ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿದ್ದ ಹುಡುಗ ಇಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು? ಯಾರು ಗೊತ್ತೇ??

ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿದ್ದ ಹುಡುಗ ಇಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು? ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ದುನಿಯಾದಲ್ಲಿ ಯಶಸ್ವಿಯಾಗಲು ಕೇವಲ ಶ್ರಮ ಒಂದಿದ್ದರೆ ಸಾಕಾಗದು. ಶ್ರಮ ಪಟ್ಟು ದುಡಿಯುವುದು ಎಲ್ಲರೂ ಮಾಡೇ ಮಾಡುತ್ತಾರೆ ಆದರೆ ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲಲು ನಿಮ್ಮ ಬಳಿ ಪ್ರತಿಭೆ ಹಾಗೂ ಅದನ್ನು ತೋರಿಸುವ ಬಗೆ ವಿಭಿನ್ನವಾಗಿರಬೇಕು. ಹೌದು ಸ್ನೇಹಿತರೆ ಅದರಲ್ಲೂ ಚಿತ್ರರಂಗದಲ್ಲಿ ನೀವು ನಟರಾಗಿ ಬೆಳೆಯಬೇಕೆಂದರೆ ನಿಮ್ಮಲ್ಲಿ ಎಲ್ಲರಿಗಿಂತ ವಿಭಿನ್ನವಾಗಿರುವ ಆಕ್ಟಿಂಗ್ ಸ್ಕಿಲ್ ಇರಲೇಬೇಕು. ಹಾಗಿದ್ದರೆ ಮಾತ್ರ ಈ ಸ್ಪರ್ಧಾತ್ಮಕ ಚಿತ್ರರಂಗದ ಕ್ಷೇತ್ರದಲ್ಲಿ ನೀವು ವಿಭಿನ್ನವಾಗಿ ಸೂಪರ್ ಸ್ಟಾರ್ ಆಗಲು ಸಾಧ್ಯ. ಈ ಮಾತಿಗೆ ಸರಿಹೊಂದುವಂತೆ ಇರುವ ನಟನ ಕುರಿತಂತೆ ನಾವು ಎಂದು ಹೇಳಲು ಹೊರಟಿದ್ದೇನೆ.

ಹೌದು ನಾವು ಹೇಳಲು ಹೊರಟಿರುವ ಆ ನಟ ಈಗ ತಮಿಳುನಾಡು ಚಿತ್ರರಂಗದಲ್ಲಿ ಬಹುಬೇಡಿಕೆಯ ಖ್ಯಾತ ನಟ ಹಾಗೂ ಸೂಪರ್ಸ್ಟಾರ್ ಕೂಡ ಹೌದು. ಇಂದಿಗೂ ಸ್ಟಾರ್ ಆಗಿದ್ದರೂ ಕೂಡ ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ನೇರ ಹಾಗೂ ಸರಳ ವ್ಯಕ್ತಿತ್ವ ಅವರದು. ಆದರೆ ಅವರು ಇಲ್ಲಿವರೆಗೆ ಬರಲು ಆಯ್ಕೆಮಾಡಿದ ಹಾದಿಯಲ್ಲಿ ಸಾಕಷ್ಟು ಕಠಿಣ ಹಾಗೂ ಕಷ್ಟ ಅನುಭವಿಸಿ ಇಲ್ಲಿಯವರೆಗೆ ಬಂದಿದ್ದಾರೆ. ಹೌದು ಒಮ್ಮೆ ನಟನೆ ಆಸಕ್ತಿಯಲ್ಲಿ ಅವರು ತಾವು 16ವರ್ಷ ವಯಸ್ಸು ಇರಬೇಕಾದರೆ ಸ್ಟಾರ್ ನಟರೊಬ್ಬರ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಲು ಆಡಿಶನ್ ಗೆ ಹೋಗಿದ್ದರು.

ಆದರೆ ಆ ಚಿತ್ರದ ನಿರ್ದೇಶಕರು ನಿನ್ನ ಮುಖ ನೋಡಿಕೊ ಈ ನಟನೆಯಲ್ಲಿ ನಿನಗೆ ಆಗುವುದಿಲ್ಲ ಮನೆಗೆ ಹೋಗು ಎಂದು ಗದರಿದರು. ಅಲ್ಲಿಂದ ಬೇಸರಗೊಂಡು ಮನೆಗೆ ಬಂದ ಇವರು ತನ್ನ ಮನಸ್ಸಿನಲ್ಲಿ ತನಗೆ ತಾನೇ ಧೈರ್ಯ ತಂದುಕೊಂಡರು. ಇತ್ತ ನಟನೆಯ ಬಗ್ಗೆ ಅಪಾರವಾದ ಆಸಕ್ತಿ ಇದ್ದರೂ ಬದುಕಿನ ಬಂಡಿಯನ್ನು ಎಳಿಯಲು ಅವರಿಗೆ ಸಂಪಾದನೆ ಯ ಅವಶ್ಯಕ ಕೂಡ ಅಪಾರವಾಗಿತ್ತು. ಹಾಗಾಗಿ ಮೊದಲು ಅವರು ಸಿಮೆಂಟ್ ಅಂಗಡಿಯಲ್ಲಿ ನಂತರ ಬಟ್ಟೆ ಅಂಗಡಿಯಲ್ಲಿ ನಂತರದ ದಿನಗಳಲ್ಲಿ ಟೆಲಿಫೋನ್ ಬೂತ್ ಗಳಲ್ಲಿ ಕೂಡ ಕೆಲಸ ಮಾಡಿದರು.

ನಂತರ ಕೇವಲ 12 ಸಾವಿರ ಸಂಬಳಕ್ಕಾಗಿ ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದರು. ಆದರೂ ಕೂಡ ಅವರ ಮನಸ್ಸಿನಲ್ಲಿರುವ ಆ ಕಲಾವಿದ ಇನ್ನೂ ಜೀವಂತವಾಗಿದೆ. ಈ ಕೆಲಸಗಳೆಲ್ಲ ಕೇವಲ ಅವರ ಜೀವನಕ್ಕಾಗಿ ಆದರೆ ಅವರ ಮನಸ್ಸಿಗೆ ನಟನಾಗಿ ತನ್ನ ವೃತ್ತಿಯನ್ನು ಆರಂಭಿಸಬೇಕೆಂಬ ಹಂಬಲ ಬಹಳವಾಗಿತ್ತು‌. ನಂತರ ಭಾರತಕ್ಕೆ ಬಂದ ಅವರು ಒಂದು ನಟನ ತಂಡವನ್ನು ಸೇರಿ ಅಲ್ಲಿ ನಟನೆ ಅವಕಾಶವನ್ನು ಕೇಳಿದರು. ಆದರೆ ಆ ಸಂಸ್ಥೆಯವರು ಈಗ ನಟನೆಗೆ ಯಾವ ಅವಕಾಶವೂ ಇಲ್ಲ ಎಲ್ಲ ಭರ್ತಿಯಾಗಿದೆ ಬೇಕಿದ್ದರೆ ನೀವು ಅಕೌಂಟೆಂಟ್ ಆಗಿ ಕೆಲಸ ಮಾಡಿ ಎಂದು ಹೇಳಿದರು.

ಅಲ್ಲಿ ಕೂಡ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾ ಆಗಾಗ ಕೆಲವೊಮ್ಮೆ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ನಂತರ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಕಾರ್ತಿಕ್ ಸುಬ್ಬರಾಜ್ ಅವರ ಕೆಲ ಕಿರುಚಿತ್ರಗಳಲ್ಲಿ ಕೂಡ ಆಗೀಗ ಕಾಣಿಸಿಕೊಳ್ಳುತ್ತಿದ್ದರು. ನಂತರ ಕಾರ್ತಿಕ್ ಸುಬ್ಬರಾಜು ರವರ ನಿರ್ದೇಶನದ ಬಿಜಾ ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಚಿತ್ರದ ಚಿತ್ರೀಕರಣವು ಪೂರ್ಣಗೊಂಡರೂ ಎರಡು ವರ್ಷದವರೆಗೆ ಚಿತ್ರ ಬಿಡುಗಡೆ ಆಗಲಿಲ್ಲ. ನಂತರ ಲೇಟಾಗಿ ಆದರೂ ಲೇಟೆಸ್ಟ್ ಆಗಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ಈ ಚಿತ್ರ ಬಾಕ್ಸಾಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಹೌದು ನಾವು ಹೇಳುತ್ತಿರುವ ನಟ ಇನ್ಯಾರೂ ಅಲ್ಲ.

ತಮಿಳು ಚಿತ್ರರಂಗದ ಮೂಲಕ ತಮ್ಮ ನಟನೆಯ ವಿಶ್ವರೂಪವನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ತೋರಿಸಿ ಎಲ್ಲರಿಂದ ಪ್ರೀತಿಯಿಂದ ಮಕ್ಕಳ ಸೆಲ್ವನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ವಿಜಯ್ ಸೇತುಪತಿ ಅವರ ಕುರಿತಂತೆ ನಾವು ಮಾತನಾಡುತ್ತಿರುವುದು. ಚಿತ್ರದ ಯಶಸ್ಸಿನ ನಂತರ ವಿಜಯ್ ಸೇತುಪತಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ತಮಿಳು ಚಿತ್ರರಂಗದಿಂದ ಭಾರತೀಯ ಎಲ್ಲಾ ಚಿತ್ರರಂಗದಲ್ಲಿ ಕೂಡ ಬಹು ಮೆಚ್ಚಿನ ನಟನಾಗಿ ತಮ್ಮ ನಟನೆಯ ಮೂಲಕ ಪ್ರಖ್ಯಾತಿಯನ್ನು ಪಡೆದು ಕೊಂಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ವಿಜಯ್ ಸೇತುಪತಿ ಅವರ ಸ್ಪೂರ್ತಿದಾಯಕ ಜೀವನಗಾಥೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.