ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರತಿ ಇನ್ಸ್ಟಾಗ್ರಾಂ ಪೋಸ್ಟಿಗೂ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ಟಾಪ್ -7 ಕ್ರಿಕೆಟ್ ಆಟಗಾರರು ಯಾರು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಸೆಲೆಬ್ರೆಟಿಗಳೆಂದರೇ ಹಾಗೇ, ಅವರು ಮುಟ್ಟಿದೆಲ್ಲಾ ಚಿನ್ನ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೋಟ್ಯಾಂತರ ಜನರನ್ನ ಫಾಲೋವರ್ಸ್ ಆಗಿ ಹೊಂದಿರುವ ಅವರುಗಳು, ಹಾಕುವ ಪೋಸ್ಟ್ ಹಾಗೂ ಸ್ಪಾನ್ಸರ್ ವಿಡಿಯೋಗಳಿಗೂ ಕೋಟಿ ಕೋಟಿ ದುಡ್ಡು ಪಡೆದು ಕೊಳ್ಳುತ್ತಾರೆ. ಪ್ರತಿ ಸ್ಪಾನ್ಸರ್ ವಿಡಿಯೋ ಪೋಸ್ಟ್ ಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 7 ಆಟಗಾರರು ಈ ಕೆಳಗಿನಂತಿದ್ದಾರೆ.

ಟಾಪ್ -7 : ಡೇವಿಡ್ ವಾರ್ನರ್ – ಟಿಕ್ ಟಾಕ್ ನಲ್ಲಿ ಆಗಾಗ ಸುದ್ದಿಯಲ್ಲಿರುವ ಆಸೀಸ್ ಆರಂಭಿಕ ಬ್ಯಾಟ್ಸಮನ್ ಗೆ ಇನ್ಸ್ಟಾಗ್ರಾಂನಲ್ಲಿ 6 ಮಿಲಿಯನ್ ಫಾಲೋವರ್ ಗಳಿದ್ದಾರೆ. ಇವರು ತಮ್ಮ ಪ್ರತಿ ಸ್ಪಾನ್ಸರ್ ವಿಡಿಯೋ ಪೋಸ್ಟ್ ಗೆ 12 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾರೆ.

ಟಾಪ್ 6- ಎಬಿ.ಡಿ.ವಿಲಿಯರ್ಸ್ – ಮಿಸ್ಟರ್ 360 ಖ್ಯಾತಿಯ ಎಬಿಡಿ ಇನ್ಸ್ಟಾದಲ್ಲಿ 13.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರು ಪ್ರತಿ ಪೋಸ್ಟಿಗೂ 32 ಲಕ್ಷ ರೂಪಾಯಿ ತೆಗೆದು ಕೊಳ್ಳುತ್ತಾರೆ. ಇವರಿಗೆ ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಇನ್ನು ಇವರ ದೇಶದವರಷ್ಟೇ ಅಲ್ಲದೆ ಇತರ ದೇಶಗಳ ಕ್ರಿಕೆಟ್ ಪ್ರೇಮಿಗಳು ಕೂಡ ಹೆಚ್ಚಾಗಿ ಫಾಲೋ ಮಾಡುತ್ತಾರೆ.

ಟಾಪ್ 5 – ಸುರೇಶ್ ರೈನಾ : ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ 15.6 ಮಿಲಿಯನ್ ಫಾಲೋವರ್ಸ್ ನ ಇನ್ಸ್ಟಾದಲ್ಲಿ ಸಂಪಾದಿಸಿದ್ದಾರೆ. ಇವರು ಪ್ರತಿ ಸ್ಪಾನ್ಸರ್ ಪೋಸ್ಟ್ ಗೆ 34 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರೆ.

ಟಾಪ್ 4 – ಹಾರ್ದಿಕ್ ಪಾಂಡ್ಯ : ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಇನ್ಸ್ಟಾದಲ್ಲಿ 17.5 ಮಿಲಿಯನ್ ಫಾಲೋವರ್ಸ್ ಗಳನ್ನ ಹೊಂದಿದ್ದಾರೆ. ಇವರು ಪ್ರತಿ ಸ್ಪಾನ್ಸರ್ ಪೋಸ್ಟ್ ಗೆ 32 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾರೆ.

ಟಾಪ್ 3 – ರೋಹಿತ್ ಶರ್ಮಾ – ಭಾರತೀಯ ಆರಂಭಿಕ ಬ್ಯಾಟ್ಸಮನ್, ಹಿಟ್ ಮ್ಯಾನ್ ರೋಹಿತ್ ಶರ್ಮಾ 18‌.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರು ಪ್ರತಿ ಸ್ಪಾನ್ಸರ್ ಪೋಸ್ಟ್ ಗೆ 42 ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ.

ಟಾಪ್-2 : ಮಹೇಂದ್ರ ಸಿಂಗ್ ಧೋನಿ – ಭಾರತದ ಮಾಜಿ ನಾಯಕ ಧೋನಿ ಇನ್ಸ್ಟಾದಲ್ಲಿ 32 ಮಿಲಿಯನ್ ಫಾಲೋವರ್ಸ್ ಗಳನ್ನ ಹೊಂದಿದ್ದಾರೆ. ಇವರು ಪ್ರತಿ ಸ್ಪಾನ್ಸರ್ ಪೋಸ್ಟ್ ಗೆ 88 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.

ಟಾಪ್ 1 – ವಿರಾಟ್ ಕೊಹ್ಲಿ : ಭಾರತದ ನಾಯಕ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ದಾಖಲೆಯ 108 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರು ಪ್ರತಿ ಸ್ಪಾನ್ಸರ್ ಪೋಸ್ಟ್ ಗೆ ಬರೋಬ್ಬರಿ 2 ಕೋಟಿ ರೂಪಾಯಿಯನ್ನು ಜೇಬಿಗಿಳಿಸುತ್ತಾರೆ. ಈ ಟಾಪ್ 7 ಆಟಗಾರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.