ಮತ್ತೊಮ್ಮೆ ಕಾಣಿಸಿಕೊಂಡು ರಾಹುಲ್ ಗೆ ವಿಶ್ ಮಾಡಿದ ರಮ್ಯಾ, ಒಂದೇ ವಾಕ್ಯದಲ್ಲಿ ಹಾಡಿ ಹೊಗಳಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳುವ ಮೂಲಕ ಸ್ಯಾಂಡೆಲ್ ವುಡ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ರಮ್ಯಾ ರವರು, ಕನ್ನಡದ ಚಿತ್ರ ರಂಗದಲ್ಲಿ ಇಂದಿಗೂ ಕೂಡ ತಮ್ಮದೇ ಆದ ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಟಾಪ್ ನಟಿ ಯಾರು ಎಂದರೆ ರಮ್ಯಾ ರವರ ಪೈಪೋಟಿ ನೀಡಲು ಮತ್ಯಾವ ನಟಿಯು ಇಲ್ಲವೇನೋ ಎನ್ನುವಷ್ಟು ಯಶಸ್ಸು ಗಳಿಸಿದ್ದರು.

ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಗಳಿಸಿದ ರಮ್ಯಾ ರವರು, ವಿವಿಧ ವೈಯಕ್ತಿಕ ಕಾರಣಗಳಿಂದ ಚಿತ್ರ ರಂಗದಿಂದ ದೂರ ಹೋದರು. ಹಾಗೂ ಇದೀಗ ಇತ್ತೀಚಿನ ಕೆಲ ವರ್ಷಗಳಲ್ಲಿ ಅವರು ಭಾರತದಲ್ಲಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಒಮ್ಮೆ ಒಂದೆರಡು ಬಾರಿ ದುಬೈ ನಲ್ಲಿ ಕಾಣಿಸಿಕೊಂಡಿದ್ದರು. ಸಂಸದೆಯಾಗಿಯೂ ಕಾರ್ಯ ನಿರ್ವಹಣೆ ಮಾಡಿರುವ ರಮ್ಯಾ ರವರು ಇದೀಗ ದೇಶದಲ್ಲಿಯೇ ಇರದೇ ಇರುವುದು ನಿಜಕ್ಕೂ ಬೇಸರದ ಸಂಗತಿ.

ಇವರನ್ನು ಎಷ್ಟೇ ಟ್ರೊಲ್ ಮಾಡಿದ್ದರೂ ಕೂಡ ಈಗಲೂ ಕೂಡ ಇವರು ಮತ್ತೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ ಎಂದರೆ ಖಂಡಿತಾ ಅಭಿಮಾನಿಗಳು ಖುಷಿಯಾಗುತ್ತಾರೆ. ಇನ್ನು ಇವಾಗ ಯಾಕೆ ಇವರ ವಿಷಯ ಎನ್ನುವುದಾದರೆ ಇತ್ತೀಚಿಗೆ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇವರು ಇದೀಗ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬ ಶುಭ ಕೋರಿದ್ದಾರೆ. ಆದರೆ ಅವರು ಶುಭ ಕೋರಿರುವ ಪದಗಳಿಗೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ, ನೀವು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಸ್ನೇಹಿತರೇ ವಿಶ್ ಮಾಡುವಾಗ ರಮ್ಯಾ ರವರು, ರಾಹುಲ್ ರವರ ಫೋಟೋ ಹಾಕಿ, ಜಗತ್ತನ್ನು ಉತ್ತಮವಾಗಿಸುವ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ರೀತಿ ಬೇರೆ ಯಾರೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯ.

Facebook Comments

Post Author: Ravi Yadav