ಮಾಲಾಶ್ರೀ ಅವರು ವಿಷ್ಣುವರ್ಧನ್ ರವರೊಂದಿಗೆ ನಟಿಸದೇ ಇರೋದಕ್ಕೆ ಕಾರಣ ಏನು ಗೊತ್ತಾ?? ಮಾಲಾಶ್ರೀ ರವರು ಹೇಳಿದ್ದೇನು ಗೊತ್ತೇ??
ಮಾಲಾಶ್ರೀ ಅವರು ವಿಷ್ಣುವರ್ಧನ್ ರವರೊಂದಿಗೆ ನಟಿಸದೇ ಇರೋದಕ್ಕೆ ಕಾರಣ ಏನು ಗೊತ್ತಾ?? ಮಾಲಾಶ್ರೀ ರವರು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಾಲಾಶ್ರೀ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ. 90ರ ದಶಕದಲ್ಲಿ ಮಾಲಾಶ್ರೀಯವರಿಗೆ ಇದ್ದ ಬೇಡಿಕೆ ಯಾವ ಸ್ಟಾರ್ ನಟರಿಗೆ ಇಲ್ಲದಂತಿತ್ತು. ಆಗಿನ ಕಾಲದಲ್ಲಿ ಮಾಲಾಶ್ರೀಯವರ ದರ್ಬಾರ್ ಆಗಿತ್ತು ಕನ್ನಡ ಚಿತ್ರರಂಗದಲ್ಲಿ. ಇನ್ನು ಈಗ ಹರಿದು ಬರುತ್ತಿರುವ ವಿಷಯವೇನೆಂದರೆ ಮಾಲಾಶ್ರೀ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಏಕೆ ನಟಿಸಲಿಲ್ಲ ಎಂದು. ಅದಿಕ್ಕೆ ಚಿತ್ರರಂಗದಲ್ಲಿ ಎರಡು ಗಾಳಿಸುದ್ದಿಗಳು ಓಡಾಡುತ್ತವೆ. ಅದೇನೆಂದು ತಿಳಿದುಕೊಳ್ಳೋಣ ಬನ್ನಿ.
ಮೊದಲನೇದಾಗಿ ಒಮ್ಮೆ ಮಾಲಾಶ್ರೀ ಅವರು ತಮ್ಮ ಉತ್ತುಂಗದ ಕಾಲದಲ್ಲಿ ಪ್ರೆಸ್ನಲ್ಲಿ ಒಂದು ಹೇಳಿಕೆಯನ್ನು ನೀಡಿದ್ದರಂತೆ. ಹೌದು ಕನ್ನಡ ಚಿತ್ರ ಆಗಿದ್ದರೆ ನನ್ನೊಂದಿಗೆ ಯಾವ ಹೊಸ ನಟರು ನಟಿಸಿದರು ಕೂಡ ಅವರ ಯಶಸ್ಸಿನ ಬಾಗಿಲು ತೆರೆದಂತೆ ಆಗುತ್ತದೆ. ನಾನು ಎಲ್ಲರಿಗೆ ಅದೃಷ್ಟವಂತೆ ಎಂದು ಹೇಳಿಕೊಂಡಿದ್ದರಂತೆ. ಅದಕ್ಕೂ ಮಿಗಿಲಾಗಿ ಅವರು ಹೇಳಿದ ಮಾತು ಈ ಗಾಳಿಸುದ್ದಿಯನ್ನು ಇನ್ನಷ್ಟು ಮಸಾಲ ಕಾರವಾಗಿ ಮಾಡುತ್ತದೆ. ಹೌದು ಈ ಗಾಳಿಸುದ್ದಿಯ ಪ್ರಕಾರ ಅಂದು ಮಾಲಾಶ್ರೀ ಅವರು ಪ್ರೆಸ್ನಲ್ಲಿ ನನ್ನೊಂದಿಗೆ ಒಂದು ಪ್ರಾಣಿ ನಟಿಸಿದರು ಕೂಡ ಅದು ಫೇಮಸ್ ಆಗುತ್ತೆ ಎಂದು ವಿವಾದಾತ್ಮಕ ಸ್ಟೇಟಸ್ ಅನ್ನು ನೀಡಿದ್ದಾರಂತೆ.
ಇದು ಎಷ್ಟರ ಮಟ್ಟಿಗೆ ಸುಳ್ಳು ಎಷ್ಟರ ಮಟ್ಟಿಗೆ ನಿಜ ಎಂಬುದು ಇಂದಿಗೂ ಕೂಡ ಪ್ರಶ್ನಾತೀತ. ಆದರೂ ಸಹ ಗಾಳಿಸುದ್ದಿಯ ಪ್ರಕಾರ ಹೋಗೋದಾದ್ರೆ ಈ ಹೇಳಿಕೆಯನ್ನು ಕೇಳಿ ವಿಷ್ಣುವರ್ಧನ್ ರವರು ಅಸಮಾಧಾನಗೊಂಡು ಇನ್ನು ಮುಂದೆ ನಾನು ಮಾಲಾಶ್ರೀ ಅವರೊಂದಿಗೆ ನಟಿಸುವುದಿಲ್ಲ ಅವರು ನನಗೆ ಚಿತ್ರಗಳಲ್ಲಿ ಎಂದಿಗೂ ಜೋಡಿ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರಂತೆ. ಇದು ಗಾಳಿಸುದ್ದಿಯ ಹೊರತು ನಿಜಾಂಶ ಎಂದು ಇಂದಿಗೂ ಕೂಡ ಸಾಬೀತಾಗಿಲ್ಲ.
ಇನ್ನೊಂದು ಗಾಳಿಸುದ್ದಿ ಪ್ರಕಾರ ಆ ಕಾಲದಲ್ಲಿ ವಿಷ್ಣುವರ್ಧನ್ ನಟನೆಯ ಲಯನ್ ಜಗಪತಿರಾವ್ ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಹೃದಯ ಹಾಡಿತು ಚಿತ್ರ ಏಕಕಾಲದಲ್ಲಿ ಚಿತ್ರೀಕರಣ ಗೊಳ್ಳುತ್ತಿದ್ದವು. ಹಾಗಾಗಿ ಈ ಎರಡು ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಒಂದೇ ಸಮಯಕ್ಕೆ ಬಂದು ಬಿಡುಗಡೆಯಾಗಿ ಯಾರಿಗೂ ಲಾಭವಿಲ್ಲ ದಂತಹ ಪರಿಸ್ಥಿತಿ ಉದ್ಭವ ವಾಗುವ ಸಂಭವವಿತ್ತು. ಆಗ ಸಾಹಸಸಿಂಹ ವಿಷ್ಣುವರ್ಧನ್ ರವರು ಉತ್ತಮ ಕುಚಿಕು ಗೆಳೆಯನಾದ ಅಂಬರೀಶ್ ಅವರಿಗೆ ಫೋನ್ ಮಾಡಿ ನನ್ನ ಚಿತ್ರ ಒಳ್ಳೆಯ ಅಂಶವನ್ನು ಹೊಂದಿದೆ ನಿನ್ನ ಚಿತ್ರ ಕೂಡ ಚೆನ್ನಾಗಿದೆ ಎರಡೂ ಒಂದೇ ಸಮಯಕ್ಕೆ ಬಂದರೆ ಯಾರಿಗೂ ಲಾಭವಿಲ್ಲದಂತಾಗುತ್ತದೆ.
ಹಾಗಾಗಿ ಚಿತ್ರವನ್ನು ಸ್ವಲ್ಪ ಮುಂದಕ್ಕೆ ಹಾಕಿಕೋ ಎಂದು ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಅಂಬರೀಶ್ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ನಾನು ನಮ್ಮ ನಿರ್ಮಾಪಕರಿಗೆ ಹೇಳಿ ಚಿತ್ರವನ್ನು ಮುಂದಕ್ಕೆ ಹಾಕಿಸುತ್ತೇನೆ ನೀನೇನು ಟೆನ್ಶನ್ ತಗೋಬೇಡ ಎಂದು ಹೇಳಿದ್ದರಂತೆ. ಆದರೆ ಬಿಡುಗಡೆಯಾಗ ಬೇಕಾದ ಸಂದರ್ಭದಲ್ಲಿ ಎರಡು ಒಟ್ಟಿಗೆ ರಿಲೀಸ್ ಆದವು. ಹಾಗೂ ಎರಡು ಮುಖಾಮುಖಿಯಲ್ಲಿ ಗೆದ್ದದ್ದು ಹೃದಯ ಹಾಡಿತು ಚಿತ್ರ. ಆಗ ಬೇಸರಗೊಂಡ ವಿಷ್ಣುವರ್ಧನ್ ರವರು ಅಂಬರೀಶ್ ಅವರಿಗೆ ಕರೆ ಮಾಡಿ ನಾನು ಹೇಳಿದ ಮೇಲೂ ಕೂಡ ಬಿಡುಗಡೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರಂತೆ.
ಆಗ ಅಂಬರೀಶ್ ಅವರು ನಾನು ನಮ್ಮ ನಿರ್ಮಾಪಕರಿಗೆ ಮಾತನಾಡಿ ಎಲ್ಲವನ್ನೂ ಕೂಡ ಸರಿ ಮಾಡಿದ್ದೆ ಆದರೆ ಮಾಲಾಶ್ರೀ ಅವರು ಹಟ ಮಾಡಿ ಈ ಚಿತ್ರವನ್ನು ಈಗಲೇ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಪ್ರೇಕ್ಷಕರು ನಿರೀಕ್ಷೆಯನ್ನು ಕಳೆದುಕೊಳ್ಳುತ್ತಾರೆ ಎಂದು ಒತ್ತಾಯ ಮಾಡಿ ಬಿಡುಗಡೆ ಮಾಡಿದ್ದರಂತೆ ಎಂದು ಅಂಬರೀಶ್ರವರ ವಿಷ್ಣುವರ್ಧನ್ ಅವರಿಗೆ ಪ್ರತಿಕ್ರಿಯಿಸಿದರು. ಇದನ್ನು ಕೇಳಿದ ವಿಷ್ಣುವರ್ಧನ್ ರವರು ಅಂದಿನಿಂದ ಮಾಲಾಶ್ರೀಯವರ ಬಗ್ಗೆ ಅಸಮಾಧಾನವನ್ನು ಹೊಂದಿದ್ದರು ಎಂದು ಗಾಳಿಸುದ್ದಿ ಹರಡಲಾಗುತ್ತದೆ.
ಆದರೆ ಅಧಿಕೃತವಾಗಿ ಇವೆರಡು ಕೇವಲ ಗಾಳಿಸುದ್ದಿಗಳು ಹೊರತು ಇದರ ಕುರಿತಂತೆ ನಾವು ಸತ್ಯ ಎಂದು ಹೇಳಲು ಒಂದು ಸಾಕ್ಷ್ಯ ಕೂಡ ಇಲ್ಲ. ಅಲ್ಲದೆ ವಿಷ್ಣುವರ್ಧನ್ ರವರು ಹೆಣ್ಣುಮಕ್ಕಳ ಕುರಿತಾಗಿ ಅಪಾರ ಗೌರವವನ್ನು ಉಳ್ಳವರು. ಹಾಗಾಗಿ ಅವರು ಇತರ ಮಾಡೋದಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂಬುದನ್ನು ನಾವು ಕಡಾಖಂಡಿತವಾಗಿ ಹೇಳಬಹುದು. ಇನ್ನು ಈ ಕುರಿತಂತೆ ಹಿಂದಿನ ಸಂದರ್ಶನವೊಂದರಲ್ಲಿ ಮಾಲಾಶ್ರೀ ಅವರು ಹೀಗೆ ಹೇಳಿದ್ದಾರಂತೆ ಅದೇನೆಂದು ನೋಡೋಣ ಬನ್ನಿ.
ಹಿಂದಿನ ಸಂದರ್ಶನವೊಂದರಲ್ಲಿ ಮಾಲಾಶ್ರೀ ಅವರು ನಾನು ವಿಷ್ಣುವರ್ಧನ್ ಸರ್ ಅವರೊಂದಿಗೆ ನಟನೆ ಮಾಡಬೇಕೆಂದು ತುಂಬಾ ಅಂದುಕೊಂಡಿದ್ದೆ. ಈ ಕುರಿತಂತೆ ವಿಷ್ಣುವರ್ಧನ್ ಸಾಂಗ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಕೆಲವೊಮ್ಮೆ ಕಥೆ ಚೆನ್ನಾಗಿ ಬಂದರೆ ಇಬ್ಬರ ಡೇಟ್ಸ್ ಹೊಂದಾಣಿಕೆ ಆಗುತ್ತಿರಲಿಲ್ಲ. ಡೇಟ್ಸ್ ಹೊಂದಾಣಿಕೆ ಆಗಬೇಕಾದರೆ ಚೆನ್ನಾಗಿರುವ ಸ್ಕ್ರಿಪ್ಟ್ ಬರುತ್ತಿರಲಿಲ್ಲ.
ಎಲ್ಲವೂ ಸರಿಯಾಗಿರಬೇಕಾದರೆ ನಿರ್ಮಾಪಕರು ನಿರ್ದೇಶಕರು ಹೀಗೆ ಒಂದೊಂದೇ ಸಮಸ್ಯೆಗಳು ಕಾಣಿಸುತ್ತಿದ್ದವು. ಚಿಕ್ಕಪುಟ್ಟ ಚಿಕ್ಕಪುಟ್ಟ ಸಮಸ್ಯೆಗಳಿಂದಾಗಿ ನಮ್ಮಿಬ್ಬರ ಸಿನಿಮಾ ಕನಸು ಕನಸಾಗೇ ಉಳಿದು ಹೋಯಿತು ಎಂದು ಮಾಲಾಶ್ರೀ ಅವರು ಹೇಳಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಯಾಕೆ ಮಾದೇಶ್ ಅವರು ಇಂದಿಗೂ ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿಲ್ಲ ಎಂಬುದನ್ನು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.