ಜಗತ್ತಿನ ಅತಿ ದೊಡ್ಡ ವೆಬ್ ಸೈಟ್ ವಿಕಿ ಪೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ಟಾಪ್ ನಾಲ್ಕು ನಟರು ಯಾರ್ಯಾರು ಗೊತ್ತೇ??
ಜಗತ್ತಿನ ಅತಿ ದೊಡ್ಡ ವೆಬ್ ಸೈಟ್ ವಿಕಿ ಪೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ಟಾಪ್ ನಾಲ್ಕು ನಟರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಮ್ಮ ಸ್ಟಾರ್ ನಟರು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಭಾಷೆಗೂ ಮೀರಿ ದೇಶಾದ್ಯಂತ ಪಸರಿಸಿದ್ದಾರೆ. ಈಗ ಅವರನ್ನು ಕೇವಲ ಕನ್ನಡಿಗರು ಮಾತ್ರವಲ್ಲದೆ ದೇಶಾದ್ಯಂತ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಹಾಗೂ ವಿಶ್ವಾದ್ಯಂತ ಅಭಿಮಾನಿಗಳು ಕೂಡಾ ಅವರನ್ನು ಇಷ್ಟಪಡುತ್ತಾರೆ ಹಾಗೂ ಫಾಲೋ ಮಾಡುತ್ತಾರೆ. ಈಗ ಇಂದು ನಾವು ಹೇಳ ಹೊರಟಿರುವ ವಿಷಯವೇನೆಂದರೆ ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟರ ಜನಪ್ರಿಯತೆಯ ಕುರಿತಂತೆ. ಹೌದು ಗೂಗಲ್ನ ವಿಕಿಪೀಡಿಯಾದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾವ ಸ್ಥಳ ಎಷ್ಟು ಹೆಚ್ಚು ವೀಕ್ಷಣೆಯನ್ನು ಹೊಂದಿದ್ದಾರೆ ಎಂದು ಹೇಳುತ್ತೇನೆ ಬನ್ನಿ. ಈ ಲಿಸ್ಟ್ ನಲ್ಲಿ ನಾಲ್ಕು ಜನ ಸ್ಟಾರ್ ನಟರಿದ್ದು ಇದು 2020ರ ಡಾಟಾದ ಲಿಸ್ಟ್ ಆಗಿದೆ.
ನಾಲ್ಕನೇ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಆಲ್-ರೌಂಡರ್ ನಟನಾಗಿ ಕಾಣಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದ ಬಾರ್ಡರ್ ಜಿಲ್ಲೆಗಳಲ್ಲಿ ಅಪ್ಪು ಅವರ ಹವಾ ತುಂಬಾನೇ ಇದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಹಿಂಬಾಲಕರನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಂದಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ವಿಕಿಪೀಡಿಯಾದಲ್ಲಿ 2020ರಲ್ಲಿ 562642 ವೀಕ್ಷಣೆಗಳು ಸಿಕ್ಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಂದೆ ಚಿತ್ರರಂಗದಲ್ಲಿ ಖ್ಯಾತ ನಟನಾಗಿದ್ದರು ಸಹ ಅವರ ಹೆಸರನ್ನು ಉಪಯೋಗಿಸದೆ ತನ್ನ ಸ್ವಂತ ಪರಿಶ್ರಮದಿಂದ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಕನ್ನಡದ ಮಾಸ್ ಅಭಿಮಾನಿಗಳ ಆರಾಧ್ಯ ದೇವರು. ಕನ್ನಡ ಚಿತ್ರರಂಗದ ಹಲವಾರು ದಾಖಲೆಗಳ ಒಡೆಯ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ರಲ್ಲಿ ಇವರು ಕೂಡ ಒಬ್ಬ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿಕಿಪೀಡಿಯಾದ ವೀಕ್ಷಣೆ 647804. ಇನ್ನು ಇವರು ಮೂರನೇ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್ ತಂದೆ ಖ್ಯಾತ ಬಿಜಿನೆಸ್ ಮ್ಯಾನ್ ಆಗಿದ್ದರೂ ಸಹ ತನ್ನ ಸ್ವಂತ ಪರಿಶ್ರಮದಿಂದ ನಟನಾ ಕ್ಷೇತ್ರಕ್ಕೆ ಬಂದು ಈಗ ಕೇವಲ ಕನ್ನಡಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತದ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ಬಹುಬೇಡಿಕೆ ಪ್ಯಾನ್ ಇಂಡಿಯಾ ನಟನಾಗಿ ಕಾಣಿಸಿಕೊಂಡಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಈಗಾಗಲೇ ಕಿಚ್ಚ ಸುದೀಪ್ ರವರು ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ತನ್ನ ಅಭಿನಯದ ಮೂಲಕ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಆರಾಧ್ಯ ದೈವವಾಗಿದ್ದಾರೆ ನಟ ಕಿಚ್ಚ ಸುದೀಪ್. ಇನ್ನು ಇವರ ವಿಕಿಪೀಡಿಯಾ ವೀಕ್ಷಣೆ 671274. ಇನ್ನು ಇವರು ಎರಡನೇ ಸ್ಥಾನದಲ್ಲಿದ್ದಾರೆ.
ಮೊದಲನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಯಾವ ಫಿಲ್ಮಿ ಬ್ಯಾಗ್ರೌಂಡ್ ಇಲ್ಲದೆ middle-class ಪರಿವಾರದಿಂದ ಗಾಂಧಿನಗರದಲ್ಲಿ ಕಟೌಟ್ ನಿಲ್ಲಿಸಬೇಕೆಂಬ ಆಸೆಯನ್ನು ಹೊತ್ತು ಬೆಂಗಳೂರಿಗೆ ಬಂದ ಯಶ್ ಅಲಿಯಾಸ್ ನವೀನ್ ಗೌಡ ತಮ್ಮ ಸ್ವಂತ ಪರಿಶ್ರಮ ಹಾಗೂ ಅವಮಾನಗಳನ್ನು ಎಲ್ಲವನ್ನೂ ಮೆಟ್ಟಿನಿಂತು ಕನ್ನಡ ಚಿತ್ರರಂಗದ ರಾಕಿ ಬಾಯ್ ಆಗಿ ಈಗ ಮಿಂಚುತ್ತಿದ್ದಾರೆ. ಪ್ರತಿಯೊಂದು ಚಿತ್ರದ ಮೂಲಕ ಕನ್ನಡ ಚಿತ್ರರಂಗ ದ ನಿರೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದಕ್ಷಿಣ ಭಾರತದಾದ್ಯಂತ ಯೂತ್ ಐಕಾನ್ ಆಗಿ ಮಿಂಚುತ್ತಿದ್ದಾರೆ. ಅದರಲ್ಲೂ ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಕೇವಲ ಭಾರತವಲ್ಲದೆ ವಿದೇಶದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇನ್ನು ಇವರ ವಿಕಿಪೀಡಿಯ ವೀಕ್ಷಣೆ 1339442. ಇನ್ನು ಇವರು ಕನ್ನಡ ಚಿತ್ರರಂಗದ ನಂಬರ್ ಒನ್ ವಿಕಿಪೀಡಿಯ ವೀಕ್ಷಣ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ದಾಖಲೆಯ ಮತ್ತದ ಅಭಿಮಾನಿಗಳು ಹಾಗೂ ಫಾಲವರ್ಸ್ ಅನ್ನು ಹೊಂದಿದ್ದಾರೆ.
ನೋಡಿದ್ರಲ್ಲ ಸ್ನೇಹಿತರೇ ವಿಕಿಪೀಡಿಯ 2020 ಅನ್ವಯ ಕನ್ನಡ ಚಿತ್ರರಂಗದಲ್ಲಿ ಯಾರು ಅತ್ಯಂತ ಹೆಚ್ಚು ವೀಕ್ಷಣೆಯನ್ನು ಗಳಿಸಿಕೊಂಡಿದ್ದಾರೆ ಎಂಬುದನ್ನು ನಾವು ನಿಮಗೆ ಸವಿವರವಾಗಿ ಹೇಳಿ ಕೊಟ್ಟಿದ್ದೇವೆ. ನಿಮ್ಮ ನಟ ಎಷ್ಟನೇ ಸ್ಥಾನದಲ್ಲಿದ್ದಾರೆ ಹಾಗೂ ಎಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.