ಕ್ರಿಕೆಟ್ ಜಗತ್ತಿನಲ್ಲಿ ಬಳಸುವ ಮೂರು ಚೆಂಡುಗಳ ನಡುವಿನ ವ್ಯತ್ಯಾಸವೇನು ಗೊತ್ತಾ??
ಕ್ರಿಕೆಟ್ ಜಗತ್ತಿನಲ್ಲಿ ಬಳಸುವ ಮೂರು ಚೆಂಡುಗಳ ನಡುವಿನ ವ್ಯತ್ಯಾಸವೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನೀವು ಕ್ರಿಕೇಟ್ ಪ್ರಿಯರಾಗಿದ್ದರೇ ಈ ಪದಗಳನ್ನು ಕೇಳಿರುತ್ತಿರಿ. ಅದೇನೆಂದರೇ ಟೆಸ್ಟ್ ಕ್ರಿಕೇಟ್ ನಲ್ಲಿ ಒಟ್ಟು ಮೂರು ರೀತಿಯ ಕೆಂಪು ಬಣ್ಣದ ಚೆಂಡುಗಳನ್ನ ಬಳಸುತ್ತಾರೆ. ಅವು ಯಾವುವೆಂದರೇ, ಡ್ಯೂಕ್ ಬಾಲ್, ಎಸ್.ಜಿ ಬಾಲ್, ಮತ್ತು ಕೂಕಾಬುರಾ. ನೋಡಲು ಒಂದೇ ಕೆಂಪು ಬಣ್ಣವಿರುವ ಈ ಚೆಂಡುಗಳ ನಡುವೆ ಅಂತಹದೇನು ವ್ಯತ್ಯಾಸ ಎಂದು ನಿಮಗೆ ಯಾವತ್ತಾದರೂ ಅನಿಸಿದರೇ ಅದಕ್ಕೆ ಇಲ್ಲಿದೆ ಉತ್ತರ.
ಡ್ಯೂಕ್ ಬಾಲ್ ಗಳನ್ನ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡಿಸ್ ತಂಡಗಳು ಉಪಯೋಗಿಸುತ್ತವೆ. ಭಾರತ ದೇಶದಲ್ಲಿ ಎಸ್.ಜಿ ಬಾಲನ್ನ ಉಪಯೋಗಿಸಲಾಗುತ್ತದೆ. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಕೂಕಬುರಾ ಬಾಲ್ ನ್ನು ಉಪಯೋಗಿಸಲಾಗುತ್ತದೆ.
ಡ್ಯೂಕ್ ಮತ್ತು ಎಸ್.ಜಿ ಬಾಲ್ ಗಳನ್ನು ಸಂಪೂರ್ಣವಾಗಿ ಕೈ ಹೊಲಿಗೆಯಿಂದ ಮಾಡಲಾಗಿರುತ್ತದೆ. ಆದರೇ ಕೂಕಬುರಾ ಚೆಂಡಿನ ಅರ್ಧ ಭಾಗವನ್ನು ಕೈ ಹೊಲಿಗೆಯಿಂದ, ಉಳಿದರ್ಧ ಭಾಗವನ್ನ ಮಷಿನ್ ನಿಂದ ಹೊಲಿಯಲಾಗುತ್ತದೆ. ಈ ಎಲ್ಲಾ ಚೆಂಡಿನ ಮೇಲಿರುವ ಸೀಮ್ ಗಳೇ ಮುಖ್ಯ ಪಾತ್ರ ನಿರ್ವಹಿಸುವ ಕಾರಣ, ಕೈ ಹೊಲಿಗೆಯಿಂದ ಮಾಡಿರುವ ಎಸ್.ಜಿ ಮತ್ತು ಡ್ಯೂಕ್ ಬಾಲ್ ಗಳು ಕೂಕಬುರಾ ಬಾಲ್ ಗಿಂತ ಹೆಚ್ಚು ಬಾಳಿಕೆ ಬರುತ್ತವೆ.
ಮೂರು ಕ್ರಿಕೇಟ್ ಚೆಂಡುಗಳ ಬಳಕೆಯಲ್ಲಿ ಪಿಚ್ ನ ಸ್ವರೂಪ ಮತ್ತು ಪರಿಸ್ಥಿತಿಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.ಇಂಗ್ಲೆಂಡ್ ಸಾಮಾನ್ಯವಾಗಿ ಮೋಡ ಕವಿದ ಪರಿಸ್ಥಿತಿ ಹಾಗೂ ಹಸಿರು ಪಿಚ್ ಗಳಿಂದ ಕೂಡಿರುವ ದೇಶವಾಗಿದೆ. ಇದು ಚೆಂಡಿನ ಸೀಮ್ ಮತ್ತು ಆಕಾರವನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಮತ್ತೊಂದೆಡೆ ಭಾರತವು ಒರಟು ಮತ್ತು ಒಣ ಪಿಚ್ ಗಳನ್ನು ಹೊಂದಿದ್ದು ಅದು ತೆರೆದ ಬಿರುಕುಗಳನ್ನು ಪಿಚ್ ಮೇಲ್ಮೈ ಹೊಂದಿರುತ್ತದೆ.
ಆದ್ದರಿಂದ ದಪ್ಪ ದಾರವು ಚೆಂಡನ್ನು ದೀರ್ಘಕಾಲದವರೆಗೆ ಹಾಗೇ ಇಡುವುದರಿಂದ ಎಸ್ ಜಿ ಚೆಂಡು ಸೂಕ್ತವಾಗಿರುತ್ತದೆ. ಆದರೇ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಬೌನ್ಸಿ ಪಿಚ್ ಗಳಲ್ಲಿ ಚೆಂಡು ತನ್ನ ಆಕಾರ ಕಳೆದುಕೊಂಡರೂ, ಉತ್ತಮ ಸ್ಥಿತಿಯಲ್ಲಿರುತ್ತದೆ. ಹಾಗಾಗಿ ಅಲ್ಲಿ ಕೂಕಬುರಾ ಚೆಂಡನ್ನು ಬಳಸುತ್ತಾರೆ. ನೋಡಿದಿರಲ್ವಾ ಸ್ನೇಹಿತರೇ, ಒಂದು ಬಾಲ್ ಆಯ್ಕೆಯ ಹಿಂದೆ ಎಷ್ಟೊಂದು ಕಸರತ್ತು ಇರುತ್ತದೆಯೆಂದು. ಈ ಚೆಂಡುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.