ಮಹೇಂದ್ರ ಸಿಂಗ್ ಧೋನಿ ಯವರಿಂದ ಯಶಸ್ಸನ್ನು ಸಾಧಿಸಿದ ಆ 5 ಕ್ರಿಕೆಟಿಗರು ಯಾರು ಗೊತ್ತಾ?? ಭಾರತದ ಪ್ರಮುಖ ಪಿಲ್ಲರ್ ಗಳು.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುವುದಾದರೆ ಈಗಿರುವ ಯುವ ತಂಡವನ್ನು ನಿರ್ಮಿಸಿದ್ದು ಹಾಗೂ ಅದನ್ನು ಬಲಿಷ್ಠವಾಗಿ ಕಟ್ಟಿದ್ದು ನಿಸ್ಸಂಶಯವಾಗಿ ಭಾರತ ದೇಶ ಕಂಡ ಅತ್ಯಂತ ಯಶಸ್ವಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ. ಹೌದು ಹಿರಿಯ ಆಟಗಾರರ ವಿರೋಧವನ್ನು ಕಟ್ಟಿಕೊಂಡು ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರರಿಗೆ ಅವಕಾಶ ನೀಡಿ ಅವರ ಹಿಂದೆ ಬೆಂಬಲವಾಗಿ ನಿಂತು ಅವರಿಗೆ ಪ್ರೋತ್ಸಾಹ ನೀಡಿ ಇಂದಿನ ತಂಡವನ್ನು ಕಟ್ಟಿ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡದಿಂದ ನಿರ್ಗಮಿಸಿದ್ದಾರೆ. ಬನ್ನಿ ಆ ಯಾವ ಆಟಗಾರರು ಮಹೇಂದ್ರ ಸಿಂಗ್ ಧೋನಿ ಅವರಿಂದ ನಿಂದು ಯಶಸ್ಸಿನ ತುತ್ತತುದಿಯಲ್ಲಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಮೊದಲನೆಯದಾಗಿ ರೋಹಿತ್ ಶರ್ಮ 2013 ರ ವರೆಗೂ ಸಹ ರೋಹಿತ್ ಶರ್ಮ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮಾ ರವರು ಹೇಳಿಕೊಳ್ಳುವಷ್ಟು ಸಾಧನೆಯನ್ನು ಮಾಡಿರಲಿಲ್ಲ ಹಾಗೂ ರನ್ನುಗಳನ್ನು ಕೂಡ ಗಳಿಸಿರಲಿಲ್ಲ. ಆದರೆ ಇದನ್ನರಿತ ಮಹೇಂದ್ರ ಸಿಂಗ್ ಧೋನಿ ರೋಹಿತ್ ಶರ್ಮಾ ರವರಿಗೆ ಒಂದೊಳ್ಳೆ ಅವಕಾಶವನ್ನು ನೀಡಿದರು.

ಹೌದು 2013 ರಲ್ಲಿ ಪ್ರಾರಂಭವಾಗಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಹುದ್ದೆಯಲ್ಲಿ ಬಡ್ತಿ ನೀಡಿದರು. ಅದರಿಂದಾಚೆಗೆ ರೋಹಿತ್ ಶರ್ಮಾ ಹಿಂದೆಂದೂ ತಿರುಗಿ ನೋಡಲೇ ಇಲ್ಲ. ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಗಳಲ್ಲಿ ಅನಭಿಷಕ್ತ ರಾಜನಾಗಿ ರೋಹಿತ್ ಶರ್ಮರವರು ರನ್ನುಗಳನ್ನು ಮಾಡಲಾರಂಭಿಸಿದರು. ರೋಹಿತ್ ಶರ್ಮ ರವರ ಯಶಸ್ಸಿನ ಶ್ರೇಯ ಖಂಡಿತವಾಗಿಯೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲಬೇಕು.

ಇನ್ನು ಎರಡನೆಯದಾಗಿ ವಿರಾಟ್ ಕೊಹ್ಲಿ ಹಿಂದಿನ ಕಾಲದಲ್ಲಿ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಹಾಗೂ ಬ್ಯಾಟ್ಸ್ಮನ್ ಆಗಿ ಸಾಕಷ್ಟು ಯಶಸ್ಸನ್ನು ಸಾಧಿಸಿರಬಹುದು. ಆದರವರು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಬಂದಾಗ ಮೊದಲಿಗೆ ಯಾವುದನ್ನು ಗಳಿಸಿದೆ ಕಳಪೆ ಪ್ರದರ್ಶನ ತೋರಿದರು. ಆಗ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ 2011-12ರ ಆಸ್ಟ್ರೇಲಿಯಾ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಹೊರ ಹಾಕುವ ತೀರ್ಮಾನ ಮಾಡಿತ್ತು.

ಆದರೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿರಾಟ್ ಕೊಹ್ಲಿ ಅವರ ಮೇಲೆ ನಂಬಿಕೆ ಇದ್ದಿದ್ದರಿಂದ ಆಯ್ಕೆಸಮಿತಿಯ ಆದೇಶಕ್ಕೆ ಮೇರಿ ಮಹೇಂದ್ರ ಸಿಂಗ್ ಧೋನಿ ಅವರು ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ತೀರ್ಮಾನ ಮಾಡಿದರು. ಇದರ ಪರಿಣಾಮವಾಗಿ ವಿರಾಟ್ ಕೊಹ್ಲಿ ಅವರು ಮುಂದಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಮಹೇಂದ್ರ ಸಿಂಗ್ ಧೋನಿಯವರ ನಂಬಿಕೆಯನ್ನು ಉಳಿಸಿಕೊಂಡರು. ಮಹೇಂದ್ರ ಸಿಂಗ್ ಧೋನಿ ಅವರು ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳದಿದ್ದರೆ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ತಂಡದಿಂದ ಎಂದೋ ಕಾಣೆಯಾಗುತ್ತಿದ್ದರು.

ಇನ್ನು ಮೂರನೆಯದಾಗಿ ರವೀಂದ್ರ ಜಡೇಜಾ ಸೌರಾಷ್ಟ್ರ ಮೂಲದ ಈ ಕ್ರಿಕೆಟಿಗ 2009 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಪ್ರಾರಂಭದ ದಿನಗಳಲ್ಲಿ ಹೇಳಿಕೊಳ್ಳುವಷ್ಟು ಪರ್ಫಾರ್ಮೆನ್ಸ್ ನೀಡುತ್ತಿರಲಿಲ್ಲ ರವೀಂದ್ರ ಜಡೇಜಾ. ಇದಕ್ಕಾಗಿ 2011 ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಕೂಡ ಅವರು ಆಯ್ಕೆಯಾಗಿಲ್ಲ. ನಂತರದ ದಿನಗಳಲ್ಲಿ ಅವರು ಎಷ್ಟು ಪ್ರಭಾವ ಬೀರಿದ್ದರು ಎಂದರೆ ಭಾರತ ಕ್ರಿಕೆಟ್ ತಂಡದ ಖಾಯಂ ಸ್ಪಿನರ್ ಆಗಿದ್ದ ಹರಭಜನ್ ಸಿಂಗ್ ಅವರನ್ನು ಹಿಂದಿಕ್ಕಿ ಅವರ ಸ್ಥಾನವನ್ನು ಖಾಯಂ ಮಾಡಿಕೊಂಡರು.

ಇವೆಲ್ಲ ಸಾಧ್ಯವಾದದ್ದು ಮಹೇಂದ್ರ ಸಿಂಗ್ ಧೋನಿಯವರ ಮಾರ್ಗದರ್ಶನದಿಂದ. ಇಂದಿಗೂ ಸಹ ಚೆನ್ನೈ ಸೂಪರ್ ಕಿಂಗ್ ತಂಡದಲ್ಲಿ ಜೊತೆಯಾಗಿ ಮಾಡುತ್ತಾರೆ. ಸ್ವತಹಾ ರವೀಂದ್ರ ಜಡೇಜಾ ರವರೇ ತನ್ನ ಕ್ರಿಕೆಟ್ ಜೀವನದ ಯಶಸ್ಸಿಗೆ ಮಹೇಂದ್ರ ಸಿಂಗ್ ಧೋನಿಯವರ ಪಾಲು ಬಹಳ ದೊಡ್ಡದಾಗಿದೆ ಎಂದು ಹೇಳಿದ್ದಾರೆ.

ಇನ್ನು ನಾಲ್ಕನೆಯದಾಗಿ ಇಶಾಂತ್ ಶರ್ಮಾ ತಮ್ಮ 12 ವರ್ಷದ ಕ್ರಿಕೆಟ್ ಜರ್ನಿಯಲ್ಲಿ ಇಶಾಂತ್ ಶರ್ಮಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ದಿಲ್ಲಿ ಮೂಲದ ಈ ನೀಳಕಾಯದ ಕ್ರಿಕೆಟಿಗ ಆಯ್ಕೆಯಾದ ಮೊದಲಿಗೆ ಬಹಳಷ್ಟು ಬೇಡಿಕೆ ಇದ್ದರೂ ಕೂಡ ನಂತರದ ದಿನಗಳಲ್ಲಿ ಹೋಗಿ ಬರುವ ಆಟಗಾರನಾಗಿ ಕಾಣಿಸಿಕೊಳ್ಳತೊಡಗಿದರು. ಆದರೆ ಧೋನಿ ಅವರ ಮೇಲೆ ನಂಬಿಕೆ ಇಟ್ಟು ಭಾರತ ಕ್ರಿಕೆಟ್ ತಂಡದ ಟೆಸ್ಟ್ ನ ಪರಮನೆಂಟ್ ಬೌಲರ್ ಆಗಿ ತಂಡದಲ್ಲಿ ಸೇರಿಸಿಕೊಂಡರು. ಮಹೇಂದ್ರ ಸಿಂಗ್ ಧೋನಿಯವರ ನಂಬಿಕೆ ಉಳಿಸಿಕೊಂಡ ಇಶಾಂತ್ ಶರ್ಮಾ ಅದರಲ್ಲೂ ವಿಶೇಷವಾಗಿ ವಿದೇಶಿ ಪಿಜಿಗಳಲ್ಲಿ ಧೋನಿಯವರ ಬತ್ತಳಿಕೆಯ ಮುಖ್ಯ ಬೌಲರ್ ಆಗಿ ಕಾಣಿಸಿಕೊಂಡರು.

ಇನ್ನು ಕೊನೆಯದಾಗಿ ಸುರೇಶ್ ರೈನಾ ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಜೋಡಿ ಹಿಂದೆ ನಾವು ಹಲವಾರು ಬಾರಿ ಕೆಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ನಾವು ನೋಡಿದ್ದೇವೆ. 2005 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು ಕೂಡ ಸುರೇಶ ಏನಾರ ಅವರು ಯಶಸ್ಸು ಸಾಧಿಸಿದ್ದು ಮಾತ್ರ ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದಲ್ಲಿ. 2006 ಹಾಗೂ 2008ರಲ್ಲಿ ಸುರೇಶ್ ರೈನಾ ರವರು ಹಲವಾರು ಬಾರಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದರು ಮಹೇಂದ್ರ ಸಿಂಗ್ ಧೋನಿ ಸುರೇಶ್ ಅವರಿಗೆ ಪದೇಪದೇ ಅವಕಾಶ ಕೊಟ್ಟು ಅವರ ಕ್ರಿಕೆಟನ್ನು ಇನ್ನಷ್ಟು ಸುಧಾರಿಸುವಂತೆ ಮಾಡಿದರು. ಎಲ್ಲದಕ್ಕಿಂತ ಹೆಚ್ಚಾಗಿ ವಿಶ್ವೇಶ್ವರಯ್ಯ ಅವರು ಅತ್ಯಂತ ಹೆಚ್ಚು ರನ್ನುಗಳನ್ನು ಗೊಳಿಸಿದ್ದು ಕೂಡ ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದಲ್ಲಿ.

ನೋಡಿದ್ರಲ್ಲ ಸ್ನೇಹಿತರೆ ಭಾರತ ಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ ಇಷ್ಟು ಕ್ರಿಕೆಟಿಗರಿಗೆ ಮಾತ್ರವಲ್ಲದೆ ಇನ್ನೂ ಹಲವಾರು ಯುವ ಕ್ರಿಕೆಟಿಗರಿಗೆ ತಂಡದಲ್ಲಿ ನೆಲೆಯೂರುವಂತೆ ಪ್ರೋತ್ಸಾಹ ಬೆಂಬಲವನ್ನು ನೀಡಿ ಉಳಿಸಿಕೊಂಡು ಭಾರತ ಇಂದು ಕ್ರಿಕೆಟ್ ನಲ್ಲಿ ಬಲಿಷ್ಠವಾಗಿ ಕಾಣಿಸಿಕೊಳ್ಳುವಂತೆ ಮಾಡಲು ಮೂಲ ರಾಗಿದ್ದಾರೆ. ಭಾರತ ಕ್ರಿಕೆಟ್ ತಂಡ ಇಂದು ಬಲಿಷ್ಠವಾಗಿದೆ ಎಂದರೆ ಅದಕ್ಕೆ ನಾವು ಮಹೇಂದ್ರ ಸಿಂಗ್ ಧೋನಿಯವರಿಗೆ ಸದಾ ಕೃತಜ್ಞರಾಗಿರಬೇಕು. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav