ಮರಳಿ ಬಿಗ್ ಬಾಸ್ ಗೆ ಹೋದಾಗ ಈ ಕೆಲಸ ಮಾಡಿದರೆ ಮಂಜು ರವರದ್ದೇ ಗೆಲುವು ಎಂದ ಅಭಿಮಾನಿಗಳು. ಏನು ಮಾಡಬೇಕಂತೆ ಗೊತ್ತೇ??
ಮರಳಿ ಬಿಗ್ ಬಾಸ್ ಗೆ ಹೋದಾಗ ಈ ಕೆಲಸ ಮಾಡಿದರೆ ಮಂಜು ರವರದ್ದೇ ಗೆಲುವು ಎಂದ ಅಭಿಮಾನಿಗಳು. ಏನು ಮಾಡಬೇಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಇನ್ನು ಇತ್ತೀಚಿಗಷ್ಟೇ ಕನ್ನಡದ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿತ್ತು. ಆದರೆ ಅದು ಅರ್ಧದಲ್ಲಿಯೇ ನಿಂತು ಹೋಗಿದ್ದು, ಸಾಕಷ್ಟು ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಬೇಸರ ತಂದಿತ್ತು. ಆದರೆ ಒಂದು ರೀತಿಯಲ್ಲಿ ನೋಡಿದರೆ ಇದು ಅರ್ಧಕ್ಕೆ ನಿಂತಿದ್ದು ತುಂಬಾ ಒಳ್ಳೆಯದು ಎಂದು ಹಲವರು ಹೇಳಿದ್ದಾರೆ. ಏಕೆಂದರೆ ಇದೀಗ ಕರುನಾ ಹೆಚ್ಚಾಗಿ ಹರಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಕೆಲಸ ಮಾಡುವ ನೂರಾರು ಜನರ ಆರೋಗ್ಯ ದೃಷ್ಟಿಯಿಂದ ಸರಿ ನಿರ್ಧಾರ ಎಂದು ಹೇಳುವುದು.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಎಲ್ಲರಂತೆ ಕಾಮಿಡಿ ಸ್ಟಾರ್ ಮಂಜು ಪಾವಗಡ ಅವರು ಕೂಡ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಬಂದು ಸಾಕಷ್ಟು ವಿಚಾರಗಳನ್ನು ಹಂಚಿ ಕೊಂಡಿದ್ದರು.
ಕನ್ನಡ ಕಿರುತೆರೆಯಲ್ಲಿ ಮಜಾಭಾರತ ರಿಯಾಲಿಟಿ ಶೋ ಮೂಲಕ ಹೆಸರಾದ ಮಂಜು ಪಾವಗಡ ಅವರು ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಇನ್ನು ಮಜಾ ಭಾರತ ಮುಗಿಯುತ್ತಿದೆ ಮುಂದೇನು ಎಂಬ ಚಿಂತೆಯಲ್ಲಿದ್ದ ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ದಾರಿಯನ್ನು ತೋರಿಸಿತು. ಹೀಗೆ ಮಜಾಭಾರತ ರಿಯಾಲಿಟಿ ಶೋ ಮುಗಿದ ನಂತರ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಭಾಗಿಯಾದರು. ಇನ್ನು ಮಜಾಭಾರತ ರಿಯಾಲಿಟಿ ಶೋದಂತೆ ಅವರು ಬಿಗ್ ಬಾಸ್ ಮನೆಯಲ್ಲಿ ಕೂಡ ಸಾಕಷ್ಟು ವೀಕ್ಷಕರ ಮನಸ್ಸನ್ನು ಗೆದ್ದರು.
ಇನ್ನು ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರಾರಂಭದ ದಿನದಿಂದ ದಿವ್ಯ ಸುರೇಶ್ ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಆ ಸಮಯದಲ್ಲಿ ಅರವಿಂದ್ ಹಾಗೂ ಶಮಂತ್ ಅವರು ಕೂಡ ದಿವ್ಯ ಸುರೇಶ್ ಅವರ ಹಿಂದೆ ಬಿದ್ದಿದ್ದರು. ಆದರೆ ಮಂಜು ಪಾವಗಡ ಅವರು ಅವರನ್ನೆಲ್ಲ ಹಿಂದಕ್ಕೆ ತಮ್ಮ ಮಾತಿನ ಮೂಲಕ ದಿವ್ಯ ಸುರೇಶ್ ಅವರ ಮನಸ್ಸಿಗೆ ಹತ್ತಿರವಾಗಿದ್ದರು. ಆ ಸಮಯದಲ್ಲಿ ಇವರಿಬ್ಬರನ್ನು ಮಧ್ಯ ಪ್ರೀತಿ ಹಾಗೂ ಮದುವೆ ವಿಚಾರ ಸಾಕಷ್ಟು ಬಾರಿ ಪ್ರಸ್ತಾಪವಾಗಿತ್ತು. ಅಷ್ಟೇ ಅಲ್ಲದೆ ಮಂಜು ಅವರು ಶುಭಾ ಪೂಂಜಾ ಅವರ ಎದುರು ಈ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿದ್ದರು. ಇದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಆದರೆ ದಿನೇ ದಿನೇ ಇವರ ಆಟ ಮಂಕಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಪ್ರಾರಂಭವಾಗಲಿರುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಅಭಿಮಾನಿಗಳು ಮಂಜು ಪಾವಗಡ ಅವರಿಗೆ ವಿವಿಧ ಸಲಹೆಗಳನ್ನು ನೀಡುತ್ತಿದ್ದಾರೆ. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ಗೆಲ್ಲಬೇಕಾದರೆ ಏನು ಮಾಡಬೇಕೆಂದು ಸಾಕಷ್ಟು ಅಭಿಮಾನಿಗಳು ಇದೀಗಾಗಲೇ ಸಲಹೆಗಳನ್ನು ನೀಡುತ್ತಿದ್ದಾರೆ.
ಇದೀಗ ಹಲವಾರು ಅಭಿಮಾನಿಗಳು ನೀವು ಬಿಗ್ ಬಾಸ್ ಸೀಸನ್ ಗೆಲ್ಲಬೇಕೆಂದರೆ ಮೊದಲು ದಿವ್ಯ ಸುರೇಶ್ ಅವರಿಂದ ದೂರ ವಾಗಬೇಕು. ಇದೀಗ ನೀವು ಹೊರ ಪ್ರಪಂಚದ ಬಗ್ಗೆ ಅರ್ಥ ಮಾಡಿಕೊಂಡು ಜನರು ದಿವ್ಯ ಸುರೇಶ ರವರಿಂದ ನಿಮ್ಮ ಆಟ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ, ಆದರಿಂದ ದಿವ್ಯ ಸುರೇಶ್ ಅವರಿಂದ ದೂರವಾಗಿ ನಿಮ್ಮ ಆಟವನ್ನು ನೀವು ಆಡಿ ಅಂದಾಗ ಮಾತ್ರ ನೀವು ಗೆಲ್ಲಬಹುದು ಎಂದು ಹೇಳುತ್ತಿದ್ದಾರೆ. ಏಕೆಂದರೆ ಪ್ರಾರಂಭದಲ್ಲಿ ಜೊತೆಯಾಗಿ ಇರುತ್ತಿದ್ದ ಈ ಜೋಡಿ ನಂತರದ ದಿನಗಳಲ್ಲಿ ಕೊಂಚ ದೂರವಾಗಿತ್ತು. ಇದೀಗ ಅದೇ ರೀತಿ ಮಂಜು ಅವರಿಗೆ ತಮ್ಮ ಆಟವನ್ನು ಆಡಲು ಸಾಕಷ್ಟು ಜನರು ಸಲಹೆ ನೀಡುತ್ತಿದ್ದಾರೆ.