ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಪ್ಲೇಯಿಂಗ್ ಇಲೆವೆನ್ ತಂಡ ಪ್ರಕಟಿಸಿದ ಬಿಸಿಸಿಐ – ತಂಡದಲ್ಲಿ ಸ್ಥಾನ ಪಡೆದವರಾರು ಗೊತ್ತಾ??

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಪ್ಲೇಯಿಂಗ್ ಇಲೆವೆನ್ ತಂಡ ಪ್ರಕಟಿಸಿದ ಬಿಸಿಸಿಐ ವೆಬ್ಸೈಟ್ – ತಂಡದಲ್ಲಿ ಸ್ಥಾನ ಪಡೆದವರಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೆ ಕೊನೆಗೂ ಭಾರತ ತನ್ನ 15 ಸಂಭವನೀಯ ಪ್ಲೇಯಿಂಗ್ ತಂಡ ಘೋಷಿಸಿದೆ. 15 ರಲ್ಲಿ 11 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಅನೀರಿಕ್ಷಿತ ಎಂಬಂತೆ ಕನ್ನಡಿಗರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರವಾಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, 15ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಅಲ್ಲಿಗೆ ರೋಹಿತ್ ಶರ್ಮಾ ಜೊತೆ ಶುಭಮಾನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಖ ಖಚಿತವಾಗಿದೆ. 15 ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ. – ರೋಹಿತ್ ಶರ್ಮಾ, ಶುಭಮಾನ್ ಗಿಲ್, ಚೇತೆಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಇಶಾಂತ್ ಶರ್ಮಾ, ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ, ಉಮೇಶ್ ಯಾದವ್ , ಮಹಮದ್ ಸಿರಾಜ್.

ಈ ತಂಡ ಗಮನಿಸಿದರೇ ಹನುಮ ವಿಹಾರಿ ಹಾಗೂ ವೃದ್ಧಿಮಾನ್ ಸಹಾ ಸ್ಟಾಂಡ್ ಬೈ ಪ್ಲೇಯರ್ ಗಳು ಆಗಿರುತ್ತಾರೆ. ಹಾಗಾಗಿ ರಿಷಭ್ ಪಂತ್ ಸ್ಥಾನಕ್ಕೆ ತೊಂದರೆಯಿಲ್ಲ. ಇನ್ನು ತಂಡ ಮೂವರು ವೇಗಿಗಳ ಜೊತೆ ಆಡುತ್ತದೆಯೋ ಅಥವಾ ನಾಲ್ವರು ವೇಗಿಗಳ ಜೊತೆ ಆಡುತ್ತದೆಯೋ ಎಂಬುದಕ್ಕೆ ಇನ್ನು ಸ್ಪಷ್ಟತೆ ದೊರಕಿಲ್ಲ. ಐಸಿಸಿ ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದ್ದೆವೆ ಎಂಬ ಕಾರಣಕ್ಕೆ ಭಾರತ ಆರು ತಜ್ಞ ಬ್ಯಾಟ್ಸಮನ್ ಗಳು, ಇಬ್ಬರು ಆಲ್ ರೌಂಡರ್ ಸ್ಪಿನ್ನರ್ ಗಳು, ಮೂವರು ವೇಗಿಗಳ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ 15 ರಲ್ಲಿ ಆಡುವ ನಿಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ಬಗ್ಗೆ ನಮಗೆ ಕಮೆಂಟ್ ಮೂಲಕ ತಿಳಿಸಿ.