ವಿಶ್ವ ಕ್ರಿಕೇಟ್ ನಲ್ಲಿ ಮತ್ತಷ್ಟು ಪ್ರಭಾವ ಸಾಧಿಸಲು ಬಿಸಿಸಿಐ ಹಾಕಿಕೊಂಡಿರುವ ಮಹತ್ವದ ಯೋಜನೆಗಳು ಯಾವುವು ಗೊತ್ತಾ??
ವಿಶ್ವ ಕ್ರಿಕೇಟ್ ನಲ್ಲಿ ಮತ್ತಷ್ಟು ಪ್ರಭಾವ ಸಾಧಿಸಲು ಬಿಸಿಸಿಐ ಹಾಕಿಕೊಂಡಿರುವ ಮಹತ್ವದ ಯೋಜನೆಗಳು ಯಾವುವು ಗೊತ್ತಾ??
ನಮಸ್ಕಾರ ಸ್ನೇಹಿತರೇ ಬಿಸಿಸಿಐ ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿ. ವಿಶ್ವದ ಕ್ರಿಕೇಟ್ ನ ಅತಿದೊಡ್ಡ ಹಾಗೂ ಶಕ್ತಿಶಾಲಿ ಸಂಸ್ಥೆ. ಪ್ರಪಂಚಕ್ಕೆ ಅಮೇರಿಕ ಹೇಗೆ ದೊಡ್ಡಣ್ಣನೋ ಅದೇ ರೀತಿ, ವಿಶ್ವ ಕ್ರಿಕೇಟ್ ಗೆ ಬಿಸಿಸಿಐ ದೊಡ್ಡಣ್ಣ. ಬಿಸಿಸಿಐ ಮಾಡಿದ ನಿಯಮಗಳನ್ನ ಎಲ್ಲಾ ದೇಶದ ಕ್ರಿಕೇಟ್ ಮಂಡಳಿಗಳು ಸಹ ಗೌರವಿಸುತ್ತವೆ.
ಈಗ ಜಗತ್ತಿನ ಕ್ರಿಕೇಟ್ ನಲ್ಲಿ ಮತ್ತಷ್ಟು ಪ್ರಭಾವ ಸಾಧಿಸಲು ಬಿಸಿಸಿಐ ಬಿಗ್ ಪ್ಲಾನ್ ಹಾಕಿಕೊಂಡಿದೆ. ಪ್ರತಿ ದೇಶದ ಕ್ರಿಕೇಟ್ ಸಂಸ್ಥೆಗಳು ಹೆಚ್ಚು ಆರ್ಥಿಕ ಬಲಿಷ್ಠವಾಗುವುದು ಹೆಚ್ಚು ಪಂದ್ಯಾವಳಿಗಳನ್ನ ಆಯೋಜಿಸುವ ಮೂಲಕ. ಈ ಹಿಂದೆ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ 20 ವಿಶ್ವಕಪ್ ನ್ನು ಆಯೋಜಿಸಿತ್ತು. ಬಾಂಗ್ಲಾ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಜೊತೆ ಜಂಟಿಯಾಗಿ ಮೂರು ಭಾರಿ ಕ್ರಿಕೇಟ್ ವಿಶ್ವಕಪ್ ನ್ನು ಸಹ ಆಯೋಜಿಸಿತ್ತು.
ಈಗ ಮತ್ತಷ್ಟು ಗಟ್ಟಿಯಾಗಿರುವ ಬಿಸಿಸಿಐ ಮುಂಬರುವ 2025 ರಲ್ಲಿ ಬರುವ ಚಾಂಪಿಯನ್ಸ್ ಟ್ರೋಫಿ, 2028 ರ ಟಿ20 ವಿಶ್ವಕಪ್, 2031 ರ ಏಕದಿನ ವಿಶ್ವಕಪ್ ನ್ನು ಸಹ ಏಕಾಂಗಿಯಾಗಿ ಆಯೋಜಿಸಲು ತೀರ್ಮಾನಿಸಿದೆ. ಈ ಐಸಿಸಿಯ ಅಪೆಕ್ಸ್ ಕೌನ್ಸಿಲ್ ನಲ್ಲೂ ಒಪ್ಪಿಗೆ ಪಡೆದು ಕೊಂಡಿದೆ ಎಂದು ಹೇಳಲಾಗಿದೆ. ಪ್ರಸಾರದ ಹಕ್ಕು, ಜಾಹೀರಾತು, ಟಿಕೇಟ್ ದರ, ಪ್ರವಾಸೋದ್ಯಮ ಹೀಗೆ ವಿವಿಧ ರೂಪದಲ್ಲಿ ಬಿಸಿಸಿಐಗೆ ಆರ್ಥಿಕ ಸಂಪನ್ಮೂಲ ಹರಿದು ಬರುವ ನೀರಿಕ್ಷೆಯಿದೆ. ಈ ಮೂಲಕ ವಿಶ್ವ ಕ್ರಿಕೇಟ್ ನಲ್ಲಿ ಬಿಸಿಸಿಐ ಆರ್ಥಿಕವಾಗಿ ಹಿಂದೆಂದೂ ಕಾಣದಷ್ಟು ಶಕ್ತಿಶಾಲಿಯಾಗುತ್ತದೆ. ಇನ್ನು ಮುಂಬರುವ ಟಿ20 ವಿಶ್ವಕಪ್ ನಲ್ಲಿ 16ರ ಬದಲು 20 ತಂಡಗಳು ಭಾಗವಹಿಸುತ್ತಿವೆ. ಈ ಮೂಲಕ ಕ್ರಿಕೇಟ್ ಆಟವನ್ನು ವಿಶ್ವಾದ್ಯಂತ ಬೆಳೆಸಲು ಬಿಸಿಸಿಐ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಸಿಸಿಐ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.