ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಗೆ ಸವಾಲೊಡ್ಡಿರುವ ಆರ್ಸಿಬಿ ಆಟಗಾರ ಯಾರು ಗೊತ್ತಾ??
ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಗೆ ಸವಾಲೊಡ್ಡಿರುವ ಆರ್ಸಿಬಿ ಆಟಗಾರ ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಚೆಸ್ ಅಥವಾ ಚದುರಂಗ ಬುದ್ದಿವಂತರ ಆಟ. ಪ್ರತಿ ನಡೆಯಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡುವುದಲ್ಲದೇ, ಎದುರಾಳಿಯ ಪ್ರತಿ ನಡೆಗೂ ತಕ್ಕದಾದ ರಣನೀತಿ ರೂಪಿಸುತ್ತ, ಎದುರಾಳಿಯ ರಾಜನನ್ನ ಕಟ್ಟಿಹಾಕಲು ಅಸಾಧಾರಣ ಬುದ್ದಿಮತ್ತೆ ಇರಬೇಕು. ಭಾರತೀಯರು ಈ ಆಟದಲ್ಲಿ ಚತುರರು. ಹೆಮ್ಮೆಯ ಭಾರತೀಯ ವಿಶ್ವನಾಥನ್ ಆನಂದ್ ಚೆಸ್ ನಲ್ಲಿ ವಿಶ್ವ ಚಾಂಪಿಯನ್ ಆಟಗಾರ. ಹಲವಾರು ಭಾರಿ ಭಾರತಕ್ಕೆ ಪದಕಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಒಲಂಪಿಕ್ಸ್ ನಲ್ಲಿಯೂ ಸಹ ಚೆಸ್ ನ್ನು ಸೇರಿಸಬೇಕೆಂದು ಹಲವಾರು ವರ್ಷಗಳಿಂದ ಹಲವು ದೇಶಗಳು ಒತ್ತಾಯಿಸುತ್ತಿವೆ.
ಈ ಮಧ್ಯೆ ಕೋವಿಡ್ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲು ಹಲವಾರು ಮ್ಯೂಸಿಕ್ ಶೋ, ಕ್ರಿಕೇಟ್ , ಫುಟ್ಬಾಲ್ ಪಂದ್ಯಗಳು ನಡೆದಿರುವುದು ನೀವು ಗಮನಿಸಿರುತ್ತಿರಿ. ಆದರೇ ಈ ಭಾರಿ ಕೊಂಚ ಭಿನ್ನ ಎಂಬಂತೆ ಒಂದು ಕೋವಿಡ್ ಸೋಂಕಿತರ ಸ್ಮರಣಾರ್ಥ ಅನುದಾನ ಸಂಗ್ರಹಿಸಲು ವಿಶ್ವನಾಥನ್ ಆನಂದ್ ಚೆಸ್ ಪಂದ್ಯ ಆಡಲಿದ್ದಾರೆ. ಆದರೇ ಇವರ ಎದುರಾಳಿ ಮಾತ್ರ ಆರ್ಸಿಬಿ ತಂಡದ ಆಟಗಾರ ಎನ್ನುವುದು ವಿಶೇಷಗಳಲ್ಲೊಂದು.
ಕ್ರಿಕೇಟರ್ ಆಗಿರುವ ಈ ಆಟಗಾರ, ಕ್ರಿಕೇಟರ್ ಆಗುವ ಮುಂಚೆ ಚೆಸ್ ಆಡುತ್ತಿದ್ದರಂತೆ. ರಾಜ್ಯ ಹಾಗೂ ದೇಶವನ್ನು ಸಹ ಪ್ರತಿನಿಧಿಸಿದ್ದರಂತೆ. 21 ವರ್ಷದೊಳಗಿನ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರಂತೆ. ನಂತರ ಕ್ರಿಕೇಟ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿ ಒಬ್ಬ ರಿಸ್ಟ್ ಸ್ಪಿನ್ನರ್ ಆಗಿ ತಮ್ಮ ಕರಿಯರ್ ಆರಂಭಿಸಿದರು. ಆದರೇ ಎಲ್ಲಿಯೂ ಅವಕಾಶ ಸಿಗದೇ ಕ್ರಿಕೇಟ್ ಗೂ ವಿದಾಯ ಹೇಳಿ ತಂದೆಯ ಬಿಸಿನೆಸ್ ನಲ್ಲಿ ತೊಡಗಿಕೊಳ್ಳಬೇಕು ಎಂದು ಯೋಚಿಸುತ್ತಿರುವಾಗಲೇ, ಆರ್ಸಿಬಿ ತಂಡ ಅವಕಾಶ ನೀಡಿತಂತೆ. ಅಲ್ಲಿಂದ ಈಗ ಈ ಆಟಗಾರ ಚಾಂಪಿಯನ್. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಿಕೇಟ್ ತೆಗೆದು, ಭಾರತಕ್ಕೆ ಹಲವಾರು ಮ್ಯಾಚ್ ಗಳನ್ನು ಗೆಲ್ಲಿಸಿದ್ದಾರೆ.
ಅಷ್ಟಕ್ಕೂ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಯುಜವೇಂದ್ರ ಚಾಹಲ್. ಹೌದು ಯುಜಿ ಚಾಹಲ್ ಕ್ರಿಕೇಟರ್ ಆಗುವುದಕ್ಕಿಂತ ಮುನ್ನ ಒಬ್ಬ ಉತ್ತಮ ಚೆಸ್ ಪ್ಲೇಯರ್ ಅಂತೆ. ಹಾಗಾಗಿ ಕೋವಿಡ್ ನಿಂದ ಸಂಕಷ್ಟಕ್ಕೆಗೊಳಗಾಗಿರುವ ಕುಟುಂಬಗಳ ಸಹಾಯಕ್ಕೆ ನಿಧಿ ಸಂಗ್ರಹಿಸುವ ವಿಚಾರದಲ್ಲಿ ಇದೇ ಜೂನ್ 13 ರಂದು ವಿಶ್ವನಾಥನ್ ಆನಂದ್ ಜೊತೆ ಚೆಸ್ ಪಂದ್ಯವಾಡಲಿದ್ದಾರೆ. ಯುಜಿಗೆ ಆಲ್ ದ ಬೆಸ್ಟ್ ಹೇಳೋಣ. ಕೋವಿಡ್ ಸಂತ್ರಸ್ತರಿಗೆ ಚೆಸ್ ಆಡುವ ಮೂಲಕ ಸಹಾಯ ಮಾಡಲು ಮುಂದಾಗಿರುವ ಯುಜವೇಂದ್ರ ಚಾಹಲ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ.