ಬಿಗ್ ನ್ಯೂಸ್: ಬುಲೆಟ್ ಪ್ರಕಾಶ್ ಮಗನಿಗೆ ಡಿ-ಬಾಸ್ ದರ್ಶನ್ ಬೆಲ್ಟ್ ತೆಗೆದುಕೊಂಡು ಭಾರಿಸಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉರ್ಫ್ ಡಿ-ಬಾಸ್. ಕೇಳಿದ್ದನ್ನ ಕೊಡುವ ಕರುಣಾಮಯಿ, ಕೊಡುಗೈ ದಾನಿ. ನಂಬಿದವರನ್ನ ಯಾವತ್ತೂ ಕೈ ಬಿಡದ ಮನುಷ್ಯ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ. ಏಡಗೈಲಿ ಕೊಟ್ಟಿದ್ದನ್ನ ಬಲಗೈಗೂ ತಿಳಿಸದಂತಹ ದರ್ಶನ್ ರವರ ವ್ಯಕ್ತಿತ್ವಕ್ಕೆ ಸೋಲದವರೇ ಇಲ್ಲ. ಕಳೆದ ವರ್ಷ ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಕಾಲಿಕವಾಗಿ ನಮ್ಮೆಲ್ಲರನ್ನ ಬಿಟ್ಟು ಹೋದಾಗ, ಹಿಂದು ಮುಂದು ನೋಡದ ದರ್ಶನ್, ಬುಲೆಟ್ ಪ್ರಕಾಶ್ ರವರ ಮಗಳ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಆ ಕ್ಷಣದಲ್ಲೇ ವಹಿಸಿಕೊಂಡಿದ್ದರು. ಹಾಗೆ ನೋಡಿದರೇ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಗೆಳೆತನ ಇಂದು ನಿನ್ನೆಯದಲ್ಲ.

ದರ್ಶನ್ ರ ಎಲ್ಲಾ ಸಿನಿಮಾಗಳಲ್ಲೂ ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ದರ್ಶನ್ , ಬುಲೆಟ್ ಪ್ರಕಾಶ್ ರ ಎಲ್ಲಾ ಕಷ್ಟಗಳಲ್ಲಿಯೂ ನೆರವಾಗಿದ್ದಾರೆ. ಎರಡು ಕುಟುಂಬಗಳು ಮೊದಲಿನಿಂದಲೂ ಪರಸ್ಪರ ಸ್ನೇಹ ಸಂಭಂದದಿಂದ ಒಟ್ಟಾಗಿದ್ದವು. ಇತ್ತೀಚೆಗಷ್ಟೇ ಬುಲೆಟ್ ಪ್ರಕಾಶ್ ಮಗ ಸಂದರ್ಶನವೊಂದರಲ್ಲಿ ನಟ ದರ್ಶನ್ ತಮಗೆ ಬೆಲ್ಟ್ ನಲ್ಲಿ ಭಾರಿಸಿದ್ದ ಪ್ರಸಂಗವನ್ನು ಹೇಳಿದ್ದರು. ಅದರ ವಿವರ ಹೀಗಿದೆ.

ಕೆಲವು ವರ್ಷಗಳ ಹಿಂದೆ ಬುಲೆಟ್ ಪ್ರಕಾಶ್ ಮಗ ಹೊಸದಾಗಿ ಫೇಸ್ ಬುಕ್ ಅಕೌಂಟ್ ಒಪನ್ ಮಾಡಿ ಅಂದರಿಂದ ಡಿ-ಬಾಸ್ ದರ್ಶನ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರಂತೆ. ಮಾರನೇ ಬುಲೆಟ್ ಮಗ ದರ್ಶನ್ ರವರ ಮನೆಗೆ ಹೋದಾಗ, ದರ್ಶನ್ ಏನ್ ಸಾರ್ ನೀವೇನಾ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದು ಎಂದು ಕೇಳಿದರಂತೆ. ಅದಕ್ಕೆ ಬುಲೆಟ್ ಪ್ರಕಾಶ್ ಮಗ ಹೌದು ಎಂದರಂತೆ. ಅಷ್ಟಕ್ಕೆ ಸಿಟ್ಟಾದ ದರ್ಶನ್, ಬುಲೆಟ್ ಪ್ರಕಾಶ್ ಮಗನಿಗೆ ಬೆಲ್ಟ್ ತೆಗೆದುಕೊಂಡು ಬಾರಿಸಿದರಂತೆ. ಓದುವ ವಯಸ್ಸಲ್ಲಿ ನಿಮಗೇಕೆ ಫೇಸ್ಬುಕ್ಕು. ಮೊದಲು ನಿಮ್ಮ ವಿದ್ಯಾಭ್ಯಾಸ ಮುಗಿಸಿ. ಆಮೇಲೆ ಸೋಶಿಯಲ್ ಮೀಡಿಯಾ ಗೆ ಬನ್ನಿ ಎಂದು ಬುದ್ದಿ ಹೇಳಿದರಂತೆ. ಆ ಸಮಯದಲ್ಲಿ ಪಕ್ಕದಲ್ಲಿದ್ದ ಬುಲೆಟ್ ಪ್ರಕಾಶ್, ಇನ್ನು ಎರಡು ಭಾರಿಸಿ ನನ್ ಮಗನಿಗೆ, ಅವನು ನನ್ನ ಮಾತು ಕೇಳುವುದಿಲ್ಲ ಎಂದು ಹೇಳಿದರಂತೆ. ದರ್ಶನ್ ರ ಬಳಿ ಬೆಲ್ಟ್ ನಲ್ಲಿ ಭಾರಿಸಿದ್ದು ಸಹ ನನಗೆ ಹೆಮ್ಮೆಯ ಕ್ಷಣ. ಇಂತಹ ಅದೃಷ್ಠ ಎಷ್ಟು ಜನರಿಗೆ ಸಿಗುತ್ತದೆ ಎಂದು ಕೇಳುತ್ತಾರೆ ಬುಲೆಟ್ ಪ್ರಕಾಶ್ ರವರ ಮಗ. ದರ್ಶನ್ ರ ಗುಣಕ್ಕೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav