ಸಂಚಾರಿ ವಿಜಯ್ ರವರಿಗೆ ಇನ್ನೂ ಕೂಡ ಮದುವೆಯಾಗಿರಲಿಲ್ಲ ಯಾಕೆ ಗೊತ್ತಾ?? ಗೆಳತಿಯಿಂದ ಬಯಲಾಯ್ತು ಅಸಲಿ ಮಾಹಿತಿ
ಸಂಚಾರಿ ವಿಜಯ್ ರವರಿಗೆ ಇನ್ನೂ ಕೂಡ ಮದುವೆಯಾಗಿರಲಿಲ್ಲ ಯಾಕೆ ಗೊತ್ತಾ?? ಗೆಳತಿಯಿಂದ ಬಯಲಾಯ್ತು ಅಸಲಿ ಮಾಹಿತಿ
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಆಗಲಿ ಯಾವ ಚಿತ್ರರಂಗದಲ್ಲಿ ಆಗಲಿ ಅವರು ನಮ್ಮನ್ನು ಅಗಲಿ ಹೋದ ನಂತರ ಅವರು ಎಂತಹ ಒಳ್ಳೆ ನಟರು ಅವರಿಗೆ ಅವಕಾಶ ನೀಡಬೇಕಿತ್ತು ಎಂಬ ಬಡಾಯಿಕೊಚ್ಚಿಕೊಳ್ಳುವ ಜಾಸ್ತಿ ಇದ್ದಾರೆ. ಆದರೆ ಅದೇ ಇರುವಾಗ ಅವರಿಗೆ ಅವಕಾಶ ನೀಡಿದ್ದರೆ ಅವರು ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನೀವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಮಟ್ಟದ ತಮ್ಮ ಪ್ರತಿಭೆ ಅನಾವರಣವನ್ನು ಮಾಡಿ ಇನ್ನಷ್ಟು ಜನರ ಮನಗೆಲ್ಲುವಲ್ಲಿ ಸಫಲರಾಗುತ್ತಿದ್ದರು.
ಹೌದು ಇಂದು ನಾವು ಮಾತನಾಡಲು ಹೊರಟಿರುವುದು ಇತ್ತೀಚಿಗಷ್ಟೇ ನಮ್ಮನ್ನು ಬಿಟ್ಟು ಹೋದಂತಹ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಕುರಿತಂತೆ. ಎಲ್ಲರಿಗೂ ಸಂಚಾರಿ ವಿಜಯ್ ಅವರ ರಾಷ್ಟ್ರಪ್ರಶಸ್ತಿ ವಿಜೇತ ಎಂಬ ಬಿರುದುಗಳು ಮಾತ್ರ ಗೊತ್ತು ಹೊರತು. ಅದರ ಹಿಂದಿನ ಅವರ ಕಷ್ಟ ಕೋಟಲೆಗಳ ಜೀವನ ಯಾರಿಗೂ ಗೊತ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಚಿತ್ರರಂಗಕ್ಕೆ ಬಂದ ಮೇಲೆ ಕೂಡ ಅವರು ಕಷ್ಟಪಡುವುದನ್ನು ನಿಲ್ಲಿಸಿರಲಿಲ್ಲ. ಹೌದು ಸಂಚಾರಿ ವಿಜಯ್ ರವರು ಚಿಕ್ಕವಯಸ್ಸಿನಿಂದಲೂ ಕಷ್ಟಗಳ ಹಾಗೂ ಅವಮಾನಗಳ ನಡುವೆ ಬೆಳೆದು ಬಂದವರು.
ಅವರ ತಂದೆ ತಾಯಿಯರು ಅಂತ ರ್ಜಾತಿ ವಿವಾಹವಾಗಿದ್ದಕ್ಕಾಗಿ ಊರವರಿಂದ ಬ ಹಿಷ್ಕಾರ ಹಾಕಿಸಲ್ಪಟ್ಟವರು. ನಂತರ ಸಂಚಾರಿ ವಿಜಯ್ ರವರು ಚಿಕ್ಕ ವಯಸ್ಸಿನಲ್ಲೇ ಇರಬೇಕಾದರೆ ಅವರನ್ನು ಅವರು ತಂದೆ-ತಾಯಿಯರು ಅಗಲಿದರು. ಸುಖದ ಸುಪ್ಪತ್ತಿಗೆಯಲ್ಲಿ ಇರುವಂತಹ ವಯಸ್ಸಿನಲ್ಲಿಯೇ ಕೆಲಸಕ್ಕೆ ಹೊರಟರು ನಮ್ಮ ಸಂಚಾರಿ ವಿಜಯ್. ಹೌದು ಮಲ್ನಾಡ್ ಕೆಫೆ ಎಂಬ ಹೋಟೆಲ್ನಲ್ಲಿ ಸಪ್ಲೈಯರ್ ಇಂದ ಹಿಡಿದು ಲೋಟ ತೊಳೆಯುವ ವರೆಗೂ ಸಹ ಎಲ್ಲ ಕೆಲಸಗಳನ್ನು ಮಾಡಿದವರು ಸಂಚಾರಿ ವಿಜಯ್.
ನಂತರದ ದಿನಗಳಲ್ಲಿ ರಂಗಭೂಮಿಯ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಸಂಚಾರಿ ವಿಜಯ್. ಸಂಚಾರಿ ವಿಜಯ್ ಅವರು ಮಾಡದಂತಹ ಪಾತ್ರವಿರಲಿಲ್ಲ. ಮಂಗಳಮುಖಿ ಪಾತ್ರದಿಂದ ಹಿಡಿದು ಖಡಕ್ ಅಧಿಕಾರಿಯಾಗಿ ಕೂಡ ಕಾಣಿಸಿಕೊಂಡವರು ಸಂಚಾರಿ ವಿಜಯ್. ಇನ್ನೂ ಅವರು ಹರಿವು ನಾನು ಅವನಲ್ಲ ಅವಳು ಹಾಗೂ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು. ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಎಂದೇ ಖ್ಯಾತರಾದ ರೆ ಹೊರತು ಅವರ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಅವರ ಕೊನೆಯವರೆಗೂ ಸಿಕ್ಕಲಿಲ್ಲ.
ಅವರ ಪ್ರತಿಭೆಗೆ ಸರಿಯಾದ ಅವಕಾಶ ಸಿಕ್ಕಿದ್ದರೆ ಅದನ್ನು ಅವರು ಸದುಪಯೋಗಪಡಿಸಿಕೊಂಡು ಎಂದು ಸೂಪರ್ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದರು. ಕೇವಲ ಚಿತ್ರರಂಗ ಅವರನ್ನು ಪ್ರತಿಭಾನ್ವಿತ ನಟ ಎಂದಷ್ಟೇ ಕರೆಯಿತೆ ಹೊರತು ಅವರಿಗೆ ಸರಿಯಾದ ಪ್ರೋತ್ಸಾಹ ಬೆಂಬಲ ನೀಡಲಿಲ್ಲ. ಅವರನ್ನು ಕಳೆದುಕೊಂಡ ಮೇಲೆ ಒಬ್ಬ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆಯಲ್ಲಿ ಈಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಹೊರತು ಇನ್ನೇನಿಲ್ಲ. ಇದನ್ನು ಬಿಡಿ ಸಂಚಾರಿ ವಿಜಯ್ ಅವರಿಗೆ ಈಗಾಗಲೇ 38 ವರ್ಷ ವಯಸ್ಸಾಗಿತ್ತು. ಆದರೂ ಸಹ ಅವರು ಮದುವೆಯಾಗಿರಲಿಲ್ಲ ಇದಕ್ಕೆ ಅವರ ಗೆಳತಿಯೊಬ್ಬರು ಸರಿಯಾದ ವಿವರವನ್ನು ನೀಡಿ ದ್ದಾರೆ ಹೇಳುತ್ತೇವೆ ಬನ್ನಿ.
ಹೌದು ರಾಷ್ಟ್ರಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ರವರು ವಯಸ್ಸು 38 ಆದರೂ ಕೂಡ ಮದುವೆಯಾಗಿರಲಿಲ್ಲ. ಇದರ ಕುರಿತಂತೆ ಅವರ ಗೆಳತಿ ನಿರೂಪಕಿ ಭಾರತೀಯವರು ಸರಿಯಾದ ಉತ್ತರ ನೀಡಿದ್ದಾರೆ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ನಿರೂಪಕಿ ಭಾರತಿ ಅವರು ಹೇಳುವಂತೆ ಅವರು ಪ್ರತಿ ಸಾರಿ ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು ಕೇಳಿದಾಗ ವಿಜಯ ರವರು ಕೊಡುತ್ತಿದ್ದ ಉತ್ತರ ಏನು ಗೊತ್ತಾ ಸ್ನೇಹಿತರೆ ಈ ಕಾಲದಲ್ಲಿ ಪ್ರತಿ ಹುಡುಗಿ ನೋಡುವುದು ಬ್ಯಾಂಕ್ ಬ್ಯಾಲೆನ್ಸ್ ನನ್ನ ಬಳಿ ಸರಿಯಾದ ಆರ್ಥಿಕ ಪರಿಸ್ಥಿತಿ ಇನ್ನೂ ಕೂಡ ಬಂದಿಲ್ಲ. ಹಾಗಾಗಿ ಹಣವಿಲ್ಲದೆ ಮದುವೆಯಾಗಿ ಏನು ಮಾಡಲಿ ಎಂದು ಹೇಳುತ್ತಿದ್ದರಂತೆ.
ನೋಡಿ ಸ್ನೇಹಿತರೆ ತನ್ನಿಂದಾಗಿ ಇನ್ನೊಬ್ಬ ಹುಡುಗಿಯ ಜೀವನ ಹಾಳಾಗಬಾರದೆಂಬ ಮೌಲ್ಯಗಳು ಅವರ ಜೀವನದಲ್ಲಿ ಇತ್ತೆಂಬುದು ಇದರಲ್ಲಿ ಗೊತ್ತಾಗುತ್ತದೆ. ಆದರೂ ಕೂಡ ಸಂಚಾರಿ ವಿಜಯ್ ರವರು ಇನ್ನೂ ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ನಮ್ಮನ್ನು ರಂಜಿಸಲು ಸಿದ್ದರಾಗಿದ್ದರೋ ಏನೋ ಆದರೆ ವಿಧಿ ಅವರನ್ನು ಬಿಡದೆ ಅರ್ಧದಾರಿಯಲ್ಲಿ ಅವರ ಸಂಚಾರವನ್ನು ಮೊಟಕುಗೊಳಿಸಿ ತನ್ನೊಂದಿಗೆ ಕರೆದೊಯ್ದಿತು. ಈ ಕುರಿತಂತೆ ಸಂಚಾರಿ ವಿಜಯ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡ್ದೆ ಹಂಚಿ ಕೊಳ್ಳಿ.