ಕೇವಲ ಫೀಲ್ಡಿಂಗ್ ಮಾಡಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ಆ 5 ಕ್ರಿಕೆಟಿಗರು ಯಾರು ಗೊತ್ತೆ?? ಅವರ ಕುರಿತು ನಿಮಗೆಷ್ಟು ಗೊತ್ತು??

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಈಗಾಗಲೇ ಜಾಗತಿಕವಾಗಿ ಬೆಳೆದಿರುವ ಜನಪ್ರಿಯ ಕ್ರೀಡೆ ಎಂಬುದು ನಿಮಗೆ ಗೊತ್ತೇ ಇದೆ. ತ್ರಿಡಿಯಲ್ಲಿ ಕೇವಲ ಬ್ಯಾಟ್ಸ್ಮನ್ ಹಾಗೂ ಬೌಲರ್ಗಳು ಮಾತ್ರವಲ್ಲದೆ ಕ್ಷೇತ್ರ ದಕ್ಷಣೆ ಮಾಡುವವರು ಕೂಡ ಪಂದ್ಯದ ದಿಕ್ಕನ್ನು ಬದಲಾಯಿಸುತ್ತಾರೆ ಎಂಬುದು ನಿಮಗೆ ತಿಳಿದಿರಲಿ ಸ್ನೇಹಿತರೆ. ನಮ್ಮ ಭಾರತದಲ್ಲಿ ಕೂಡ ಶ್ರೇಷ್ಠಮಟ್ಟದ ಕ್ಷೇತ್ರ ರಕ್ಷಣೆ ಮಾಡುವ ಕ್ರಿಕೆಟಿಗರು ಕೂಡ ಇದ್ದಾರೆ.

ಇಂದಿನ ವಿಷಯದಲ್ಲಿ ನಾವು ವಿಶ್ವಮಟ್ಟದಲ್ಲಿ ಕೇವಲ ಫೀಲ್ಡಿಂಗ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನು ಬದಲಾಗಿದ್ದು 5 ಕ್ರಿಕೆಟಿಗರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಬನ್ನಿ ಆ ಕ್ರಿಕೆಟಿಗರು ಯಾರು ಯಾರು ಹಾಗೂ ಯಾವ ಪಂದ್ಯದ ಮೂಲಕ ಅವರು ಕ್ಷೇತ್ರರಕ್ಷಣೆ ಮಾಡಿ ಪಂದ್ಯದ ದಿಕ್ಕನ್ನು ಬದಲಾಯಿಸಿದರು ಎಂಬುದನ್ನು ತಿಳಿಯೋಣ ಬನ್ನಿ.

ಡೇವಿಡ್ ಮಿಲ್ಲರ್ ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ವಿಭಾಗದಲ್ಲಿ ಎಂಬುದು ಎಂತಹ ಶ್ರೇಷ್ಠ ಆಟಗಾರ ಎಂಬುದು ನಮಗೆಲ್ಲ ಗೊತ್ತಿದೆ. ಬ್ಯಾಟಿಂಗ್ಗೆ ನಿಂತರೆ ಎದುರಾಳಿ ಬೌಲರ್ ಯಾರೇ ಆಗಿದ್ದರೆ ಸರಿ ತಂಡಕ್ಕೆ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲುವನ್ನು ತಂದುಕೊಡಬಲ್ಲ ಭರವಸೆ ಆಟಗಾರ ಡೇವಿಡ್ ಮಿಲ್ಲರ್. ಇನ್ನು ಇವರು ಕ್ಷೇತ್ರ ರಕ್ಷಣ ಮೂಲಕವೂ ಕೂಡ ತಂಡಕ್ಕೆ ಹಲವಾರು ಬಾರಿ ಗೆಲುವಲ್ಲಿ ನೆರವಾಗಿದ್ದಾರೆ.

ಇದಕ್ಕೆ ಉದಾಹರಣೆ ಎಂದರೆ 2019 ರಲ್ಲಿ ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಲ್ಲಿ ಸೌತ್ ಆಫ್ರಿಕಾ 193 ರನ್ನುಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಇದು ಪಾಕಿಸ್ತಾನದ ಬ್ಯಾಟಿಂಗ್ ಲೈನ್ ಅಪ್ ಗೆ ಸುಲಭವಾದ ಗುರಿಯಾಗಿತ್ತು. ಆದರೆ ಡೇವಿಡ್ ಮಿಲ್ಲರ್ out-of-the-box ಪ್ಲೇಯರ್ ಆಗಿ ಬಂದು ನಾಲ್ಕು ಕ್ಯಾಚ್ ಆಗುವ ಎರಡು ರನೌಟ್ ಮಾಡಿ ಈ ಕಷ್ಟದ ಪಂದ್ಯವನ್ನು ಸೌತ್ ಆಫ್ರಿಕಾದ ಗೆಲುವಿನ ಕಡೆಗೆ ಬರುವಂತೆ ಮಾಡಿದರು. ಮಾತ್ರವಲ್ಲದೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೂಡ ಪಡೆದು ಮಿಂಚಿದರು.

ಗಸ್ ಲೋಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ವೆಸ್ಟ್ಇಂಡೀಸ್ ಆಟಗಾರ ತಮ್ಮ ಫೀಲ್ಡಿಂಗ್ ಮೂಲಕ ಚಮತ್ಕಾರವನ್ನು ಮಾಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಬಂದ ಪಾಕಿಸ್ತಾನಕ್ಕೆ ಲೋಗಿ ಮೂರು ಕ್ಯಾಚ್ ಹಾಗೂ 1 ರನೌಟ್ ಮಾಡುವ ಮೂಲಕ ಕೇವಲ 143 ರನ್ನುಗಳ ಕನಿಷ್ಠ ಮೊತ್ತಕ್ಕೆ ನಿಯಂತ್ರಿಸಿದರು. ಇದರಲ್ಲಿ ಲೋಗ್ ರವರು ಪಾಕಿಸ್ತಾನದ ಪ್ರಮುಖ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ರಿಂದ ಪಾಕಿಸ್ತಾನ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವಂತೆ ಆಯಿತು. ಇದಕ್ಕಾಗಿ ಅವರು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಕೂಡ ಪಡೆದರು.

ಜಾಂಟಿ ರೋಡ್ಸ್ ಕ್ರಿಕೆಟ್ ಜಗತ್ತಿನಲ್ಲಿ ಫೀಲ್ಡಿಂಗ್ ಎಂಬ ಪದಕ್ಕೆ ಸರಿಯಾದ ಅರ್ಥವನ್ನು ಕಂಡುಹಿಡಿದ ಕ್ರಿಕೆಟಿಗ ಎಂದರೆ ಅದು ಸೌತ್ ಆಫ್ರಿಕಾ ಆಟಗಾರ ಜಾಂಟಿ ರೋಡ್ಸ್. ಅಂದಿನ ಕಾಲದಲ್ಲಿ ತಮ್ಮ ಕ್ಷೇತ್ರ ರಕ್ಷಣೆ ಮೂಲಕ ಎದುರಾಳಿ ಆಟಗಾರರ ಮೈಯಲ್ಲಿ ನಡುಕ ಹುಟ್ಟಿಸುತ್ತಿದ್ದ ಕ್ಷೇತ್ರ ರಕ್ಷಕ ಎಂದರೆ ಅದು ಜಾಂಟಿ ರೋಡ್ಸ್ ಮಾತ್ರ. 1993 ರಲ್ಲಿ ಸೌತ್ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನು ಆಡುತ್ತಿತ್ತು. ಈ ಸಂದರ್ಭದಲ್ಲಿ ಜಾಂಟಿ ರೋಡ್ಸ್ ರವರು ಕೇವಲ ಫೀಲ್ಡಿಂಗ್ ಮೂಲಕ ಐದು ವಿಕೆಟ್ಗಳು ಉರುಳೋದಕ್ಕೆ ಕಾರಣವಾದರು. ಹೌದು ಸ್ನೇಹಿತರೆ ವೆಸ್ಟ್ ಇಂಡೀಸ್ನ ದಿಗ್ಗಜ ಬ್ಯಾಟ್ಸ್ಮನ್ಗಳಾದ ಬ್ರಿಯಾನ್ ಲಾರಾ ಜಿಮ್ಮಿ ಅಡಂಸ್ ಆಂಡರ್ಸನ್ ಕಮಿನ್ಸ್ ಡೆಸ್ಮಂಡ್ ಹೈನ್ಸ್ ರಂತಹ ದಿಗ್ಗಜ ಬ್ಯಾಟ್ಸ್ಮನ್ಗಳ ಕ್ಯಾಚನ್ನು ಪಡೆದು ಸೌತ್ ಆಫ್ರಿಕಾ ತಂಡದ ಗೆಲುವಿಗೆ ಮೂಲಕಾರಣರಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ಪಡೆದು ಮಿಂಚಿದರು.

ಮಾರ್ಕ್ ಟೇಲರ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು. 1992 ರಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಆಡುತ್ತಿತ್ತು. ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡದ 4 ನಿರ್ಣಾಯಕ ಕ್ಯಾಚು ಗಳನ್ನು ಸ್ಲಿಪ್ ನಲ್ಲಿ ನಿಂತು ಹಿಡಿಯುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕಾರಣರಾಗಿದ್ದರು. ಅವರ ಹಿಡಿದ ಕ್ಯಾಚು ಗಳು ಯಾರದ್ದು ಗೊತ್ತೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರದ್ದು. ಇದಕ್ಕಾಗಿ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡ ಪಡೆದರು.

ವಿವಿ ರಿಚರ್ಡ್ಸ್ ವೆಸ್ಟ್ ಇಂಡೀಸ್ ಅಥವಾ ಕ್ರಿಕೆಟ್ ಜಗತ್ತು ಕಂಡ ದಂತಕತೆ ಗಳಲ್ಲಿ ಒಬ್ಬರಾದ ವಿವಿ ರಿಚರ್ಡ್ಸ್ ರವರು 1989 ರಲ್ಲಿ ಭಾರತದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮೂರು ಕ್ಯಾಚು ಗಳನ್ನು ಹಿಡಿದು ಭಾರತದ ಸೋಲಿಗೆ ಮುಖ್ಯ ಕಾರಣರಾದರು. ಈ ಕ್ಯಾಚು ಗಳಲ್ಲಿ ಭಾರತದ ದಿಗ್ಗಜ ಬ್ಯಾಟ್ಸ್ ಮನ್ ಗಳಾದ ದಿಲಿಪ್ ವೆಂಗ್ಸರ್ಕರ್ ರಮನ್ ಲಂಬ ಹಾಗೂ ಮನೋಜ್ ಪ್ರಭಾಕರ್ ಅವರ ವಿಕೆಟ್ ಕೂಡ ಇತ್ತು. ಇದರಿಂದಾಗಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸೋಲಬೇಕಾಯಿತು. ಈ ಮೂರು ಪ್ರಮುಖ ಕ್ಯಾಸಿ ಗಳನ್ನು ಪಡೆದ ವಿವಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ನ್ನು ಪಡೆದರು.

ನೋಡಿದ್ರಲ್ಲ ಸ್ನೇಹಿತರೇ ಈ ದಿಗ್ಗಜ ಕ್ರಿಕೆಟಿಗರು ಕ್ಷೇತ್ರರಕ್ಷಣೆ ಮಾಡಿ ಕ್ಯಾಚ್ ಹಿಡಿಯುವ ಮೂಲಕವೂ ಕೂಡ ತಂಡದ ಗೆಲುವಿಗೆ ಕಾರಣರಾಗಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಹಾಗೂ ನೆಚ್ಚಿನ ಫೀಲ್ಡರ್ ಯಾರು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav