ವಿಶ್ವದ ಟಾಪ್ ಶ್ರೇಷ್ಠ ಟೆಸ್ಟ್ ಬೌಲರ್ ಗಳನ್ನು ಆಯ್ಕೆ ಮಾಡಿದ ಲೆಜೆಂಡ್ ಇಯಾನ್ ಚಾಪೆಲ್, ಯಾರ್ಯರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕ್ರಿಕೇಟ್ ದಂತಕಥೆ ಇಯಾನ್ ಚಾಪೆಲ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿ , ಯಶಸ್ವಿ ನಾಯಕರಾಗಿಯೂ ಕೆಲಸ ಮಾಡಿದ್ದರು. ಈಗ ಅವರು ಸದ್ಯ ವಿಶ್ವದ ಶೇಷ್ಠ ಟಾಪ್ ಐವರು ಟೆಸ್ಟ್ ಬೌಲರ್ ಗಳನ್ನ ಹೆಸರಿಸಿದ್ದಾರೆ. ಅವರು ಯಾರು ಎಂಬುದನ್ನ ತಿಳಿಯೋಣ ಬನ್ನಿ. ಟಾಪ್ 5 ಸ್ಥಾನದಲ್ಲಿ ಮಹಮದ್ ಶಮಿ – ಬಂಗಾಳ ಎಕ್ಸ್ ಪ್ರೆಸ್, ಲಾಲಾ ಖ್ಯಾತಿಯ ಶಮಿ ವಿಶ್ವದ ಐದನೇ ಶ್ರೇಷ್ಠ ಟೆಸ್ಟ್ ಬೌಲರ್ ಆಗಿದ್ದಾರೆ. ಹೊಸ ಚೆಂಡಿನಲ್ಲಿ ಅದ್ಬುತ ಇನ್ ಸ್ವಿಂಗರ್ ಗಳು ಹಾಗೂ ಹಳೆ ಚೆಂಡಿನಲ್ಲಿ ಉತ್ತಮ ರಿವರ್ಸ್ ಸ್ವಿಂಗ್ ಗಳ ಮೂಲಕ ಮನೆ ಮಾತಾಗಿರುವ ಮಹಮದ್ ಶಮಿಯವರಿಗೆ ಚಾಪೆಲ್ ಐದನೇ ಸ್ಥಾನ ನೀಡಿದ್ದಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ಇಶಾಂತ್ ಶರ್ಮಾ – ಭಾರತದ ಲಂಬೂ ವೇಗಿ ಇಶಾಂತ್ ಗೆ ಚಾಪೆಲ್ 4 ನೇ ಸ್ಥಾನ ನೀಡಿದ್ದಾರೆ. ಸತತವಾಗಿ ಒಂದೇ ಲೈನ್ ನಲ್ಲಿ ಬೌಲಿಂಗ್ ಮಾಡುವ ಮೂಲಕ, ಬ್ಯಾಟ್ಸ್ ಮನ್ ಗಳಿಗೆ ಕಾಡುವ ಸಾಮರ್ಥ್ಯವನ್ನ ಇಶಾಂತ್ ಶರ್ಮಾ ಹೊಂದಿದ್ದಾರೆ. ಇನ್ನು 3 ನೇ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ – ಭಾರತದ ಯಶಸ್ವಿ ಆಫ್ ಸ್ಪಿನ್ನರ್ ಗೆ ಚಾಪೆಲ್ 3 ನೇ ಸ್ಥಾನ ನೀಡಿದ್ದಾರೆ. ಕೇರಂ ಬಾಲ್, ದೂಸ್ರಾ, ಟಾಪ್ ಸ್ಪಿನ್, ಫಿಫ್ಲರ್ ಮುಂತಾದ ಅಸ್ತ್ರಗಳು ಅಶ್ವಿನ್ ರವರ ಬತ್ತಳಕೆಯಲ್ಲಿವೆ.

ಇನ್ನು ಟಾಪ್ 2 ನೇ ಸ್ಥಾನದಲ್ಲಿ ಕಗಿಸೋ ರಬಾಡ – ಸೌತ್ ಆಫ್ರಿಕಾದ ಸ್ಪೀಡ್ ಸ್ಟಾರ್. ತಮ್ಮ ವೇಗ ಹಾಗೂ ಹೆಚ್ಚುವರಿ ಬೌನ್ಸ್ ನಿಂದ ಬ್ಯಾಟ್ಸಮನ್ ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಇನ್ನು ಮೊದಲನೇ ಸ್ಥಾನದಲ್ಲಿ ಪ್ಯಾಟ್ ಕಮಿನ್ಸ್ – ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ರವರಿಗೆ ನಂ 1 ಸ್ಥಾನವನ್ನ ಚಾಪೆಲ್ ನೀಡಿದ್ದಾರೆ. ಇನ್ ಸ್ವಿಂಗ್, ಔಟ್ ಸ್ವಿಂಗ್ ಬೌನ್ಸರ್ ಎಸೆತಗಳ ಮೂಲಕ, ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವ ಕಮಿನ್ಸ್ ವಿಶ್ವದ ಶ್ರೇಷ್ಠ ಟೆಸ್ಟ್ ಬೌಲರ್ ಆಗಿದ್ದಾರೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ನಿಮ್ಮ ಆಯ್ಕೆಯ ವಿಶ್ವದ ಶ್ರೇಷ್ಠ ಟಾಪ್ 5 ಟೆಸ್ಟ್ ಬೌಲರ್ ಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav