ವಿಷ್ಣು ಸರ್ ಹೆಸರಿನ ಕುರಿತಾದ ನಂತರ ಇದೀಗ ಮತ್ತೊಮ್ಮೆ, ಕನ್ನಡ ಚಿತ್ರರಂಗದ ಕರಾಳತೆಯನ್ನು ತೆಗೆದಿಟ್ಟ ಅನಿರುದ್, ಹೇಳಿದ್ದೇನು ಗೊತ್ತೇ??
ವಿಷ್ಣು ಸರ್ ಹೆಸರಿನ ಕುರಿತಾದ ನಂತರ ಇದೀಗ ಮತ್ತೊಮ್ಮೆ, ಕನ್ನಡ ಚಿತ್ರರಂಗದ ಕರಾಳತೆಯನ್ನು ತೆಗೆದಿಟ್ಟ ಅನಿರುದ್, ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಕನ್ನಡ ಚಿತ್ರರಂಗವನ್ನು ಸಾಕಷ್ಟು ತಿಳಿದಿದ್ದೇವೆ ಎಂಬ ಭ್ರಮೆಯಲ್ಲಿ ಜನರು ಬದುಕುತ್ತಿದ್ದಾರೆ. ಹೌದು ಇಲ್ಲಿ ಪ್ರತಿಭೆಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಅಂದುಕೊಂಡರೆ ಅದು ಎಲ್ಲರ ಮೂರ್ಖತನ ಎಂಬುದಾಗಿ ಈಗ ಕೆಲವರು ಸುದ್ದಿಗಳು ಬರುತ್ತಿವೆ. ಹೌದು ಈ ತರಹದ ಸುದ್ದಿಗಳು ಸ್ಯಾಂಡಲ್ ವುಡ್ಡಲ್ಲಿ ಸದ್ದು ಮಾಡಲು ಕಾರಣವೇನು ಎಂದು ತಿಳಿಸುತ್ತೇವೆ ಬನ್ನಿ. ಇದು ಮಹತ್ವದ ವಿಷಯವಾಗಿದ್ದು ಇದನ್ನು ಮೊದಲಿನಿಂದ ಕೊನೆಯವರೆಗೂ ತಪ್ಪದೇ ಓದಿ.
ಹೌದು ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡಿದೆ. ಹೌದು ಸಂಚಾರಿ ವಿಜಯ್ ಅವರು ಕಾಣದ ಲೋಕಕ್ಕೆ ನಮ್ಮನ್ನೆಲ್ಲ ಬಿಟ್ಟು ಸಂಚಾರವನ್ನು ಅರ್ಧದಲ್ಲೇ ಮೊಟಕು ಗೊಳಿಸಿ ಕಣ್ಮರೆಯಾಗಿದ್ದಾರೆ. ಇದರ ಕುರಿತಂತೆ ಮಾತನಾಡಿದ್ದ ನಟ ಅನಿರುದ್ಧ ರವರು ಕೆಲವೊಂದು ವಿಷಯಗಳನ್ನು ಹಾಗೂ ಸ್ಯಾಂಡಲ್ವುಡ್ನ ಕೆಲ ರಹಸ್ಯಗಳನ್ನು ಹೊರಬಿಚ್ಚಿಟ್ಟಿದ್ದಾರೆ.
ಹೌದು ಸ್ನೇಹಿತರೇ ಈ ಕುರಿತಂತೆ ಮಾತನಾಡಿರುವ ನಟ ಅನಿರುದ್ಧ ಅವರು ಕನ್ನಡ ಚಿತ್ರರಂಗದಲ್ಲಿ ನಟ ಸಂಚಾರಿ ವಿಜಯ್ ಅವರು ಸಾಕಷ್ಟು ಉತ್ತಮ ಪಾತ್ರಗಳನ್ನು ಹಾಗೂ ಉತ್ತಮ ನಟನೆಯನ್ನು ಮಾಡಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ಅವರಿಗೆ ಸರಿಯಾದ ಅವಕಾಶಗಳನ್ನು ಕನ್ನಡ ಚಿತ್ರರಂಗದಲ್ಲಿ ನೀಡಿಲ್ಲ. ಈ ಭಾಗವನ್ನು ನನ್ನ ಜೀವನದಲ್ಲಿ ಕೂಡ ನಾನು ನೋಡಿದ್ದೇನೆ. ಎಲ್ಲರೂ ನಿಮ್ಮ ನಟನೆ ಚೆನ್ನಾಗಿದೆ ನೀವು ಚೆನ್ನಾಗಿ ನಟಿಸುತ್ತೀರಿ ಎಂಬುದನ್ನೆಲ್ಲ ಹೊಗಳುತ್ತಾರೆ.
ಆದರೆ ಅವಕಾಶ ವನ್ನಾಗಲಿ ತಮ್ಮ ಮೇಲೆ ಬಂಡವಾಳ ಹೂಡುವುದರಲ್ಲಾಗಲಿ ಆಸಕ್ತಿ ತೋರಿಸುವುದಿಲ್ಲ. ಕೇವಲ ನೀವು ಚೆನ್ನಾಗಿ ನಟಿಸುತ್ತೀರಾ ಎಂದು ಬಾಯಿಯಲ್ಲಿ ಮಾತ್ರ ಹೊಗಳುತ್ತಾರೆ. ಆದರೆ ನಮ್ಮ ಈ ಪ್ರತಿಭೆಗೆ ಅವರು ಬಂಡವಾಳ ಹಾಕಲು ಹಾಗೂ ಚಿತ್ರ ನಿರ್ಮಾಣ ಮಾಡಲು ಮುಂದೆ ಬರುವುದಿಲ್ಲ. ಅದಕ್ಕೆ ಕಾರಣ ಕೇಳಿದರೆ ನಿಮ್ಮ ಮಾರ್ಕೆಟ್ ಇಲ್ಲ ನಿಮ್ಮನ್ನು ನೋಡಲು ಯಾರು ಬರುತ್ತಾರೆ ನಿಮ್ಮಮ್ಮ ದುಡ್ಡು ಹಾಕಿದರೆ ನಾವು ನಷ್ಟ ಹೊಂದಬೇಕಾಗುತ್ತದೆ ಎಂಬ ಮಾತನ್ನು ಹೇಳುತ್ತಾರೆ.
ಈ ಕುರಿತಂತೆ ಮುಂದುವರೆದು ಇನ್ನೂ ಕೆಲ ವಿಷಯಗಳನ್ನು ಹೇಳಿರುವ ನಟ ಅನಿರುದ್ಧ ರವರು ನಮ್ಮ ಕನ್ನಡ ಚಿತ್ರರಂಗದವರು ಪ್ರತಿಭೆಯನ್ನು ನಂಬಿ ಬಂಡವಾಳವನ್ನು ಹೂಡಲು ಪ್ರಾರಂಭಿಸಬೇಕು. ನಮ್ಮೆಲ್ಲರಿಗೆ ಮಲಯಾಳಂ ಚಿತ್ರರಂಗ ಮಾದರಿಯ ಎಂಬುದಾಗಿ ತಿಳಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮುಖ ಭಾವ ಬಣ್ಣ ಏನನ್ನು ಗಮನಿಸದೆ ಕೇವಲ ಪ್ರತಿಭೆಯನ್ನು ಮಾತ್ರ ಗಮನಿಸಿ ಬಂಡವಾಳ ಹೂಡಿ ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಅಂತಹ ನಿಯಮ ಹಾಗೂ ಕಾರ್ಯಗಳು ಕನ್ನಡ ಚಿತ್ರರಂಗದಲ್ಲಿ ಕೂಡ ಬಹಳಷ್ಟು ನಡೆಯಬೇಕಿದೆ. ಇಲ್ಲದಿದ್ದರೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳ ಬಳಕೆಯಾಗದೆ ಉತ್ತಮ ಚಿತ್ರಗಳು ಹೊರಬರುವುದಿಲ್ಲ ಎಂಬುದಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರೆ ಅನಿರುದ್ರ ಅವರು ಹೇಳುವ ಮಾತಿನಲ್ಲಿ ಸತ್ಯವಿದ್ದರೂ ಸಹ ಅದು ನಿಜ ಜೀವನಕ್ಕೆ ಹತ್ತಿರವಾಗಿದ್ದು ಕೂಡ ಹೌದು. ಒಂದು ಒಂದು ಕಡೆಯಲ್ಲಿ ನಾವು ಪ್ರತಿಭೆಗಳಿಗೆ ಸರಿಯಾದ ಅವಕಾಶ ಸಿಗದೇ ನಶಿಸಿಹೋಗುತ್ತಿವೆ ಎಂಬುದಾಗಿ ಕಂಡರು ಸಹ ಇನ್ನೊಂದು ಕಡೆ ಬಂಡವಾಳ ಹಾಕಲು ನಿರ್ಮಾಪಕ ಯಾವಾಗ ಮುಂದೆ ಬರುತ್ತಾನೆ ಗೊತ್ತಾ ಸ್ನೇಹಿತರೆ ಯಾವಾಗ ಅವನಿಗೆ ಲಾಭ ಹಿಂದೆ ಬರುತ್ತದೆ ಎಂದು. ಲಾಭವಿಲ್ಲದ ಯಾವ ನಿರ್ಮಾಪಕರು ಸಹ ಬಂಡವಾಳ ಹೂಡಲು ಹಿಂದೆ ಮುಂದೆ ಯೋಚಿಸಿಯೇ ಯೋಚಿಸುತ್ತಾನೆ. ಆದರೂ ಅನಿರುದ್ರ ಅವರು ಹೇಳಿರುವ ಮಾತಿನಲ್ಲಿ ಸತ್ಯ ಇರೋದಂತೂ ಸಹಜ. ಅನಿರುದ್ಧ್ ಅವರ ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮ್ಮೊಂದಿಗೆ ಇದು ಸರಿಯೋ ತಪ್ಪೋ ಎಂಬುದನ್ನು ಹಂಚಿಕೊಳ್ಳಿ.