ಪಾಂಡವರು ನಿರ್ಮಾಣ ಮಾಡಿದ್ದ ಇಂದ್ರಪ್ರಸ್ಥ ಈಗ ಯಾವ ಪ್ರದೇಶದಲ್ಲಿದೆ ಹಾಗೂ ಏನೆಂದು ಕರೆಯಲಾಗುತ್ತಿದೆ ಗೊತ್ತಾ??
ಪಾಂಡವರು ನಿರ್ಮಾಣ ಮಾಡಿದ್ದ ಇಂದ್ರಪ್ರಸ್ಥ ಈಗ ಯಾವ ಪ್ರದೇಶದಲ್ಲಿದೆ ಹಾಗೂ ಏನೆಂದು ಕರೆಯಲಾಗುತ್ತಿದೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಭಾರತ ಇತಿಹಾಸದಲ್ಲಿ ಅಥವಾ ಭಾರತ ಸಂಪ್ರದಾಯವನ್ನು ತೆಗೆದುಕೊಂಡರೆ ಅಲ್ಲಿ ಪುರಾಣ ಯುಗಗಳಿಗೆ ಬಹಳಷ್ಟು ಮಹತ್ವವಿದೆ. ಅದರಲ್ಲೂ ಮಹಾಭಾರತ ಕಾವ್ಯ ಪುರಾಣ ಭಾರತೀಯ ಜನರಲ್ಲಿ ಪವಿತ್ರ ಹಾಗೂ ಮಹತ್ವದ ಸ್ಥಾನವನ್ನು ಪಡೆದಿದೆ. ಇದರಲ್ಲಿ ಪಾಂಡವರು ಆಳಿದ ಇಂದ್ರಪ್ರಸ್ಥ ನಗರವನ್ನು ಬಹಳಷ್ಟು ಇತ್ತೀಚೆಗೆ ಸುದ್ದಿಗೆ ಬಂದಿದೆ. ಬನ್ನಿ ಅಂದಿನ ಇಂದ್ರಪ್ರಸ್ಥ ಇಲ್ಲಿನ ಯಾವ ಪ್ರದೇಶ ವಾಗಿರಬಹುದು ಎಂಬುದನ್ನು ನಿಮಗೆ ಹೇಳುತ್ತೇನೆ ಬನ್ನಿ.
ಹೌದು ಮಹಾಭಾರತ ಕಥೆ ನಿಮಗೆ ಗೊತ್ತೇ ಇದೆ. ಅಂದ ಮಹಾರಾಜ ಧೃತರಾಷ್ಟ್ರ ತನ್ನ ಮಕ್ಕಳಿಂದ ಪಾಂಡು ಹಾಗೂ ಕುಂತಿ ಮಾತೆಯ ಮಕ್ಕಳಾದ ಪಾಂಡವರು ದೂರ ಇರಲೆಂದು ಅದೆಷ್ಟು ಪ್ರಯತ್ನಮಾಡಿದರೂ ಗೊತ್ತಾ. ಅವರು ಅರಗಿನಮನೆಯಲ್ಲಿ ಇದ್ದಾಗ ಅಗ್ನಿಗಾಹುತಿ ಮಾಡಲು ನೋಡಿದ. ಆದರೆ ಭೀಮನ ಸಮಯ ಪ್ರಜ್ಞೆಯಿಂದಾಗಿ ಎಲ್ಲರೂ ಉಳಿದುಕೊಂಡು ಸುರಕ್ಷಿತವಾಗಿ ಪಾರಾದರು. ನಂತರ ಧೃತರಾಷ್ಟ್ರನು ಪರಿಸ್ಥಿತಿಗೆ ಸೋತು ಪಾಂಡವರಿಗೆ ಏನಾದರೂ ಕೊಡಲೇಬೇಕಾಗಿತ್ತು.
ಹಸ್ತಿನಾವತಿಯ ಬಂದ ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ನೀವು ರಾಜ್ಯಭಾರ ಮಾಡಿಕೊಂಡಿದೆ ಎಂಬುದಾಗಿ ಹೇಳಿದ. ಆಗ ಪಾಂಡವರು ಇಂದ್ರಪ್ರಸ್ಥಕ್ಕೆ ಹೋಗಿ ನೋಡಿದರೆ ಅದೊಂದು ಬರಡು ಭೂಮಿಯಾಗಿತ್ತು. ಸುತ್ತ ಕಾಡುಗಳಿಂದ ತುಂಬಿದ ಚಿಕ್ಕ ಪ್ರದೇಶವಾಗಿತ್ತು ಅಲ್ಲಿ ಯಾವುದೇ ಕೃಷಿ ಸಹಾಯಕಾರಿ ಭೂಮಿ ಇರಲಿಲ್ಲ. ಆದರೂ ಸಹ ಪಾಂಡವರು ಆ ಭೂಮಿಯನ್ನು ಸಮತಟ್ಟುಗೊಳಿಸಿ ಕೃಷಿ ಮಾಡಲು ಯೋಗ್ಯವಾದ ಸ್ಥಳವಾಗಿ ಮಾಡಿದರು. ನಂತರದ ದಿನಗಳಲ್ಲಿ ಎಲ್ಲಿ ನಾಗರಿಕತೆ ತಲೆಯೆತ್ತಿತು. ಜನರು ವ್ಯಾಪಾರ ಹಾಗೂ ನೆಲೆಸಲು ಅಲ್ಲಿ ಹೋಗಿ ಬರತೊಡಗಿದರು.
ನಂತರದ ದಿನಗಳಲ್ಲಿ ಇಂದ್ರಪ್ರಸ್ಥ ಪಾಂಡವರ ಆಳ್ವಿಕೆಯಲ್ಲಿ ಬಹಳ ಮಹತ್ವವನ್ನು ಪಡೆಯಿತು. ಇಂದ್ರಪ್ರಸ್ಥ ಮಯನಾ ಅರಮನೆಯಿಂದ ಇನ್ನಷ್ಟು ಖ್ಯಾತಿ ಪಡೆದಿದ್ದು ನೀವು ಮಹಾಭಾರತದಲ್ಲಿ ಓದಿ ಇರುತ್ತೀರಾ. ಕುರುಕ್ಷೇತ್ರದ ನಂತರ ಹಸ್ತಿನಾವತಿಯ ರಾಜ್ಯಾಭಿಷೇಕ ಪಡೆದುಕೊಂಡ ನಂತರ ಪಾಂಡವರು ಇಂದ್ರಪ್ರಸ್ಥ ವನ್ನು ಕ್ರಮೇಣವಾಗಿ ಮರೆತರು. ಯಾದವರ ಕಾಲಾನಂತರ ಶ್ರೀಕೃಷ್ಣನ ಮರಿ ಮೊಮ್ಮಗನಿಗೆ ಇಂದ್ರಪ್ರಸ್ಥ ವನ್ನು ಬಳುವಳಿಯಾಗಿ ಪಾಂಡವರು ನೀಡಿದರು. ಆತನು ಕೂಡ ದ್ವಾರಕೆಯನ್ನು ದುರಸ್ತಿ ಮಾಡಲು ಪ್ರಾರಂಭ ಮಾಡಿ ಇಂದ್ರಪ್ರಸ್ಥ ವನ್ನು ಮರೆತುಬಿಟ್ಟ.
ಪಾಂಡವರು ಆಳುತ್ತಿದ್ದ ಕಾಲದಲ್ಲಿ ಅಷ್ಟೇ ಇಂದ್ರಪ್ರಸ್ತಕ್ಕೆ ಒಂದು ಗೌರವ ಹಾಗೂ ಬೇಡಿಕೆ ಇತ್ತು. ನಂತರ ದಿನಗಳಲ್ಲಿ ಮಹಾನಗರ ಏನಾಯಿತೆಂಬುದು ಗೊತ್ತಾ ಬನ್ನಿ ಹೇಳುತ್ತೇವೆ ಇದು ಈಗ ಯಾವ ಹೆಸರಿನಲ್ಲಿ ಕರೆಯಲ್ಪಡುತ್ತಿದೆ ಎಂದು. ಹೌದು ಈ ನಗರವನ್ನು ಹುಡುಕಿ ಹೊರಟ ಉತ್ಖನನ ತಂಡ ದೆಹಲಿಯಲ್ಲಿ ಕೆಲ ಪ್ರದೇಶಗಳಲ್ಲಿ ಉತ್ಖನನ ಮಾಡಿತು. ಬಹಳಷ್ಟು ಶೋಧಿಸಿದ ನಂತರ ದೆಹಲಿಯಲ್ಲಿರುವ ಪುರಾನಾ ಕಿಲಾ ಎಂಬ ಕೋಟೆ ಇಂದ ಪ್ರಸಾದ ಇದ್ದ ಜಾಗ ಎಂಬ ಮಾಹಿತಿ ಹೊರಬಿದ್ದಿದೆ.
ಹೌದು ಮಹಾಭಾರತ ನಂತರ ಈ ಜಾಗದಲ್ಲಿ ಮೌರ್ಯರು ಹಾಗೂ ಮೊಘಲರು ಕೂಡ ಆಳ್ವಿಕೆ ನಡೆಸಿದ್ದರಂತೆ. ಕೆಲವು ಪುರಾವೆಗಳ ಪ್ರಕಾರ ಯಮುನಾ ನದಿಯಲ್ಲಿ ಇಂದು ಪ್ರಸ್ತುತ ಕೆಲ ಕೊಚ್ಚಿಹೋದ ಅವಶೇಷಗಳು ಇಲ್ಲಿ ಸಿಗುವುದರಿಂದ ಸುತ್ತ ಮುತ್ತಲಿನ ಪ್ರದೇಶ ಆಗಿನ ಮಹಾಭಾರತದ ಪಾಂಡವರ ರಾಜಧಾನಿಯಾದ ಇಂದ್ರಪ್ರಸ್ಥ ವೆಂದು ನಂಬಲಾಗಿದೆ. ಅಲ್ಲದೆ ದ್ವಾರಕನಗರ ಸುಳಿವು ಕೂಡ ಈ ಪುರಾನಾ ಕಿಲಾ ಇಂದ್ರಪ್ರಸ್ಥದ ಅವಶೇಷಗಳು ಎಂದು ಸಾಬೀತು ಮಾಡುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.