ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸೂಪರ್ ಹಿಟ್ ಚಿತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಹಲವಾರು ದಾಖಲೆಗಳನ್ನು ಇಂದಿಗೂ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿದೆ. 1934 ರಲ್ಲಿ ಪ್ರಾರಂಭವಾದ ಸತಿಸುಲೋಚನ ದಿಂದ ಹಿಡಿದು ನನ್ನ ಮೊನ್ನೆ ಬಿಡುಗಡೆಯಾದ ಚಿತ್ರಗಳವರೆಗೂ ಕೂಡ ಕನ್ನಡ ಚಿತ್ರರಂಗ ಹಂತಹಂತವಾಗಿ ಮೇಲೆದ್ದು ಬಂದು ರೆಕಾರ್ಡ್ ಗಳ ಮೇಲೆ ರೆಕಾರ್ಡ್ ಗಳನ್ನು ಸೃಷ್ಟಿಸುತ್ತಿದೆ. ಇಂದಿನ ಮಾಹಿತಿಯಲ್ಲಿ ನಾವು ಕನ್ನಡ ಚಿತ್ರರಂಗದಲ್ಲಿ ಚಿತ್ರಮಂದಿರಗಳಲ್ಲಿ ಅತ್ಯಂತ ಹೆಚ್ಚು ಪ್ರದರ್ಶನ ಕಂಡ ಚಿತ್ರಗಳ ಕುರಿತಂತೆ ನಿಮಗೆ ಹೇಳಲಿದ್ದೇವೆ ಬನ್ನಿ.

ಕಸ್ತೂರಿ ನಿವಾಸ ಡಾ ರಾಜಕುಮಾರ್ ಹಾಗೂ ಆರತಿ ಕಾಮನಲ್ಲಿ ಮೂಡಿಬಂದ ಕಸ್ತೂರಿ ನಿವಾಸ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯನ್ನು ರಚಿಸಿತು. ಸುಮಾರು ಹದಿನಾಲ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ 700 ಕ್ಕೂ ಹೆಚ್ಚಿನ ದಿನಗಳ ಪ್ರದರ್ಶನ ಕಂಡಿತ್ತು. ಇನ್ನು ಬಂಗಾರದ ಮನುಷ್ಯ ಅಣ್ಣಾವ್ರ ಅದ್ಭುತ ನಟನೆ ಈ ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಹಳ್ಳಿಯ ಕೃಷಿಯ ಮಹತ್ವದ ಕುರಿತಂತೆ ತಿಳಿಸುವ ಚಿತ್ರ ಬಂಗಾರದ ಮನುಷ್ಯ ಆಗಿತ್ತು. ಈ ಚಿತ್ರ ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇದು ಭಾರತದ ಪ್ರತಿಷ್ಠಿತ ಮ್ಯಾಗಜಿನ್ ಪತ್ರಿಕೆ ಫೋರ್ಬ್ಸ್ ನ ಪಟ್ಟಿಯಲ್ಲಿ ಭಾರತದ 25 ಬೆಸ್ಟ್ ಚಿತ್ರಗಳು ಒಳಗೆ ಶಾಮಿಲ್ ಆಗಿತ್ತು.

ನಾಗರಹಾವು ಡಾ ವಿಷ್ಣುವರ್ಧನ್ ರವರ ಚೊಚ್ಚಲ ಚಿತ್ರ ನಾಗರಹಾವು 1972 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬರೋಬ್ಬರಿ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿತು. ಇನ್ನು ಶಂಕರ್ ಗುರು ಅಣ್ಣಾವ್ರು ತ್ರಿಪಾತ್ರದಲ್ಲಿ ನಟಿಸಿ 1978 ರಲ್ಲಿ ಬಿಡುಗಡೆಯಾದ ಚಿತ್ರ ಶಂಕರ್ ಗುರು. ಅಂದಿನ ಕಾಲಕ್ಕೆ ಬಾಕ್ಸಾಫೀಸ್ ನಲ್ಲಿ ಅತ್ಯಂತ ಹೆಚ್ಚು ಗಳಿಸಿಕೊಂಡ ಚಿತ್ರವಾಗಿತ್ತು. ಸುಮಾರು ಚಿತ್ರಮಂದಿರಗಳಲ್ಲಿ ಒಂದುವರೆ ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.

ಪ್ರೇಮಲೋಕ ಕನ್ನಡ ಚಿತ್ರರಂಗದ ಶೋಮ್ಯಾನ್ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಹಾಗೂ ಅವರೊಂದಿಗೆ ಕನ್ನಡ ಚಿತ್ರರಂಗದ ದಿಗ್ಗಜರು ಅತಿಥಿ ಪಾತ್ರದಲ್ಲಿ ನಟಿಸಿದ ಚಿತ್ರವಾಗಿತ್ತು. ಪ್ರೇಮಲೋಕ ಚಿತ್ರ 1987 ರಲ್ಲಿ ಬಿಡುಗಡೆಯಾಗಿ ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇನ್ನು ನಂಜುಂಡಿ ಕಲ್ಯಾಣ ರಾಘವೇಂದ್ರ ರಾಜಕುಮಾರ್ ನಟನೆಯ ನಂಜುಂಡಿ ಕಲ್ಯಾಣ ಬಿಡುಗಡೆಯಾಗಿ ಬರೋಬ್ಬರಿ 500 ದಿನಗಳಕಾಲ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಇದು 1989 ರಲ್ಲಿ ಬಿಡುಗಡೆಯಾದ ಅಂತಹ ಚಿತ್ರ.

ಜೀವನ ಚೈತ್ರ ಇದು ಅಣ್ಣಾವ್ರು ಚಿತ್ರರಂಗದಿಂದ ಮೂರು ವರ್ಷಗಳ ಕಾಲ ವಿರಾಮ ತೆಗೆದುಕೊಂಡು ನಂತರ ಮಾಡಿದಂತ ಚಿತ್ರ. ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಚಿತ್ರ ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತಂತೆ. ಇನ್ನು ಓಂ 1995 ರಲ್ಲಿ ಬಿಡುಗಡೆಯಾದ ಅಂತಹ ಶಿವಣ್ಣ ನಟನೆಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಆರು ನೂರಕ್ಕೂ ಹೆಚ್ಚು ಬಾರಿ ಬಿಡು ಬಿಡುಗಡೆಯಾದ ದಾಖಲೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಬರೆಯಿತು. ಇದರ ಸ್ಯಾಟಲೈಟ್ ಹಕ್ಕು ಕೂಡ ದಾಖಲೆ ಮೊತ್ತಕ್ಕೆ ಸೇಲ್ ಆಯಿತು.

ಜನುಮದ ಜೋಡಿ ಮತ್ತೊಮ್ಮೆ ಶಿವಣ್ಣ ನಟನೆಯ ಚಿತ್ರ ಜನುಮದಜೋಡಿ 1996 ರಲ್ಲಿ ಬಿಡುಗಡೆಯಾಗಿ ಕನ್ನಡಿಗರ ಮನಗೆದ್ದಿತ್ತು. ಈ ಚಿತ್ರ ಒಂದು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಬರೋಬ್ಬರಿ 10 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ವಾಗಿ ಹೊರಹೊಮ್ಮಿತು. ಯಜಮಾನ ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಹಲವಾರು ದಿಗ್ಗಜರು ನಟಿಸಿ ದಂತಹ ಈ ಚಿತ್ರ ಒಂದು ವರ್ಷಗಳ ಕಾಲ ಹೌಸ್ ಫುಲ್ ಪ್ರದರ್ಶನ ಕಂಡಂತಹ ದಾಖಲೆಯನ್ನು ನಿರ್ಮಿಸಿತು. ಹಾಗೂ ಬಾಕ್ಸಾಫೀಸ್ ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿ ಇಂಡಸ್ಟ್ರಿ ಹಿಟ್ ಪಟ್ಟವನ್ನು ಕೂಡ ಪಡೆದಿತ್ತು.

ಚಂದ್ರ ಚಕೋರಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಚಿತ್ರ ಚಿತ್ರಮಂದಿರಗಳಲ್ಲಿ 500ಕ್ಕೂ ಹೆಚ್ಚು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಾಣುವುದರ ಮೂಲಕ ಇತಿಹಾಸ ಸೃಷ್ಟಿಸಿತು. ಕರಿಯ ನಮ್ಮ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಗೆ ಒಂದು ಒಳ್ಳೆಯ ಬ್ರೇಕ್ ಕೊಟ್ಟಂತಹ ಚಿತ್ರ. ಈ ಚಿತ್ರ ಚಿತ್ರಮಂದಿರಗಳಲ್ಲಿ 800ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು 15ಕ್ಕೂ ಹೆಚ್ಚು ಬಾರಿ ಬಿಡುಗಡೆಯಾಗಿತ್ತು. ಆಪ್ತಮಿತ್ರ ಡಾ ವಿಷ್ಣುವರ್ಧನ್ ಹಾಗೂ ಸೌಂದರ್ಯ ರವರ ನಟನೆಯಲ್ಲಿ ಮೂಡಿಬಂದಂತ ಚಿತ್ರ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇದರಲ್ಲಿ ಮುಖ್ಯವಾದ ಅಂತಹ ಆಕರ್ಷಣೆಯಾಗಿದ್ದು ಸೌಂದರ್ಯ ರವರ ನಾಗವಲ್ಲಿ ಪಾತ್ರ.

ಇನ್ನು ಜೋಗಿ ತಾಯಿಯ ಕುರಿತಂತಹ ಅತ್ಯುನ್ನತ ಅರ್ಥವನ್ನು ನೀಡಿದಂತಹ ಚಿತ್ರ. ಶಿವಣ್ಣ ಟನೆಯ ಜೋಗಿ ಚಿತ್ರ 2005 ರಲ್ಲಿ ಬಿಡುಗಡೆಯಾಗಿ 60ಕ್ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಪೂರೈಸುವ ಮೂಲಕ ಶತದಿನೋತ್ಸವದ ಕ್ರೇಜ್ ಅನ್ನು ಸ್ಯಾಂಡಲ್ವುಡ್ನಲ್ಲಿ ಹುಟ್ಟುಹಾಕಿದೆ. ಮುಂಗಾರುಮಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಒಂದೊಳ್ಳೆ ಸ್ಥಾನವನ್ನು ನೀಡಿದಂತಹ ಚಿತ್ರ ಮುಂಗಾರು ಮಳೆ. ಇದು ತಯಾರಾದದ್ದು ಕೇವಲ 2 ಕೋಟಿ ಬಜೆಟ್ ನಲ್ಲಿ ಆದರೂ ಇದು ಗಳಿಸಿದ್ದು ಬರೋಬ್ಬರಿ 75 ಕೋಟಿ. 2006 ರಲ್ಲಿ ಬಿಡುಗಡೆಯಾದ ಅಂತಹ ಮುಂಗಾರುಮಳೆ ಬರೋಬ್ಬರಿ 865 ದಿನಗಳಿಗಿಂತಲೂ ಹೆಚ್ಚಿನ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು.

ಮಿಲನ ಇವತ್ತಿನವರೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮಲ್ಟಿಪ್ಲೆಕ್ಸ್ ಕಿಂಗ್ ಎನ್ನುತ್ತಾರೆ ಎಂದರೆ ಅದಕ್ಕೆ ಮಿಲನ ಚಿತ್ರವೇ ಕಾರಣ. ಹೌದು ಕೆಲವರು ಚಿತ್ರಗಳು ಚಿತ್ರ ಮಂದಿರಗಳಲ್ಲಿ ಶತದಿನೋತ್ಸವವನ್ನು ಪೂರೈಸಿದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಮಿಲನ ಚಿತ್ರ ಮಲ್ಟಿಪ್ಲೆಕ್ಸ್ ನಲ್ಲಿ 600 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನ ಕಂಡಿತ್ತು. ನೋಡಿದ್ರಲ್ಲ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ಚಿತ್ರಗಳ ಪಟ್ಟಿ. ಇದರಲ್ಲಿ ನಿಮ್ಮ ನೆಚ್ಚಿನ ಚಿತ್ರ ಯಾವುದೆಂದು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಪ್ಪದೆ ತಿಳಿಸಿ.

Facebook Comments

Post Author: Ravi Yadav