ಇದು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು – ಇದರ ಬೆಲೆ ಒಂದು ಕೆಜಿಗೆ ಎಷ್ಟು ಗೊತ್ತಾ?? ತಿನ್ನುವ ಆಸೆ ಇದೆಯೇ??

ಇದು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು – ಇದರ ಬೆಲೆ ಒಂದು ಕೆಜಿಗೆ ಎಷ್ಟು ಗೊತ್ತಾ?? ತಿನ್ನುವ ಆಸೆ ಇದೆಯೇ??

ನಮಸ್ಕಾರ ಸ್ನೇಹಿತರೇ ಹಣ್ಣುಗಳ ರಾಜ ಅಂದರೇ ಅದು ಮಾವಿನ ಹಣ್ಣು. ಅದೆಷ್ಟೋ ಸಂವತ್ಸರಗಳು ಕಳೆದರೂ ಮಾವಿನ ಹಣ್ಣಿನ ಪ್ರೀಯರು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದರೆ. ವ್ಯಾಪಾರಿಗಳ ಪ್ರಕಾರ ಪ್ರತಿ ಸೀಸನ್ ನಲ್ಲೂ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚು.ಕೆಲವೊಮ್ಮೆ ಪೂರೈಸಲಾಗದಷ್ಟು ಬೇಡಿಕೆ ಇರುತ್ತದೆ ಎಂದು ಸಹ ಹೇಳಿದ್ದಾರೆ. ಸಾಮಾನ್ಯವಾಗಿ ಮಾವಿನ ಹಣ್ಣಿನ ಹಲವು ತಳಿಗಳು ನಿಮಗೆ ಪರಿಚಿತವಾಗಿರುತ್ತವೆ.ತೋತಾಪುರಿ, ರಸಪುರಿ, ಮಲ್ಲಿಕಾ, ಬಾದಾಮಿ, ನೀಲಂ, ಈಶಾಡಿ,ಕೇಸರಿ , ಮಲ್ಗೋವಾ ಹೀಗೆ. ಆದರೇ ಇವುಗಳ ಬೆಲೆ ಹೆಚ್ಚೆಂದರೇ ಕೆಜಿಗೆ ಇನ್ನೂರು ರೂಪಾಯಿ ಆಗಬಹುದು.

ಆದರೇ ಇದೀಗ ಭೋಪಾಲ್ ನ ದಂಪತಿಗಳು ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಮಾವು ಬೆಳೆದು ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಮಾವಿನ ವಿಶೇಷತೆಯೆಂದರೇ, ಈ ಮಾವಿನ ಹಣ್ಣಿನಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್ ಗಳು ಇರುತ್ತವೆಯಂತೆ. ದೃಷ್ಠಿದೋಷವುಳ್ಳವರು ಈ ಮಾವನ್ನ ನಿಯಮಿತವಾಗಿ ಸೇವಿಸಿದರೇ, ದೃಷ್ಠಿ ಸಂಪೂರ್ಣ ವಾಪಸ್ ಬರುತ್ತದೆಯಂತೆ. ಈ ಮಾವಿನ ಹಣ್ಣು ನೇರಳೆ ಬಣ್ಣದಲ್ಲಿರುತ್ತದೆ. ಈ ಮೂಲ ತಳಿ ಜಪಾನ್ ನಿಂದ ಭಾರತಕ್ಕೆ ಬಂದಿದೆಯಂತೆ. ಜಪಾನ್ ನಲ್ಲಿ ಸಾಮಾನ್ಯ ಸಿಗುವ ಈ ಮಾವಿನ ತಳಿಯನ್ನು, ಜಪಾನಿಯರು ಉಡುಗೊರೆ ರೂಪದಲ್ಲಿ ಪರಸ್ಪರ ಬದಲಾಯಿಸಿಕೊಳ್ಳುತ್ತಾರಂತೆ.

ಅಂದ ಹಾಗೆ ಜಪಾನ್ ನಲ್ಲಿ ಈ ಮಾವಿನ ತಳಿಯ ಹೆಸರು ಮಿಯಾಜಾಕಿ ಎಂದು. ಭಾರತದಲ್ಲಿ ಸದ್ಯ ಸೂರ್ಯನ ಮೊಟ್ಟೆ ಎಂಬ ಹೆಸರಿನಿಂದ ಈ ತಳಿಯನ್ನು ಕರೆಯುತ್ತಾರೆ. ಏಷ್ಯಾದ ಕೆಲವೇ ಕೆಲವು ದೇಶಗಳಲ್ಲಿ ಈ ಹಣ್ಣು ಬೆಳೆಯುವ ಕಾರಣ ಇದಕ್ಕೆ ಬೆಲೆ ಹೆಚ್ಚು. ಅಂದ ಹಾಗೆ ಈ ಮಾವಿನ ಹಣ್ಣು ಕಳೆದ ವರ್ಷ ಕೆ.ಜಿ ಗೆ 2 ಲಕ್ಷ 70 ಸಾವಿರಕ್ಕೆ ಬಿಕರಿಯಾಗಿ ಏಷ್ಯಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಸಿತ್ತು. ಪ್ರತಿ ಬಿಡಿ ಹಣ್ಣಿಗೆ ಒಂದಕ್ಕೆ ಎರಡು ಸಾವಿರ ರೂಪಾಯಿ ಇದೆಯಂತೆ. ಇಂತಹ ಮಾವಿನ ಹಣ್ಣು ಬೆಳೆದ ಭೋಪಾಲ್ ನ ದಂಪತಿ ತೋಟಕ್ಕೆ ಕಳೆದ ಭಾರಿ ಕಳ್ಳರು ದಾಳಿ ನಡೆಸಿದ್ದಂತೆ‌. ಆದರೇ ಈ ಭಾರಿ ದಂಪತಿ ತೋಟಕ್ಕೆ ಕಾವಲುಗಾರರನ್ನು ಹಾಗೂ ಎರಡು ನಾಯಿಗಳನ್ನ ಬಿಟ್ಟು ಬೆಳೆಯನ್ನ ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರಂತೆ. ಸದ್ಯ ಭೋಪಾಲ್ ನ ಕೃಷಿ ಸಂಶೋಧಕರು ಈ ತಳಿಯನ್ನ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲೇ ದೇಶಾದ್ಯಂತ ನೇರಳೆ ಬಣ್ಣದ ಮಾವಿನ ಹಣ್ಣು ಬಿಡುವ ಸಸಿಗಳು ನಾಟಿಗೆ ದೊರೆಯಬಹುದು. ಈ ಹಣ್ಣು ಹಾಗೂ ಅದರ ಬೆಲೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.