ಕನ್ನಡ ಚಿತ್ರರಂಗದಲ್ಲಿ ಟಿವಿಯಲ್ಲಿ ಪ್ರಸಾರವಾದಾಗ ಅತಿ ಹೆಚ್ಚು ಜನರು ಒಮ್ಮೆಲೇ ನೋಡಿದ ಟಾಪ್ ಚಿತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಚಿತ್ರಗಳನ್ನು ಎರಡು ಪ್ರಕಾರವಾಗಿ ಅದರ ಜನಪ್ರಿಯತೆ ಹಾಗೂ ಯಶಸ್ಸನ್ನು ಅಳೆಯಲಾಗುತ್ತದೆ. ಮೊದಲನೆಯದಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ಅದು ಎಷ್ಟು ಬಾಕ್ಸಾಫೀಸ್ ಗಳಿಕೆಯನ್ನು ಗಳಿಸಿದೆ ಹಾಗೂ ಎಷ್ಟು ದಿನಗಳ ಕಾಲ ಅದು ಪ್ರದರ್ಶನ ಕಂಡಿದೆ ಎಂಬುದು ಒಂದಾದರೆ‌. ಇನ್ನೊಂದು ಅದು ಟಿವಿಯಲ್ಲಿ ಪ್ರಸಾರವಾದ ಮೇಲೆ ಎಷ್ಟು ಟಿಆರ್ಪಿ ಪಡೆದಿದೆ ಎಂಬುದನ್ನು ಲೆಕ್ಕ ಹಾಕುವುದು. ಮೊದಲ ಟಿಆರ್ಪಿ ಎಂಬುದಾಗಿ ಹಾಕುತ್ತಿದ್ದರು ಈಗ ಟಿವಿಟಿ ಎಂಬ ಮಾಪನದ ಪ್ರಕಾರ ಲೆಕ್ಕಹಾಕುತ್ತಾರೆ. ನೋಡೋಣ ಎಮಾಪನ ಪ್ರಕಾರ ಅತಿ ಹೆಚ್ಚು ವೀಕ್ಷಣೆಯನ್ನು ಕಂಡ ಕನ್ನಡ ಚಿತ್ರಗಳು ಯಾವುದು ಎಂದು.

ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬಹು ತಾರಾಗಣದಲ್ಲಿ ಮೂಡಿಬಂದ ಅದ್ದೂರಿ ಚಿತ್ರ ಕುರುಕ್ಷೇತ್ರ. ಇದು ಟೆಲಿವಿಷನ್ ವೀಕ್ಷಣೆಯ ತಾಣದಲ್ಲಿ ನಂಬರ್ ವನ್ನಾಗಿ ಮಿಂಚುತ್ತಿದೆ. ಕುರುಕ್ಷೇತ್ರವನ್ನು 124,26,000 ಜನ ವೀಕ್ಷಣೆ ಮಾಡಿದ್ದರು. ದೊಡ್ಮನೆ ಹುಡುಗ 2017 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಚಿತ್ರ ದೊಡ್ಮನೆ ಹುಡುಗ ವನ್ನು 121,61,000 ಲಕ್ಷ ಜನ ವೀಕ್ಷಣೆ ಮಾಡಿದ್ದರು.

ಪೈಲ್ವಾನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಚಿತ್ರ ಪೈಲ್ವಾನ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ 105,25,000 ಜನ ವೀಕ್ಷಣೆ ಮಾಡಿದರು. ರಾಜಕುಮಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇಂಡಸ್ಟ್ರಿ ಹಿಟ್ ಎಂಬ ಪಟ್ಟವನ್ನು ಪಡೆದು ಕಿರುತೆರೆಯಲ್ಲಿ ಕೂಡ 92.60 ಲಕ್ಷ ಜನ ನೋಡಿದ್ದಾರೆ. ನಟಸಾರ್ವಭೌಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಬಹುಭಾಷಾ ನಟಿ ಅನುಪಮ ಪರಮೇಶ್ವರನ್ ನಲ್ಲಿ ಮೂಡಿಬಂದ ಚಿತ್ರ ಜೀ ಕನ್ನಡದಲ್ಲಿ ಪ್ರಸಾರವಾಗಿ 80.18 ಲಕ್ಷ ಜನ ವೀಕ್ಷಿಸಿದರು.

ಹೆಬ್ಬುಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಹುಭಾಷ ತಾರೆ ಅಮಲಾ ಪೌಲ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಹೆಬ್ಬುಲಿ ಚಿತ್ರ ಕನ್ನಡ ಚಿತ್ರರಂಗದಲ್ಲಿ 10 ಕೋಟಿ ಮೊದಲ ದಿನ ಗಳಿಸಿದ ಮೊದಲ ಕನ್ನಡ ಚಿತ್ರ ವಾಗಿ ಕಂಡಿತು. ಹೆಬ್ಬುಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಗ ಬರೋಬ್ಬರಿ 74.60 ಲಕ್ಷ ಜನ ಇದನ್ನು ವೀಕ್ಷಿಸಿದರು. ಯಜಮಾನ ಡಿ ಬಾಸ್ ನಟನೆ ಯಜಮಾನ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲದೆ ಕಿರುತೆರೆಯಲ್ಲಿ ಸಹ 72.61 ಲಕ್ಷ ಜನ ಕುಟುಂಬ ಸಮೇತರಾಗಿ ವೀಕ್ಷಿಸಿದರು.

ಮಾಸ್ಟರ್ ಪೀಸ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಶಾನ್ವಿ ಶ್ರೀವಾಸ್ತವ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಚಿತ್ರ ಉದಯ ಟಿವಿಯಲ್ಲಿ 65.14 ವೀಕ್ಷಕರಿಂದ ವೀಕ್ಷಣೆಗೆ ಒಳಪಟ್ಟಿತ್ತು. ಕೆಜಿಎಫ್ ಚಾಪ್ಟರ್ 1 ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಕೆಜಿಎಫ್ ಚಾಪ್ಟರ್ 1 ಕೇವಲ ಬಾಕ್ಸಾಫೀಸ್ ನಲ್ಲಿ ಹಾಗೂ ಅಮೆಜಾನ್ ಪ್ರೇಮ್ ನಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ಇತಿಹಾಸವನ್ನು ಸೃಷ್ಟಿಸಿತ್ತು. ಈ ಚಿತ್ರವನ್ನು ಬರೋಬರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ 65.07 ಲಕ್ಷ ಜನ ವೀಕ್ಷಿಸಿದರು.

ಮಾಸ್ತಿಗುಡಿ ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಸಹ 64.21 ಲಕ್ಷ ಜನ ವೀಕ್ಷಣೆ ಮಾಡಿದರು. ಐರಾವತ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್ ಅಲ್ಲಿ ಮೂಡಿ ಬಂದಂತಹ ಐರಾವತ ಚಿತ್ರ ಕಿರುತೆರೆಯಲ್ಲಿ ಲಕ್ಷಾಂತರ ಜನಗಳಿಂದ ವೀಕ್ಷಣೆಗೆ ಒಳಪಟ್ಟಿದ್ದು. ಬರೋಬ್ಬರಿ 59.68 ಲಕ್ಷ ಜನರಿಂದ ವೀಕ್ಷಣೆಗೆ ಒಳಪಟ್ಟಿದೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಕನ್ನಡ ಸೂಪರ್ ಸರ್ ನಟರ ಯಾವ ಟಾಪ್ ಚಿತ್ರಗಳು ಕಿರುತೆರೆಯ ಅತ್ಯಂತ ವೀಕ್ಷಣೆಗೆ ಒಳಪಟ್ಟಿದೆ ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ತೋರಿಸಿಕೊಟ್ಟಿದ್ದೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪಾಪದ ನಮ್ಮ ಕಾಮನ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Facebook Comments

Post Author: Ravi Yadav