ತಮಿಳುನಾಡಿನ ಸ್ಟಾಲಿನ್ ಅಧಿಕಾರದಲ್ಲಿ ಆರಂಭವಾಯಿತು ಕರ್ನಾಟಕದ ಹವಾ, ನಡೆದ್ದಡೇನು ಗೊತ್ತೇ??

ತಮಿಳುನಾಡು ಸಿಎಂ ಸ್ಟಾಲಿನ್ ರವರ ವಿಶೇಷಾಧಿಕಾರಿಯಾಗಿ ಆಯ್ಕೆಯಾಗಿರುವ ಕನ್ನಡತಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದ ಅಧಿಕಾರಿಗಳು ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಲೇ ರಾಷ್ಟ್ರಾದ್ಯಂತ ಹೆಸರು ವಾಸಿಯಾಗಿದ್ದಾರೆ. ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳಲ್ಲಿಯೂ ಉನ್ನತ ಹುದ್ದೆಯಲ್ಲಿದ್ದುಕೊಂಡು ಉತ್ತಮ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಈಗ ಅಂತಹ ಇನ್ನೊಬ್ಬ ದಕ್ಷ ಅಧಿಕಾರಿಗೆ ಮತ್ತೊಂದು ಉತ್ತಮ ಹುದ್ದೆ ದೊರಕಿದೆ. ಇತ್ತಿಚೆಗಷ್ಟೇ ತಮಿಳುನಾಡಿನ ನೂತನ ಸಿಎಂ ಆಗಿ ಆಯ್ಕೆಯಾದ ಸ್ಟಾಲಿನ್ ರವರ ವಿಶೇಷ ಕರ್ತವ್ಯಧಿಕಾರಿಯಾಗಿ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರೆ. ಹೌದು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶಿಲ್ಪಾ ಪ್ರಸ್ತುತ ತಮಿಳುನಾಡಿನ ಸಿಎಂರವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ. ಶಿಲ್ಪಾರವರ ಹೆಚ್ಚಿನ ಮಾಹಿತಿ ಈ ಕೆಳಗಿದೆ.

ಶಿಡ್ಲಘಟ್ಟದ ಪೋಲಿಸ್ ಅಧಿಕಾರಿ ಪ್ರಭಾಕರ್ ರವರ ಮುದ್ದಿನ ಪುತ್ರಿ ಶಿಲ್ಪಾ ಜನಿಸಿದ್ದು 1981ರಲ್ಲಿ. ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದ ಶಿಲ್ಪಾ ಸರಸ್ವತಿ ಕಾನ್ವೆಂಟ್ ನಲ್ಲಿ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ , ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪಡೆಯುತ್ತಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆಯುತ್ತಾರೆ. ಆಗಲೇ ಸಿವಿಲ್ ಸರ್ವೀಸ್ ಪರ ಒಲವು ಹೊಂದಿದ ಶಿಲ್ಪಾ ಯುಪಿಎಸ್.ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಉತ್ತೀರ್ಣರಾಗುತ್ತಾರೆ. ಮೊದಲ ಪ್ರಯತ್ನದಲ್ಲೇ 46 ನೇ ರ್ಯಾಂಕ್ ಪಡೆದು ತಮಿಳುನಾಡು ಕೇಡರ್ ನ ತಿರುಚನಾಪಲ್ಲಿಯಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಮೂಲಕ ತಮ್ಮ ಕಾರ್ಯ ಆರಂಭಿಸುತ್ತಾರೆ.

ನಂತರ ತಮಿಳುನಾಡಿನ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾರೆ. ತಿರುಪತ್ತೂರ್ ನ ಸಬ್ ಕಲೆಕ್ಟರ್ ಆಗಿ ನಂತರ ಚೆನ್ನೈನ ಇಂಡಸ್ಟ್ರೀಸ್ ಗೈಡೆನ್ಸ್ ಕಾರ್ಪೋರೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಹ ಕರ್ತವ್ಯ ನಿರ್ವಹಿಸುತ್ತಾರೆ. ನಂತರ 2018 ರಲ್ಲಿ ತಿರುವನ್ವೇಲಿಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳುತ್ತಾರೆ. ಆ ಜಿಲ್ಲೆಯ ಅಂಗನವಾಡಿಗಳನ್ನ ವಿಶ್ವದರ್ಜೆಯ ಶ್ರೇಷ್ಠತೆಯಲ್ಲಿ ನಿರ್ಮಿಸುವ ಮೂಲಕ ಶಿಶು ಕಲ್ಯಾಣಕೇಂದ್ರಗಳಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ತಮ್ಮ ಮೂರು ವರ್ಷದ ಮಗಳನ್ನೇ ಸರ್ಕಾರಿ ಅಂಗನವಾಡಿಗೆ ಸೇರುವ ಮೂಲಕ ಎಲ್ಲರಿಗೂ ಮಾದರಿಯಾಗುತ್ತಾರೆ. ಆ ವಿಷಯ ಸಂಪೂರ್ಣ ತಮಿಳುನಾಡಿನಲ್ಲೇ ವಿಶೇಷ ಸಂಚಲನ ಮಾಡಿದ ಸುದ್ದಿಯಾಗಿತ್ತು. ಜಿಲ್ಲಾಧಿಕಾರಿಯೊಬ್ಬರ ಈ ಸರಳ ನಡೆಗೆ ಸಂಪೂರ್ಣ ತಮಿಳುನಾಡಿನ ಜನತೆ ಶಿಲ್ಪಾರನ್ನು ಮೆಚ್ಚಿಕೊಂಡಿತ್ತು. ಅದನ್ನ ಆಗ ಗಮನಿಸಿದ್ದ ಮುಖ್ಯಮಂತ್ರಿ ಸ್ಟಾಲಿನ್ ಈಗ ಶಿಲ್ಪಾರನ್ನ ತಮ್ಮ ತಂಡಕ್ಕೆ ಸೇರಿಸಿಕೊಂಡು, ಇವರನ್ನ ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ. ತನ್ನ ದಕ್ಷ ಹಾಗೂ ಪ್ರಾಮಾಣಿಕ ಕೆಲಸದ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಶಿಲ್ಪಾರವರ ಈ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.