಳಚಿಕೊಂಡು ಬಂದಿತು.
ಇದರಿಂದ ಬೆದರಿದ ಊರವರು ಆದಿ ಶಂಕರಾಚಾರ್ಯರ ಬಳಿಗೆ ಬಂದು ಕ್ಷಮೆಯಾಚಿಸಿದರು. ನಂತರ ಶಾಪವನ್ನು ಇನ್ನು ಗೊಳಿಸಲು ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿ ಎಂಬ ಮಾತನ್ನು ಹೇಳಿದರು. ಅದಕ್ಕಾಗಿ ಇಂದೂ ಸಹ ಉಡುಪಿಯ ಭಾಗದಲ್ಲಿರುವ ಶ್ರೀ ಪುಣ್ಯಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕೆ ಕನ್ನಡಿಗರಿಗಿಂತ ಹೆಚ್ಚಾಗಿ ಕೇರಳಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವಾಗ ಹಾಗೂ ಕೆಲವು ಶುಭ ಸಂದರ್ಭಗಳಲ್ಲಿ ಬಿಳಿ ಬಟ್ಟೆಯನ್ನು ತೊಟ್ಟು ದೇವರಿಗೆ ಪೂಜೆ ಮಾಡುವುದು ಅವರ ಸಂಪ್ರದಾಯವಾಗಿಬಿಟ್ಟಿದೆ.
ಈಗಲಾದರೂ ಗೊತ್ತಾಯ್ತಲ್ಲ ಸ್ನೇಹಿತರೆ ಕೇರಳಿಗ ಹೆಣ್ಣುಮಕ್ಕಳು ಯಾಕೆ ಹೆಚ್ಚಾಗಿ ಬಿಳಿ ಬಟ್ಟೆಯನ್ನು ತೊಟ್ಟುತ್ತಾರೆ ಎಂದು. ಇದು ಅವರ ಅನಾದಿಕಾಲದಿಂದ ಆದಿಶಂಕರಾಚಾರ್ಯ ಕಾಲದಿಂದಲೂ ನಡೆದು ಬಂದಂತಹ ವಿಧಾನ. ಅಂದು ಕೂಡ ಆದಿಶಂಕರಾಚಾರ್ಯರು ವಿಧವೆಯರನ್ನು ಸಮಾಜದ ಮುಖ್ಯ ನೆಲೆಯಲ್ಲಿ ಪವಿತ್ರವಾಗಿ ನೋಡಲು ಶ್ರಮಪಟ್ಟವರು. ಆದಿ ಶಂಕರಾಚಾರ್ಯರು ಹಿಂದೂ ಧರ್ಮದಲ್ಲಿ ಬಹಳಷ್ಟು ಸಾಮಾಜಿಕ ಸುಧಾರಣೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿತ್ತಿ ಒಂದೊಳ್ಳೆ ಸಮಾಜದ ನಿರ್ಮಾಣದ ಬುನಾದಿಯನ್ನು ಹಾಕಿದ್ದರು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.