ಬಿಗ್ ನ್ಯೂಸ್: ಐಪಿಎಲ್ ಗೆ ಮತ್ತಷ್ಟು ಕಳೆ, ದಾಂಡಿಗರ ದಂಡನ್ನು ಕರೆತರುವಲ್ಲಿ ಗಂಗೂಲಿ ಯಶಸ್ವಿ, ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಐಪಿಎಲ್ ಟೂರ್ನಿಯು ಅರ್ಧಕ್ಕೆ ನಿಂತು ಹೋಗಿತ್ತು, ಅಂದು ಕೊಂಡ ವೇಳಾಪಟ್ಟಿ ಪ್ರಕಾರ ಐಪಿಎಲ್ ಟೂರ್ನಿ ನಡೆಯದ ಕಾರಣ ಐಪಿಎಲ್ ನಡೆಯುವ ಕುರಿತು ಕೂಡ ಅನುಮಾನ ಮೂಡಿತ್ತು, ಆದರೆ ಉಳಿದ ಐಪಿಎಲ್ ಟೂರ್ನಿಯನ್ನು UAE ದೇಶದಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿತ್ತು. ಆದರೆ ಅದೇ ಸಮಯದಲ್ಲಿ ಐಪಿಎಲ್ ಟೂರ್ನಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು.

ಮೊದಲಿಗೆ ಪಾಕಿಸ್ತಾನ ಐಪಿಎಲ್ ನಡೆದರೆ ವಿಶ್ವಕಪ್ ಟೂರ್ನಿಯಲ್ಲಿ ಬದಲಾವಣೆ ತರಬೇಕಾಗುತ್ತದೆ ಎಂದು ಐಸಿಸಿ ಬಾಗಿಲು ತಟ್ಟಿತ್ತು. ಆದರೆ ಗಂಗೂಲಿ ರವರು ಐಸಿಸಿ ಜೊತೆ ಮಾತುಕತೆ ನಡೆಸಿ, ಭಾರತದಲ್ಲಿ ವಿಶ್ವಕಪ್ ನಿಗದಿತ ವೇಳಾಪಟ್ಟಿಯಂತೆ ನಡೆಯಲು ಹೇಗಿದ್ದರೂ ಸಾಧ್ಯವಿಲ್ಲ ಯಾಕೆಂದರೆ ಕೊರೊನ. ಆದ ಕಾರಣ ನಾವು ಐಪಿಎಲ್ ನಡೆಸಿಕೊಳ್ಳುತ್ತೇವೆ, ಎಲ್ಲ ಸರಿ ಹೋದಮೇಲೆ ವಿಶ್ವಕಪ್ ಬಗ್ಗೆ ಮಾತನಾಡೋಣ, ಯಾವುದೇ ಕಾರಣಕ್ಕೂ ವಿಶ್ವಕಪ್ ನಡೆಸಲು ನಾವು ಬೇರೆ ಕಡೆ ನಡೆಸಲು ಬಿಡುವುದಿಲ್ಲ, ಪಾಕಿಸ್ತಾನ ಏನೇ ಅಂದರು ನಮ್ಮ ನಿರ್ಧಾರ ಇದೇ ಎಂದು ಪ್ರತಿಕ್ರಿಯೆ ನೀಡಿದ್ದರು. ಇದರ ಬಳಿಕ ಪಾಕ್ ಕ್ರಿಕೆಟ್ ಸಂಸ್ಥೆ ಹಾಗೂ ಐಸಿಸಿ ಎರಡು ಸುಮ್ಮನಾಗಿದ್ದರು.

ಆದರೆ ಇಷ್ಟೆಲ್ಲ ವಿದ್ಯಮಾನಗಳ ನಡುವೆ ಹಲವಾರು ದೇಶಗಳ ಆಟಗಾರರು ಐಪಿಎಲ್ ನಡೆಯುವ ಸಮಯದಲ್ಲಿ ವಿವಿಧ ಟೂರ್ನಿಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದಿದ್ದರು. ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ದೇಶದ ಆಟಗಾರರು ಬರುವುದಿಲ್ಲ ಎಂದಿದ್ದರು. ಆದರೆ ಆಸ್ಟ್ರೇಲಿಯಾ ಆಟಗಾರರು ಕಳೆದ ಎರಡು ದಿನಗಳ ಹಿಂದೆ ಒಪ್ಪಿಕೊಳ್ಳುವಂತೆ ಮಾಡಿದ್ದರು, ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬಳಿ ಮಾತನಾಡಿರುವ ಗಂಗೂಲಿ ರವರು, ಕ್ಯಾರೇಬಿಯಾನ್ ಲೀಗ್ ಅನ್ನು ಮುಂದೂಡುವಂತೆ ಮಾತಕತೆ ನಡೆಸಿದ್ದರು. ಇದೀಗ ಈ ಮಾತುಕತೆ ಯಶಸ್ವಿಯಾಗಿದ್ದು, ವೆಸ್ಟ್ ಇಂಡೀಸ್ ತಂಡದ ಆಟಗಾರರು ಕೂಡ ಐಪಿಎಲ್ ಗೆ ಬರಲಿದ್ದಾರೆ. ಇನ್ನು ಉಳಿದದ್ದು ಇಂಗ್ಲೆಂಡ್, ತಂಡ, ಅವರು ಬರುತ್ತಾರೆ ಬಿಡಿ, ಯಾಕೆಂದರೆ ಗಂಗೂಲಿ ಹೇಳಿದರೆ ಇಲ್ಲ ಎನ್ನಲು ಸಾಧ್ಯವೇ ಇಲ್ಲ.

Post Author: Ravi Yadav