ರೆಡಿಯಾಗ್ತಿದೆ ದ್ರಾವಿಡ್ ಬಯೋಪಿಕ್ ಸಿನಿಮಾ, ಪಾತ್ರ ಮಾಡುತ್ತಿರುವ ಆ ನಟ ಯಾರು ಗೊತ್ತೇ?? ಬೇಡವೇ ಬೇಡ ಎಂದ ನೆಟ್ಟಿಗರು.
ರೆಡಿಯಾಗ್ತಿದೆ ದ್ರಾವಿಡ್ ಬಯೋಪಿಕ್ ಸಿನಿಮಾ, ಪಾತ್ರ ಮಾಡುತ್ತಿರುವ ಆ ನಟ ಯಾರು ಗೊತ್ತೇ?? ಬೇಡವೇ ಬೇಡ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಸಿನಿಮಾ ಜಗತ್ತಿನಲ್ಲಿಗ ಬಯೋಪಿಕ್ ಗಳ ಒಂದು ಹೊಸ ಟ್ರೆಂಡ್ ಶುರು ಆಗಿದೆ. ಎಂ.ಎಸ್.ಧೋನಿಯಿಂದ ಶುರುವಾಗಿದ್ದ ಟ್ರೆಂಡ್, ಮೇರಿಕೋಮ್, ಸೈನಾ ನೆಹ್ವಾಲ್, ಕರುಣಂ ಮಲ್ಲೇಶ್ವರಿ, ಅಂಜು ಬಾಬಿ ಜಾರ್ಜ್, ಕಪಿಲ್ ದೆವ್, ಮಿಲ್ಕಾ ಸಿಂಗ್ ತನಕ ಬಂದು ನಿಂತಿದೆ. ಈಗ ಭಾರತೀಯ ಕ್ರಿಕೇಟ್ ತಂಡ ಕಂಡ ಶ್ರೇಷ್ಠ ಆಟಗಾರ, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ರವರ ಬಯೋಪಿಕ್ ಸಿನಿಮಾ ತಯಾರಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಈ ಸಿನಿಮಾ, ಕನ್ನಡ, ತಮಿಳು,ತೆಲುಗು,ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿದೆ. ಸಿನಿಮಾಕ್ಕೆ “ದಿ ವಾಲ್” ಎಂದು ಹೆಸರಿಡಲಾಗಿದೆ. ಹೈದರಾಬಾದ್ ನ ನಿರ್ದೇಶಕ ಅಜಯ್ ಭೂಪತಿ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಈಗಾಗಲೇ ಕತೆ-ಚಿತ್ರಕತೆಯನ್ನು ಸಿದ್ದಪಡಿಸಿದ್ದು, ದ್ರಾವಿಡ್ ರವರಿಗೆ ನೀಡಿದ್ದಾರಂತೆ. ದ್ರಾವಿಡ್ ಸ್ಕ್ರಿಪ್ಟ್ ನೋಡಿ ಬಹಳ ಇಂಪ್ರೆಸ್ ಆದರು ಎಂದು ಅಜಯ್ ಭೂಪತಿ ಹೇಳಿದರು.
ಅಂದ ಹಾಗೇ ರಾಹುಲ್ ದ್ರಾವಿಡ್ ಸಿನಿಮಾದಲ್ಲಿ ದ್ರಾವಿಡ್ ಪಾತ್ರದಲ್ಲಿ ನಟಿಸುತ್ತಿರುವ ನಟ ಬೇರಾರು ಅಲ್ಲ. ಬೊಮ್ಮರಿಲ್ಲು ಖ್ಯಾತಿಯ ನಟ ಸಿದ್ದಾರ್ಥ್. ತೆಲುಗು-ತಮಿಳು-ಮಲಯಾಳಿ-ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಿದ್ದಾರ್ಥ್ ಈ ಪಾತ್ರದಲ್ಲಿ ನಟಿಸಲು ಮಾನಸಿಕರಾಗಿ ಸಿದ್ದವಾಗುತ್ತಿದ್ದಾರೆಂದು ಹೇಳಲಾಗುತ್ತಿದೆ. ದ್ರಾವಿಡ್ ರ ಬಾಲ್ಯದಿಂದ ಶುರುವಾಗುವ ಸಿನಿಮಾ, ದ್ರಾವಿಡ್ ಭಾರತ ಎ ತಂಡದ ಕೋಚ್ ಆಗಿ ಅಂಡರ್ 19 ವಿಶ್ವಕಪ್ ಗೆಲ್ಲಿಸುವದರಿಂದ ಸಿನಿಮಾ ಮುಗಿಯುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ರಾಹುಲ್ ದ್ರಾವಿಡ್ ರ ಈ ಬಯೋಪಿಕ್ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.