ಭಾರತೀಯರು ವೀಸಾ ಇಲ್ಲದೆ ತಿರುಗಾಡು ಬಹುದಾದ 10 ವಿದೇಶಿ ದೇಶಗಳು ಯಾವುದು ಗೊತ್ತೇ??
ಭಾರತೀಯರು ವೀಸಾ ಇಲ್ಲದೆ ತಿರುಗಾಡು ಬಹುದಾದ 10 ವಿದೇಶಿ ದೇಶಗಳು ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಭಾರತೀಯರು ಬಾಲ್ಯದಿಂದಲು ಪಾಠ ಪುಸ್ತಕಗಳಲ್ಲಿ ಕೇಳಿಕೊಂಡು ಬಂದಿರುವ ಒಂದು ಮಾತೆಂದರೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತು. ಓದುವುದನ್ನು ನಾವು ಬಾಲ್ಯದಿಂದಲೂ ಮಾಡಿಕೊಂಡು ಬಂದಿದ್ದೇವೆ. ಇನ್ನು ದೇಶ ವಿದೇಶ ಸುತ್ತುವ ಮಾತು ಇಂದಿಗೂ ಕೂಡ ಕನಸಾಗೇ ಉಳಿದಿದೆ. ಮೊದಲಿಗೆ ಕಾಸಿನ ಅಭವ ಎದುರಾಗುತ್ತಿದ್ದರು ನಂತರ ದಿನಗಳ ನಾವು ದುಡಿಯುವುದು ಪ್ರಾರಂಭಮಾಡಿದಮೇಲೂ ಹಣದ ಅರೇಂಜ್ಮೆಂಟ್ ಆದರೂ ಸಹ ಬೇರೆ ದೇಶಗಳಿಗೆ ಹೋಗಲು ವೀಸಾ ಪಾಸ್ಪೋರ್ಟ್ ದಾಖಲೆಗಳ ಜಂಜಾಟದಲ್ಲಿ ಬೇರೆ ದೇಶಕ್ಕೆ ಹೋಗುವ ಯೋಜನೆಯನ್ನು ಮರೆತುಬಿಡುತ್ತೇವೆ. ಬನ್ನಿ ಇಂದಿನ ವಿಷಯದಲ್ಲಿ ನಾವು ಯಾವ 10 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು ಎಂಬ ಕುರಿತಂತೆ ಹೇಳಲು ಹೊರಟಿದ್ದೇವೆ.
ನೇಪಾಳ ಮತ್ತು ಮಾರಿಷಿಯಸ್:ನೇಪಾಳ ನಮ್ಮ ನೆರೆಯ ದೇಶ. ಭಾರತದೊಂದಿಗೆ ಉತ್ತಮ ಸಂಬಂಧವನ್ನು ಕೂಡ ಹೊಂದಿದೆ. ಇಲ್ಲಿಗೆ ಹೋಗಲು ಕೂಡ ನಮಗೆ ವೀಸಾದ ಅವಶ್ಯಕತೆ ಇಲ್ಲ. ಕೇವಲ ಪ್ರವಾಸಿಗರಾಗಿ ಮಾತ್ರವಲ್ಲದೆ ನಾವು ಇಲ್ಲಿ ಬಿಸಿನೆಸ್ ಕೂಡ ಮಾಡಬಹುದು. ಇದಕ್ಕೆ ಬೇಕಾಗಿರುವುದು ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇತ್ಯಾದಿಗಳ ಚಿಕ್ಕ ದಾಖಲೆಗಳಷ್ಟೇ. ಇಲ್ಲಿಗೆ ಬರಲು ಇನ್ನೊಂದು ಮುಖ್ಯ ಲಾಭ ಎಂದರೆ ಇಲ್ಲಿನ ಕರೆನ್ಸಿ ಗೆ ಹೋಲಿಸಿದರೆ ನಮ್ಮ ಭಾರತದ ರೂಪಾಯಿ ಅಧಿಕ ಮೌಲ್ಯವನ್ನು ಹೊಂದಿದೆ. ಮಾರಿಷಿಯಸ್ ಇಲ್ಲಿನ ಸುಂದರ ಪ್ರವಾಸಿ ತಾಣಗಳು ಎಂಥವರನ್ನು ಕೂಡ ಆಕರ್ಷಿಸುತ್ತದೆ. ಇಲ್ಲಿಗೆ ಹೋಗಲು ಕೂಡ ನಿಮಗೆ ಕೇವಲ ಪಾಸ್ ಪೋರ್ಟ್ ಅವಶ್ಯಕತೆ ಮಾತ್ರ ಇದೆ. ಇಲ್ಲಿ ನಿಮಗೆ 60 ದಿನಗಳು ಇರಲು ಅವಕಾಶವಿರುತ್ತದೆ ಇಲ್ಲಿ ಅವಧಿಯಲ್ಲಿ ನೀವು ಬಿಸಿನೆಸ್ ಟ್ರಿಪ್ ಕೂಡ ಮಾಡಬಹುದು.
ಭೂತಾನ್ ಮತ್ತು ಹೈಟಿ:ಇನ್ನು ಮೂರನೆಯದಾಗಿ ಭೂತಾನ್ ಭೂತಾನ್ ಕೂಡ ಭಾರತದ ಸಿಕ್ಕಿಂ ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ದೇಶ. ಇಲ್ಲಿ ಹೋಗಲು ಕೂಡ ನಿಮಗೆ ಪಾಸ್ಪೋರ್ಟ್ ಹಾಗೂ ಇತರ ಚಿಕ್ಕಪುಟ್ಟ ಗುರುತು ಕಾರ್ಡ್ ನ ಅವಶ್ಯಕತೆ ಇರುತ್ತದೆ. ಇಲ್ಲಿ ಬುದ್ಧರ ದೇವಾಲಯಗಳು ನೋಡಲು ಇರುವ ಮುಖ್ಯ ತಾಣ. ಹೈಟಿ ಇದು ಏಷ್ಯಾ ಖಂಡದಲ್ಲಿ ಇಲ್ಲದಿದ್ದರೂ ಇಲ್ಲಿಗೆ ಹೋಗಲು ಕೂಡ ಭಾರತೀಯರಿಗೆ ವೀಸಾದ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಏರ್ಪೋರ್ಟ್ನಲ್ಲಿ ಇಳಿಯುತ್ತಿದ್ದಂತೆ $10 ಅನ್ನು ಪಾವತಿಸಿ ನೀವು ಈ ದೇಶದಲ್ಲಿ ಎಲ್ಲಿ ಬೇಕಾದರೂ ಸುತ್ತಾಡಬಹುದು. ಇಲ್ಲಿ ರೂಪಾಯಿ ಬೆಲೆ ಸಮತೋಲನ ವಾಗಿರುವುದರಿಂದ ನೀವು ಎಷ್ಟು ಬೇಕಾದರೂ ಕರ್ಚು ಮಾಡಬಹುದು. ಇದೊಂದು ಸುಂದರ ದ್ವೀಪ ತಾಣ.
ಜಮೈಕಾ ಮತ್ತು ಟ್ರಿನಿಡಾಡ್ ಅಂಡ್ ಟೊಬ್ಯಾಗೋ: ಇನ್ನು ಜಂಮೈಕ ಇದು ಕೂಡ ಒಂದು ಕೆರಿಬಿಯನ್ ದೇಶ. ಬೀಚ್ ಹಾಗೂ ಪರ್ವತ ಶ್ರೇಣಿಗಳನ್ನು ಒಳಗೊಂಡಿರುವ ಸುಂದರ ಪ್ರದೇಶ. ಇಲ್ಲಿ ಕೂಡ ಏರ್ಪೋರ್ಟ್ನಲ್ಲಿ ಇಳಿಸಿದಂತೆ ಜಮೈಕಾನ್ ಸರ್ಕಾರದ ಸ್ಟ್ಯಾಂಪನ್ನು ಒತ್ತಲಾಗುತ್ತದೆ. ನಿಮಗೆ 30 ದಿನಗಳ ಕಾಲ ವಿಸಾದಂತೆ ಕಾರ್ಯಮಾಡುತ್ತದೆ. ಟ್ರಿನಿಡಾಡ್ ಅಂಡ್ ಟೊಬ್ಯಾಗೋ ವೆನಿಜುವೆಲಾದಲ್ಲಿ ಇರುವ ಈ ದ್ವೀಪದೇಶದಲ್ಲಿ ನಾವು ವೀಸಾ ಇಲ್ಲದೆ ಹೋಗಬಹುದು. ಇದು ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೆ ಹೇಳಿಮಾಡಿಸಿದಂತಹ ದೇಶ. ಇಲ್ಲಿ ನಾವು 90 ದಿನಗಳ ಕಾಲ ಇರಬಹುದು ಆದರೆ ನಮ್ಮ ಬಳಿ ರಿಟರ್ನ್ ಟಿಕೆಟ್ ಮೊದಲ ಇರಬೇಕು.
ಈಕ್ವೆಡಾರ್ ದಕ್ಷಿಣ ಅಮೆರಿಕದ ಭಾಗದಲ್ಲಿರುವ ಈ ಪ್ರದೇಶಕ್ಕೆ ಹೋಗಲು ಭಾರತೀಯರಾದ ನಮಗೆ ಆರು ತಿಂಗಳುಗಳಿಗೆ ಅಧಿಕವಾಗಿ ವ್ಯಾಲಿಡಿಟಿ ಹೊಂದಿರುವ ಪಾಸ್ಪೋರ್ಟ್ ಅವಶ್ಯಕತೆ ಮಾತ್ರ ಇರೋದು. ಇದೊಂದಿದ್ದರೆ ನೀವು ಇಲ್ಲಿ 90 ದಿನಗಳ ಕಾಲ ಜಾಲಿಯಾಗಿ ಸುತ್ತಾಡಬಹುದು. ಇಲ್ಲಿ ಅಮೆಜಾನ್ ಕಾಡಿನ ಬಹುಭಾಗ ಗಳು ಹೊಂದಿರುವುದರಿಂದ ಇಲ್ಲಿ ನೀವು ಪ್ರಪಂಚದಲ್ಲೇ ಕಾಣಸಿಗದಂತಹ ಪ್ರಾಣಿ ಪಕ್ಷಿಗಳನ್ನು ನೋಡಬಹುದು.
ಮೈಕ್ರೋನೇಷ್ಯಾ ಮತ್ತು ಸರ್ಬಿಯಾ: ಇದು ಫೇಸ್ಬುಕ್ ಸಾಗರಗಳಲ್ಲಿ ಕಾಣಸಿಗುವ 40ಕ್ಕೂ ಹೆಚ್ಚಿನ ದ್ವೀಪಗಳನ್ನು ಒಳಗೊಂಡ ದೇಶ. ಈ ದೇಶದಲ್ಲಿ ಶುಚಿತ್ವ ಎನ್ನುವುದು ಪ್ರಮುಖ ಹಾಗೂ ಅಮೂಲ್ಯ ಅಂಶ. ಇಲ್ಲಿ ನಿಮ್ಮ ಪಾಸ್ಪೋರ್ಟ್ ಆರು ತಿಂಗಳಿಗೂ ಅಧಿಕ ಹೆಚ್ಚು ವ್ಯಾಲಿಡಿಟಿ ಯನ್ನು ಹೊಂದಿದ್ದರೆ 30 ದಿನಗಳವರೆಗೆ ರಾಜರಂತೆ ಸುತ್ತಾಡಬಹುದು. ಸರ್ಬಿಯಾ ಇದೊಂದೇ ದೇಶ ಅನ್ಸುತ್ತೆ ಯುರೋಪಿನಲ್ಲಿ ಭಾರತೀಯರು ವೀಸಾ ಇಲ್ಲದೆ ಸುತ್ತಾಡಬಹುದು. ಹೌದು ಪಾಸ್ಪೋರ್ಟ್ ಒಂದಿದ್ದರೆ ಸಾಕು ಇಲ್ಲಿ 30 ದಿನಗಳವರೆಗೆ ಇಲ್ಲಿನ ರೋಮನ್ ಶೈಲಿಯ ಶಿಲ್ಪಕಲೆಯನ್ನು ಹಾಗೂ ಅದ್ಭುತ ತಾಣಗಳನ್ನು ವೀಕ್ಷಿಸಬಹುದು.
ಇಂಡೋನೇಷ್ಯಾ ಇದು ಕೂಡ ಭಾರತದ ಸ್ನೇಹಿ ರಾಷ್ಟ್ರಗಳಲ್ಲಿ ಒಂದು. ಇಂಡೋನೇಷ್ಯಾ ಗೆ ಕೂಡ ಭಾರತೀಯರು ಕೇವಲ ಪಾಸ್ಪೋರ್ಟ್ ನಿಂದಾಗಿ 30 ದಿನಗಳವರೆಗೆ ಸುತ್ತಾಡಬಹುದು. ಇಲ್ಲಿನ ಜೀವಂತ ಜ್ವಾಲಾಮುಖಿ ಪರ್ವತಗಳು ಹಾಗೂ ಕೆಲ ವಿಶೇಷ ಪ್ರಭೇದದ ಪಕ್ಷಿಗಳನ್ನು ನೋಡಬಹುದು. ಸ್ನೇಹಿತರೆ ನೋಡಿದ್ರಲ್ಲ ಯಾವತ್ತು ದೇಶಗಳಿಗೆ ನಾವು ವೀಸಾದ ಅವಶ್ಯಕತೆ ಇಲ್ಲದೆ ಕೇವಲ ಪಾಸ್ಪೋರ್ಟ್ ಇಂದ ಮಾತ್ರ ಹೋಗಿ ಸುತ್ತಾಡಿಕೊಂಡು ಬರಬಹುದು ಎಂಬುದನ್ನು. ಈ ಮಾಹಿತಿ ನಿಮಗೆ ಮುಂದೆ ದೇಶ ವಿದೇಶಗಳಲ್ಲಿ ಪ್ರವಾಸ ಹೋಗುವಾಗ ಈ ಮಾಹಿತಿ ಕಾರ್ಯಕ್ಕೆ ಬರುವುದು ಎಂಬುದು ನಮ್ಮ ನಂಬಿಕೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.