ಸೋನು ಸೂದ್ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿದ್ದ ಹುಮಾ ಖುರೇಷಿಗೆ ಸೋನು ಕೊಟ್ಟ ಉತ್ತರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಸೋನು ಸೂದ್ ತೆರೆಯ ಮೇಲೆ ಖಳನಟರಾದರೂ, ಅವರು ಭಾರತ ಕೋವಿಡ್ ಸಂಕಷ್ಟದಲ್ಲಿದ್ದಾಗ ಅನೇಕ ರೀತಿಯಲ್ಲಿ ಬಡ ಜನರಿಗೆ ಸಹಾಯ ಮಾಡಿದ್ದರು. ಎರಡನೇ ಅಲೆಯಲ್ಲಿಯೂ ಸಹ ಹಲವಾರು ಜನರಿಗೆ ಆಕ್ಸಿಜನ್, ಐಸಿಯು ಬೆಡ್, ರೆಮೆಡಿಸಿವರ್ ಇಂಜೆಕ್ಷನ್ ಒದಗಿಸುವ ಮೂಲಕ ಹಲವು ರೀತಿಯಲ್ಲಿ ನೊಂದವರಿಗೆ ನೆರವಾಗಿದ್ದರು.

ನಂತರ ಸೋಸು ಸೂದ್ ರ ಈ ಮಾನವೀಯತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಹೊಗಳಿಕೆಗಳು ಸಹ ಹುಟ್ಟಿಕೊಂಡಿದ್ದವು. ಹಲವಾರು ಜನ ಸೋನು ಸೂದ್ ರನ್ನ ಮನತುಂಬಿ ಪ್ರಶಂಸಿಸಿದ್ದರು. ಈ ಮಧ್ಯೆ ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ , ಸೋನು ಸೂದ್ ಭಾರತದ ಪ್ರಧಾನಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಹಲವಾರು ಪರ-ವಿರೋಧಗಳು ಸಹ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗಿದ್ದವು.

ಆದರೇ ಈ ಬಗ್ಗೆ ಎಂದು ಮೌನಮುರಿಯದ ಸೋನು ಸೂದ್ ಈಗ ಮೌನ ಮುರಿದು ಪ್ರತಿಕ್ರಿಯಿಸಿದ್ದಾರೆ.
ಹುಮಾ ಖುರೇಷಿ ಹಾಗೇ ಯೋಚಿಸಿರುವುದಕ್ಕೆ ನಾನು ಧನ್ಯವಾದ ತಿಳಿಸುತ್ತೆನೆ. ಆದರೇ ನಾನು ಆ ಜವಾಬ್ದಾರಿ ಹೊರಲು ನಾನಿನ್ನು ಬಹಳ ಸಣ್ಣವನು, ಹಾಗೂ ಈಗಿನ ನಮ್ಮ ಪ್ರಧಾನಿಗಳು ಬಹಳ ಸಮರ್ಥರಿದ್ದಾರೆ, ಇಷ್ಟು ಬೇಗ ಅಂತಹ ಚರ್ಚೆ ನಡೆಯುವುದು ಅಪ್ರಸ್ತುತ. ಸದ್ಯ ಪ್ರಪಂಚ ಈ ಕೋರೋನಾದಿಂದ ಮುಕ್ತವಾದರೇ ಸಾಕು ಎಂದು ಹೇಳಿದ್ದಾರೆ. ಅಂದ ಹಾಗೆ ಸೋನು ಸೂದ್ ಪ್ರಧಾನಿಯಾಗಬೇಕು ಎಂಬ ಕೂಗು ಕೇಳಿರುವುದು ಈ ಮೊದಲೇನಲ್ಲ. ಇದಕ್ಕೂ ಹಿಂದೆ ಸೋನು ಸೂದ್ ಸಹಾಯ ಮಾಡಿದ ವಿಡಿಯೋಗಳು ವೈರಲ್ ಆದಾಗ ಸಹ ಈ ಕೂಗು ಕೇಳಿ ಬಂದಿತ್ತು. ಒಟ್ಟಿನಲ್ಲಿ ಸೋನು ಸೂದ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav