ಎಲ್ಲರ ಬಾಯಲ್ಲೂ ನೀರೂರುವಂತಹ ಡಾಬಾ ಶೈಲಿಯಲ್ಲಿ ಆಲೂ ಮಟರ್ ಕರಿ ಮಾಡುವುದು ಹೇಗೆ ಗೊತ್ತೇ??

ಎಲ್ಲರ ಬಾಯಲ್ಲೂ ನೀರೂರುವಂತಹ ಡಾಬಾ ಶೈಲಿಯಲ್ಲಿ ಆಲೂ ಮಟರ್ ಕರಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಡಾಬಾ ಶೈಲಿಯಲ್ಲಿ ಆಲೂ ಮಟರ್ ಕರಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಡಾಬಾ ಶೈಲಿಯಲ್ಲಿ ಆಲೂ ಮಟರ್ ಕರಿ ಮಾಡಲು ಬ್ರಕಾಗುವ ಸಾಮಗ್ರಿಗಳು: 3 ಟೊಮ್ಯಾಟೊ, 6 – 7 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಶುಂಠಿ, 1 ಹಸಿಮೆಣಸಿನಕಾಯಿ, 2 ಬೇಯಿಸಿದ ಆಲೂಗೆಡ್ಡೆ, 2 ಚಮಚ ಎಣ್ಣೆ, 2 ಚಮಚ ಬೆಣ್ಣೆ, 1 ಚಮಚ ಜೀರಿಗೆ, 2 ಈರುಳ್ಳಿ, 2 ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಅರಿಶಿಣ ಪುಡಿ, 2 ಚಮಚ ಧನಿಯಾ ಪುಡಿ, ಒಂದೂವರೆ ಚಮಚ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಹಸಿಬಟಾಣಿ, ಅರ್ಧ ಚಮಚ ಗರಂ ಮಸಾಲ ,1 ಚಮಚ ಕಸೂರಿ ಮೇತಿ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಡಾಬಾ ಶೈಲಿಯಲ್ಲಿ ಆಲೂ ಮಟರ್ ಕರಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಹಚ್ಚಿದ ಟೊಮೇಟೊ, ಬೆಳ್ಳುಳ್ಳಿ ಎಸಳು, ಶುಂಠಿ ಹಾಗು ಹಸಿಮೆಣಸಿಕಾಯಿಯನ್ನು ಹಾಕಿ ನುಣ್ಣಗೆ ರುಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಎಣ್ಣೆ ಹಾಗೂ 2 ಚಮಚ ಬೆಣ್ಣೆಯನ್ನು ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಜೀರಿಗೆ, ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕಡೆಲೆ ಹಿಟ್ಟನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಅರಿಶಿನ ಪುಡಿ, 2 ಚಮಚ ಧನಿಯಾ ಪುಡಿ, ಒಂದೂವರೆ ಚಮಚ ಅಚ್ಚ ಖಾರದ ಪುಡಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣ, ಅರ್ಧ ಬಟ್ಟಲು ನೀರು ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಮಸಾಲೆ ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದೂವರೆ ಬಟ್ಟಲಿನಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹಸಿಬಟಾಣಿ,ಅರ್ಧ ಚಮಚ ಗರಂ ಮಸಾಲಾ , 1 ಚಮಚ ಕಸೂರಿ ಮೇತಿಯನ್ನು ಹಾಕಿ ಬಟಾಣಿ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಧ್ಯಮ ಗಾತ್ರದಲ್ಲಿ ಹಚ್ಚಿದ ಆಲೂಗಡ್ಡೆಯನ್ನು ಹಾಕಿ ಮಸಾಲೆ ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಡಾಬಾ ಶೈಲಿಯಲ್ಲಿ ಆಲೂ ಮಟರ್ ಸವಿಯಲು ಸಿದ್ದ.